ಶಿವಣ್ಣ ಜೊತೆ ಬರ್ತಡೇ ಆಚರಿಸಿಕೊಂಡ ಬಿಗ್ ಬಾಸ್ ದಿವಾಕರ್

By Bharath Kumar

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ರನ್ನರ್ ಅಪ್ ಸ್ಪರ್ಧಿ ದಿವಾಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತನ್ನ ಮಾತು, ತನ್ನಲ್ಲಿದ್ದ ಪ್ರತಿಭೆಯ ಮೂಲಕ ಕನ್ನಡಿಗರ ಮನಗೆದ್ದ ಸೇಲ್ಸ್ ಮ್ಯಾನ್ ದಿವಾಕರ್ ಅವರು ಇಂದು 29ನೇ ವರ್ಷದ ಜನುಮದಿನವನ್ನ ಆಚರಿಸಿಕೊಂಡಿದ್ದಾರೆ.

ಈ ವರ್ಷದ ಹುಟ್ಟುಹಬ್ಬವನ್ನ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಸೆಲೆಬ್ರೆಟ್ ಮಾಡಿಕೊಂಡಿರುವುದು ವಿಶೇಷ. ಹೌದು, ಬರ್ತಡೇ ದಿನ ಶಿವಣ್ಣ ಅವರನ್ನ ಭೇಟಿ ಮಾಡಿದ ದಿವಾಕರ್, ಸೆಂಚುರಿ ಸ್ಟಾರ್ ಗೆ ಸಿಹಿ ತಿನಿಸಿ ಖುಷಿ ಪಟ್ಟರು. ದಿವಾಕರ್ ಗೆ ಶಿವಣ್ಣ ಕೂಡ ಸ್ವೀಟ್ ತಿನಿಸಿ ಒಳ್ಳೆಯದಾಗಲಿ ಎಂದು ಶುಭಕೋರಿದರು.

Bigg boss diwakar celebrates his 29th birthday

ಸದ್ಯ, ಸಿನಿಮಾರಂಗಕ್ಕೆ ಪ್ರವೇಶ ಮಾಡಿರುವ ದಿವಾಕರ್ ಹೊಸ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ದಿವಾಕರ್ ನಟಿಸುತ್ತಿದ್ದಾರೆ.

ಈಗಾಗಲೇ ಈ ಚಿತ್ರಕ್ಕಾಗಿ ತಯಾರಾಗಿರುವ ದಿವಾಕರ್, ಭರ್ಜರಿಯಾಗೊಂದು ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದರು. ಚಿಲ್ಲಂ ಚಿತ್ರದ ಜೊತೆಗೆ ಮತ್ತಷ್ಟು ಸಿನಿಮಾಗಳಿಂದ ಅವಕಾಶ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ 'ಟಗರು' ಚಿತ್ರದ ಶತದಿನದ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್ 'ಕವಚ' ಹಾಗೂ 'ರುಸ್ತುಂ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bigg boss kannada season 5 runner up contestant diwakar celebrates his 29th birthday with Hatrick hero shiva rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X