ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ಗುಡ್ ಬೈ ಹೇಳಿದ ನಟ ಶೈನ್ ಶೆಟ್ಟಿ
ಕನ್ನಡದ ಕೆಲ ಸಿನಿಮಾ ತಾರೆಯರು ಸಿನಿಮಾ ಜೊತೆ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿರುವವರು ಇದ್ದಾರೆ. ನಟ ಶೈನ್ ಶೆಟ್ಟಿ ಚಿಕ್ಕದಾಗಿ ಶುರು ಮಾಡಿದ್ದ ಗಲ್ಲಿ ಕಿಚನ್ ನೋಡ ನೋಡುತ್ತಲೇ ದೊಡ್ಡ ರೆಸ್ಟೋರೆಂಟ್ ಆಗಿ ಬೆಳೆದಿತ್ತು.
ಗಲ್ಲಿ ಚಿಕನ್ ಎರಡು ಬ್ರಾಂಚ್‌ಗಳು ನಗರದಲ್ಲಿವೆ. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ನಟ ಶೈನ್ ಶೆಟ್ಟಿ ಗುಡ್‌ಬೈ ಹೇಳಿದ್ದಾರೆ. ಬಿಗ್‌ಬಾಸ್ ಕನ್ನಡ ಸೀನಸ್ -7 ವಿನ್ನರ್ ಕೂಡ ಆಗಿದ್ದ ಶೈನ್ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಯಾಕೆ ಗಲ್ಲಿ ಕಿಚನ್‌ಗೆ ವಿದಾಯ ಹೇಳುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದು ತಿಳಿಸಿದ್ದಾರೆ.

ಗಲ್ಲಿ ಕಿಚನ್ ಎಂಬ ಕನಸನ್ನು ಬೆಳೆಸಿದ ಎಲ್ಲರಿಗೂ,
"ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರ್ಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತೆ ನನ್ನ ಲೈಫ್ ಅಲ್ಲಿ ಅದು ಗಲ್ಲಿ ಕಿಚನ್. ಜೀವನ ಸಾಗಿಸೋಕೆ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‌ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದ್ರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರಣಿ." ಎಂದು ಶೈನ್ ಪತ್ರ ಆರಂಭಿಸಿದ್ದಾರೆ.
"ಬೆಳೀತಾ ಬೆಳಸ್ತಾ ಮುಂದಕ್ಕೆ ಸಾಗೋದೆ ಜೀವನ ಅಲ್ವಾ. ಹಾಗಾಗಿ, ಮುಂದೊಂದಿಷ್ಟು ಕೆಲಸ ಮಾಡೋದ್ ಇದೆ. ಅದಕ್ಕಾಗಿ ಹೊಸದೊಂದು ಪ್ರಯಾಣ ಶುರು ಮಾಡಬೇಕಾಗಿದೆ. ಹಾಗಾಗಿ 6 ವರ್ಷಗಳ ಗಲ್ಲಿ ಕಿಚನ್ ಪ್ರಯಾಣಕ್ಕೆ ವಿದಾಯ ಹೇಳೋ ಸಮಯ. ವಿದಾಯ ಹೇಳೋದು ಇಲ್ಲಿ ಬರದಷ್ಟು ಸುಲಭ ಅಲ್ಲ ನಿಮ್ಮ ಗೊತ್ತು. ಆದ್ರೆ, ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗೋದು ಅನಿವಾರ್ಯ. ಗಲ್ಲಿ ಕಿಚನ್ ಅನ್ನು ನನ್ನಂತೆ ಆಸಕ್ತಿ ಇರೋ ಯುವ ಪ್ರತಿಭೆಗೆ ಹಸ್ತಾಂತರ ಮಾಡಿದೀನಿ" ಎಂದು ತಿಳಿಸಿದ್ದಾರೆ.
