For Quick Alerts
  ALLOW NOTIFICATIONS  
  For Daily Alerts

  ಗೆಳೆಯನನ್ನು ಕ್ಷಮಿಸಿ, ನಾನೂ ಕ್ಷಮೆ ಕೇಳುತ್ತೇನೆ: ದಿವಾಕರ್

  |

  ಬಿಗ್‌ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ದಿವಾಕರ್ ಫಿಲ್ಮೀಬೀಟ್ ಫೇಸ್‌ಬುಕ್‌ ಲೈವ್ ನಲ್ಲಿ ಇಂದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.

  ಕೊರೊನಾ, ವೈಯಕ್ತಿಕ ಜೀವನ, ಉದ್ಯೋಗ, ಸಿನಿಮಾ, ಗೆಳೆಯರು, ಬಿಗ್‌ಬಾಸ್ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ ದಿವಾಕರ್, ತಮ್ಮ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಹಾಗೂ ಅವರ ಕೋಲುಮಂಡೆ ಹಾಡಿನ ವಿವಾದದ ಬಗ್ಗೆಯೂ ಮಾತನಾಡಿದರು.

  ಆಪ್ತ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲಿದ್ದಾರೆ ದಿವಾಕರ್ಆಪ್ತ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲಿದ್ದಾರೆ ದಿವಾಕರ್

  'ಕೋಲುಮಂಡೆ' ಹಾಡು ದಿವಾಕರ್‌ ಗೆ ಇಷ್ಟವಾಯಿತಂತೆ. ಆದರೆ ದೃಶ್ಯ ಸಂಯೋಜನೆಯಲ್ಲಿ ತುಸು ಎಡವಿದ್ದಾರೆ ಎಂದು ನೇರವಾಗಿ ಹೇಳಿದರು ದಿವಾಕರ್. ಜನಕ್ಕೂ ಅದು ಅಷ್ಟಾಗಿ ಇಷ್ಟವಾಗಿಲ್ಲವೆಂಬುದನ್ನು ಒಪ್ಪಿಕೊಂಡರು.

  ಬೇಕೆಂದು ಆತ ಹೀಗೆ ಮಾಡಿಲ್ಲ: ದಿವಾಕರ್

  ಬೇಕೆಂದು ಆತ ಹೀಗೆ ಮಾಡಿಲ್ಲ: ದಿವಾಕರ್

  'ಚಂದನ್ ಶೆಟ್ಟಿ ನನ್ನ ಆತ್ಮೀಯ ಗೆಳೆಯ ಆತನ ಮನಸ್ಸು ನಾನು ಬಲ್ಲೆ, ಉದ್ದೇಶಪೂರ್ವಕವಾಗಿ, ಯಾರಿಗೋ ಬೇಸರ ತರಿಸಲು ಆತ ಹೀಗೆ ಮಾಡುವವನಲ್ಲ. ಇದು ಅಚಾತುರ್ಯದಿಂದ ಆಗಿಬಿಟ್ಟಿದೆ. ಯಾರೂ ಸಹ ಉದ್ದೇಶಪೂರ್ವಕವಾಗಿ ಸುಡುವ ಬಿಸಿನೀರಲ್ಲಿ ಕೈ ಇಡುತ್ತಾರೆಯೇ' ಎಂದು ಪ್ರಶ್ನಿಸಿದರು ದಿವಾಕರ್.

  ಚಂದನ್ ಶೆಟ್ಟಿಯನ್ನು ಕ್ಷಮಿಸಿಬಿಡಿ: ದಿವಾಕರ್

  ಚಂದನ್ ಶೆಟ್ಟಿಯನ್ನು ಕ್ಷಮಿಸಿಬಿಡಿ: ದಿವಾಕರ್

  ಚಂದನ್ ಶೆಟ್ಟಿಯಿಂದ ಅರಿಯದೇ ತಪ್ಪು ಆಗಿಬಿಟ್ಟಿದೆ. ಆತನನ್ನು ಕ್ಷಮಿಸಿಬಿಡಿ. ಆತ ಒಳ್ಳೆಯ ಸಂಗೀತಗಾರ, ಸಾಕಷ್ಟು ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ. ಮುಂದೆಯೂ ಕೊಡಲಿದ್ದಾರೆ. ಕನ್ನಡದ ಹಾಡುಗಳು ವಿದೇಶಗಳಲ್ಲಿಯೂ ಗುನುಗುವಂತೆ ಮಾಡಿದ್ದಾನೆ ಆತ. ಹಾಗಾಗಿ ಆತನನ್ನು ಕ್ಷಮಿಸಿಬಿಡಿ ಆತನ ಪರವಾಗಿ ನಾನೂ ಸಹ ಕ್ಷಮೆ ಕೇಳುತ್ತೇನೆ ಎಂದರು ದಿವಾಕರ್.

  ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?

  ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ

  ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ

  ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಬಗ್ಗೆ ಸಾಕಷ್ಟು ಮಾತನಾಡಿದ ದಿವಾಕರ್, ನಾಳೆ (ಸೆಪ್ಟೆಂಬರ್ 17) ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ತಾವು ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೆ, ತಮ್ಮ ಮೂರು ತಿಂಗಳು ಮುದ್ದು ಮಗಳಿಗೆ ಹೆಸರಿಟ್ಟಿದ್ದು ಸಹ ಚಂದನ್ ಎಂಬುದನ್ನು ಹೇಳಿದರು ದಿವಾಕರ್.

  TRP ಗೋಸ್ಕರ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದ್ದು ಇಷ್ಟ ಆಗಿಲ್ಲ| Raksh | Filmibeat Kannada
  ಕೋಲುಮಂಡೆ ಹಾಡು ವಿವಾದಕ್ಕೆ ಕಾರಣವಾಗಿತ್ತು

  ಕೋಲುಮಂಡೆ ಹಾಡು ವಿವಾದಕ್ಕೆ ಕಾರಣವಾಗಿತ್ತು

  ಚಂದನ್ ಶೆಟ್ಟಿಯ ರ್ಯಾಪ್ ಹಾಡು 'ಕೋಲುಮಂಡೆ' ವಿವಾದ ಸೃಷ್ಟಿಸಿತ್ತು. ಹಾಡಿನಲ್ಲಿ ಶರಣೆ ಸಂಕವ್ವನಿಗೆ, ಮಲೆ ಮಾದೇಶ್ವರನಿಗೆ ಅಪಮಾನ ಎಸಗಲಾಗಿದೆ ಎಂದು ಹಲವರು ಆರೋಪಿಸಿದರು. ಈ ಬಗ್ಗೆ ಚಂದನ್ ಶೆಟ್ಟಿ ಕ್ಷಮೆ ಸಹ ಕೇಳಿದರು.

  ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರುವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು

  English summary
  Bigg Boss Divakar asks sorry in behalf of Chandan Shetty for his controversial song kolumande.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X