ಸುದೀಪ್ ಮುಂದೆ ದಿವಾಕರ್ ಘರ್ಜನೆ: ಏನಿದು ಟ್ವಿಸ್ಟ್.!
Recommended Video

'ಬಿಗ್ ಬಾಸ್' ಖ್ಯಾತಿಯ ದಿವಾಕರ್ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ರೇಸ್' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದು, ಈಗಾಗಲೇ ಮೇಕಿಂಗ್ ನಿಂದ ಈ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿದೆ.
ಇದೀಗ, ದಿವಾಕರ್ ಅವರ ಹೊಸ ಗೆಟಪ್ ವೊಂದು ಸದ್ದು ಮಾಡುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದೆ ಬಿಗ್ ಬಾಸ್ ದಿವಾಕರ್ ಘರ್ಜಿಸಿದ್ದಾರೆ. ಥೇಟ್ ಸುದೀಪ್ ಅವರಂತೆ, ಅವರದ್ದೇ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿರುವ ದಿವಾಕರ್ ಕುತೂಹಲ ಮೂಡಿಸಿದ್ದಾರೆ.
ಸುದೀಪ್ ಎದುರಲ್ಲಿ ಅಂದ್ರೆ, ನೇರವಾಗಿ ಅಲ್ಲ. ಕಿಚ್ಚನ ಪೋಸ್ಟರ್ ಮುಂದೆ ದಿವಾಕರ್ ಮಿಂಚಿದ್ದಾರೆ. 'ರೇಸ್' ಚಿತ್ರದ ಫೈಟ್ ವೊಂದರಲ್ಲಿ ಸುದೀಪ್ ಪೋಸ್ಟರ್, ಕಟೌಟ್ ಗಳನ್ನ ಬಳಸಿಕೊಂಡು ಅವರದ್ದೇ ಸ್ಟೈಲ್ ನಲ್ಲಿ ಫೈಟ್ ಮಾಡಿದ್ದಾರಂತೆ. ಇದನ್ನ ಗಮನಿಸಿದ್ರೆ, ಚಿತ್ರದಲ್ಲಿ ದಿವಾಕರ್ ಅವರು ಸುದೀಪ್ ಅಭಿಮಾನಿನಾ.? ಎಂಬ ಕುತೂಹಲ ಕಾಡುತ್ತಿದೆ. ಅದನ್ನ ಸಿನಿಮಾದಲ್ಲಿ ನೋಡಬೇಕಿದೆ.

ಹೇಮಂತ್ ಕೃಷ್ಣ ಎಂಬುವವರು 'ರೇಸ್' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಸ್.ವಿ.ಆರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಾಜ್ ಕಿರಣ್, ಸ್ವಾಮಿನಾಥನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈ ರವಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ಚಕ್ರವರ್ತಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ಇನ್ನುಳಿದಂತೆ 'ರೇಸ್' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಡಬ್ಬಿಂಗ್ ಕೆಲಸ ಆರಂಭವಾಗಿದ್ದು, ಆದಷ್ಟು ಬೇಗ ತೆರೆಮೇಲೆ ಬರಲಿದೆ.


Click it and Unblock the Notifications