"ಈ ಕನಸಿಗೆ ಹೊತ್ತಿದ್ದ ಜ್ವಾಲೆ ಇನ್ನು ಮುಂದೆ ಹೊಸ ಪಾಲುದಾರನ ಕೈಯಲ್ಲಿ ಹೊಸ ರೀತಿಯಲ್ಲಿ ಮುಂದುವರಿಯಲಿದೆ. ಶ್ರದ್ಧೆ ಇಂದ ಜನರ ಪ್ರೀತಿನ ಉಳ್ಕೊಂಡು ಬೆಳಸ್ಕೊಂಡು ಹೋಗ್ಲಿ ಅಂತ ಆಶಿಸ್ತೀನಿ. ತಿಂದುಂಡು ಹೊಗಳಿದ, ತಪ್ಪಿದ್ದಲ್ಲಿ ತಿದ್ದಿದ ನನ್ನೆಲ್ಲ ಅಭಿಮಾನಿಗಳೇ, ಭೋಜನ ಪ್ರಿಯರೇ, ಗಲ್ಲಿ ಕಿಚನ್ ಕುಟುಂಬಸ್ಥರೆ, ಮತ್ತೊಂದು ಪ್ರಯತ್ನದೊಂದಿಗೆ ಮರಳಿ ಬರುವೆ, ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರ ಪ್ರೀತಿ ಬೇಡುವೆ" ಎಂದು ಪತ್ರ ಶೈನ್ ವಿವರಿಸಿದ್ದಾರೆ.
ನಟನಾಗೋಕೆ ಚಿತ್ರರಂಗಕ್ಕೆ ಬಂದಿದ್ದ ಶೈನ್ ಶೆಟ್ಟಿ ಆರಂಭದಲ್ಲಿ ಹಿನ್ನಡೆಯಾದಾಗ ಫುಡ್ ಟ್ರಕ್ ಬ್ಯುಸಿನೆಸ್ ಆರಂಭಿಸಿದ್ದರು. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪುಡ್ ಟ್ರಕ್ ಅನ್ನು ಶೈನ್ ಹೊಂದಿದ್ದರು. ಅವರು ಬಿಗ್‌ಬಾಸ್ ಮನೆಗೆ ಹೋಗಿದ್ದಾಗ ಕೂಡ ಅವರ ತಾಯಿ ನೋಡಿಕೊಂಡಿದ್ದರು. ಆದರೆ ಲಾಕ್‌ಡೌನ್ ಸಮಯದಲ್ಲಿ 4 ತಿಂಗಳ ಕಾಲ ಫುಡ್ ಟ್ರಕ್ ಬಂದ್ ಮಾಡುವಂತಾಗಿತ್ತು. ಬಳಿಕ ಮತ್ತೆ ಪುನರಾರಂಭವಾಗಿತ್ತು.
ಬಿಗ್‌ಬಾಸ್ ಶೈನ್ ಶೆಟ್ಟಿ ಮೊಬೈಲ್ ಕ್ಯಾಟೀನ್ ಎಂದು ಗೊತ್ತಾಗಿ ಸಾಕಷ್ಟು ಜನ ಅಲ್ಲಿಗೆ ಭೇಟಿ ನೀಡುತ್ತಿದ್ದರು. ರುಚಿ ರುಚಿಯಾದ ಊಟ ಸವಿಯುತ್ತಿದ್ದರು. ಹೊಟ್ಟೆಪಾಡಿಗಾಗಿ ಆರಂಭಿಸಿದ ಗಲ್ಲಿ ಕಿಚನ್ ಮುಂದೆ ಶೈನ್ ಶೆಟ್ಟಿಗೆ ಬದುಕು ಕಟ್ಟಿಕೊಟ್ಟಿತ್ತು. ಈ ಮೂಲಕ ಬಿಗ್‌ಬಾಸ್ ಮನೆ ಬಾಗಿಲು ತೆರೆಯಿತು. ಬಿಗ್‌ಬಾಸ್ ಅಲ್ಲಿ ಗೆದ್ದ ಬಳಿಕ ಫುಡ್ ಟ್ರಕ್ ದೊಡ್ಡದಾಗಿತ್ತು. ಆರ್‌ಆರ್ ನಗರದಲ್ಲಿ ರೆಸ್ಟೋರೆಂಟ್ ಶುರುವಾಗಿತ್ತು.


Click it and Unblock the Notifications











