ಬಹುಭಾಷಾ ಚಿತ್ರದಲ್ಲಿ ಖಾಕಿ ತೊಟ್ಟ 'ಬಿಗ್ ಬಾಸ್' ದಿವಾಕರ್
'ಬಿಗ್ ಬಾಸ್' ಖ್ಯಾತಿಯ ದಿವಾಕರ್ ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಚ್ಚು ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯ, ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ಬಣ್ಣ ಹಚ್ಚಿರುವ ದಿವಾಕರ್ ಈಗ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿದ್ದು, ಇದೇ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ, ದಿವಾಕರ್ ಅವರ ಪೊಲೀಸ್ ಪಾತ್ರದ ಫೋಟೋಶೂಟ್ ಹಾಗೂ ಮೇಕಿಂಗ್ ಸ್ಟಿಲ್ ಬಹಿರಂಗವಾಗಿದ್ದು, ಸಖತ್ ಸ್ಟೈಲಿಶ್ ಹಾಗೂ ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ದೇಹ ದಂಡಿಸಿರುವ ದಿವಾಕರ್ ವರ್ಕೌಟ್ ಕೂಡ ಮಾಡುತ್ತಿದ್ದಾರೆ.

ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ಮರ್ಡರ್ ಮಿಸ್ಟ್ರಿಯನ್ನ ಬೇದಿಸುವ ತನಿಖಾಧಿಕಾರಿಯಾಗಿ ದಿವಾಕರ್ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಮುಖ್ಯಪಾತ್ರಗಳಿದ್ದು, ಇವುಗಳಲ್ಲಿ ದಿವಾಕರ್ ಅವರು ಪೊಲೀಸ್ ಅಧಿಕಾರಿ ಪಾತ್ರ ತುಂಬಾ ಮುಖ್ಯವಾಗಿದೆ. ಇಡೀ ಸಿನಿಮಾದಲ್ಲಿ ದಿವಾಕರ್ ಇರಲಿದ್ದಾರೆ.
ಈ ಮೊದಲೇ ಹೇಳಿದಂತೆ ಇದು ತೆಲುಗು ಮತ್ತು ಕನ್ನಡದಲ್ಲಿ ಸಿದ್ಧವಾಗುತ್ತಿದೆ. ಸುಮಾರು 19 ವರ್ಷಗಳಿಂದ ಸಿನಿ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೇಮಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣ ವಂಶಿ ಅವರ ಬಳಿ ಹಲವು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಬಾಲಕೃಷ್ಣ, ಜೂನಿಯರ್ ಎನ್.ಟಿ.ಆರ್, ನಾನಿ ಸೇರಿದಂತೆ ಹಲವು ನಾಯಕ ನಟರ ಜೊತೆ ಕೆಲಸ ಮಾಡಿರುವ ಅನುಭವವಿದೆ.

ಇನ್ನುಳಿದಂತೆ ಎಸ್.ವಿ.ಆರ್ ಪ್ರೊಡಕ್ಷನ್ ನಲ್ಲಿ ದ್ವಿಭಾಷ ಸಿನಿಮಾ ತಯಾರಾಗುತ್ತಿದ್ದು, ಚಕ್ರಿ ಎಂಬುವವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನು ಹತ್ತು ದಿನಗಳ ಕಾಲ ಚಿತ್ರೀಕರಣ ಮಾಡಿದರೆ ಬಹುತೇಕ ಟಾಕಿ ಪೋಷನ್ ಮುಗಿಯುತ್ತೆ. ಸದ್ಯ, ಬೆಂಗಳೂರು ಸುತ್ತಾಮುತ್ತ ಶೂಟಿಂಗ್ ನಡೆಯುತ್ತಿದೆ. ಅದಾದ ಬಳಿಕ ಹೈದ್ರಾಬಾದ್ ನಲ್ಲಿ ಚಿತ್ರದ ಸಾಂಗ್ ಹಾಗೂ ಫೈಟ್ ಶೂಟಿಂಗ್ ಮಾಡಲಾಗುತ್ತೆ.


Click it and Unblock the Notifications











