Breaking ; ಕೃಷಿ ಹೊಂಡಕ್ಕೆ ಕೆಮಿಕಲ್ ಹಾಕಿ ಸ್ಫೋಟ ಪ್ರಕರಣ, ಡ್ರೋನ್ ಪ್ರತಾಪ್‌ಗೆ ರಿಲೀಫ್..!

22ರ ಹರೆಯದಲ್ಲಿ 600ಕ್ಕೂ ಅಧಿಕ ಡ್ರೋನ್‌ಗಳನ್ನು ತಯಾರಿಸಿರುವುದಾಗಿ ಹೇಳಿ ಪ್ರಚಾರವನ್ನು ಪಡೆದು ಆ ನಂತರ ಕರುನಾಡಿನೆಲ್ಲೆಡೆ ಅಪಹಾಸ್ಯಕ್ಕೆ ಗುರಿಯಾದವರು ಡ್ರೋನ್ ಪ್ರತಾಪ್. ಆ ನಂತರ ಬಿಗ್ ಬಾಸ್ ಮನೆಗೆ ಹೋಗಿ ಡ್ಯಾಮೇಜ್ ಆಗಿದ್ದ ಇಮೇಜ್‌ನ ಸರಿ ಮಾಡಿಕೊಂಡು ಬಂದ ಡ್ರೋನ್ ಪ್ರತಾಪ್, ಮೊನ್ನೆ ಮೊನ್ನೆ ಜನಕಲೋಟಿ ಗ್ರಾಮದ ಬಳಿ ಇರುವ ಕೃಷಿ ಹೊಂಡದಲ್ಲಿ ರಾಸಾಯನಿಕವನ್ನು ಬಳಸಿ ಸ್ಟೋಟ ಮಾಡಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಡ್ರೋನ್ ಪ್ರತಾಪ್ ವಿರುದ್ಧ ಮಧುಗಿರಿ ಮಿಡಿಗೇಶಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ವೈರಲ್ ಆದ ವಿಡಿಯೋ ಆಧಾರದ ಮೇಲೆ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಿದ್ದರು. ಆ ನಂತರ ಪ್ರಕರಣದ ವಿಚಾರಣೆಯನ್ನು ಮಾಡಿದ್ದ ತುಮಕೂರಿನ ಮಧುಗಿರಿ ಜೆಎಂಎಫ್​ಸಿ ಕೋರ್ಟ್​ ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್​ಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಈಗ ಈ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ ರಿಲೀಫ್ ಸಿಕ್ಕಿದೆ. ಮಧುಗಿರಿ ನಾಲ್ಕನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಜಾಮೀನು ಸಿಕ್ಕಿದೆ.

Bigg Boss contestant DronePrathap got bail in the viral sodium explosion experiment case

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X