ಚಾಲೆಂಜಿಂಗ್ ಸ್ಟಾರ್ ಗೆ 'ಬಾಸ್ ಬಾಸ್ ' ಎಂದ ಈಶಾನಿ ; ಹಾಡು ಕೇಳಿದ್ರಾ ..?

ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದವರು ರ್ಯಾಪರ್ ಈಶಾನಿ. ಗೊಂದಲದ ಮಾತುಗಳಿಂದ ಕೆಲವೊಮ್ಮೆ ಪೇಚಿಗೆ ಸಿಲುಕಿ, ನಿರ್ದಿಷ್ಟ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಈಶಾನಿ ಸದ್ಯಕ್ಕೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ. ಹಿಂದೆ ಹೇಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಹಾಡೊಂದನ್ನ ಬಿಡುಗಡೆ ಮಾಡಿದ್ದಾರೆ. ದರ್ಶನ್ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ.

ದರ್ಶನ್ ಅವರ ಸಿನಿಮಾಗಳ ಹೆಸರನ್ನೇ ಬಳಿಸಿಕೊಂಡು, ಈಶಾನಿ ತಾವೇ ಖುದ್ದು ಕಷ್ಟ ಪಟ್ಟು, ಇಷ್ಟ ಪಟ್ಟು ಸಾಹಿತ್ಯವನ್ನ ಬರೆದಿದ್ದಾರೆ. ಹಾಡಿನ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಗುಣ ಹಾಗೂ ವಿನಯವಂತಿಕೆಗೂ ಕೂಡ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನ ಮಾಡಿದ್ದಾರೆ.

Bigg Boss Eshaani Gifted Special Song To Darshan

ಕೇವಲ ಹಾಡನ್ನ ಬರೆಯೋದು ಅಷ್ಟೇ ಅಲ್ಲ, ಖುದ್ದು ಈಶಾನಿ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ. ಡಿ.ಜೆ.ಲೆಥಲ್ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈ ರ್ಯಾಪ್ ಸಾಂಗ್ ಗೆ ಬೇಕಿದ್ದ ಸಕಲ ವ್ಯವಸ್ಥೆಗಳನ್ನ ವೆಂಕಟ್ ವಿಎಸ್ ಮಾಡಿದ್ದರೆ, ಗಿರಿ ಗೌಡ ಈ ಹಾಡನ್ನ ನಿರ್ದೇಶಿಸಿದ್ದಾರೆ.

Bigg Boss Eshaani Gifted Special Song To Darshan

ಈಶಾನಿ ರ್ಯಾಪ್ ಸಾಂಗ್ ಗೆ ಭಕ್ತಗಣ ಕೇಕೆ

ದರ್ಶನ್ ಅವರ ಸರಳತೆ, ವಿನಯತೆ.. ನಡೆದು ಬಂದ ಹಾದಿ ಹಾಗೂ ದಾಖಲೆಗಳಿಗೆ ನಾಂದಿ ಹಾಡಿದ್ದನ್ನೆಲ್ಲ, ಎರಡು ನಿಮಿಷದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನ ಮಾಡಿರುವ ಈಶಾನಿ ಗೆ ಅಭಿನಂದನೆಗಳ ಮಹಾಪೂರ ಹರಿದು ಬರ್ತಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಯುಟ್ಯೂಬ್ ನಲ್ಲಿ ಈ ಹಾಡಿನ ಕೆಳಗೆ ಕಮೆಂಟ್ ಗಳ ಮೂಲಕ ದರ್ಶನ್ ಅವರ ಅಭಿಮಾನಿಗಳು ಈಶಾನಿ ಅವರ ಬೆನ್ನು ತಟ್ಟುತ್ತಿದ್ದಾರೆ. ನಿಮ್ಮ ಮೇಲಿದ್ದ ಅಭಿಪ್ರಾಯ ಬದಲಾಗಿದೆ ಇಂಥಹದ್ದೊಂದು ಅತ್ಯದ್ಭುತ ಹಾಡನ್ನ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಕೂಡ ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ. ನೀವೂ ಈ ಹಾಡನ್ನ ನೋಡಿಲ್ಲ ಅಂದರೆ ಒಮ್ಮೆ ನೋಡಿ. ನಿಮಗೂ ಹಾಡು ಇಷ್ಟವಾದರೂ ಆಗಬಹುದು.

More from Filmibeat

English summary
Bigg Boss Kannada 10 Fame Rapper Eshani Gifted Special Gift To Darshan On On The Occasion Of His Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X