Breaking: ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನ

ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನವಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೋಲ್ ಆಗುತ್ತಾ ಸುದ್ದಿಯಲ್ಲಿ ಇರುತ್ತಿದ್ದ ಸೋನು ದಿಢೀರನೆ ಪೊಲೀಸರ ಅತಿಥಿಯಾಗಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಕಾರಣ ಆಕೆಯ ಪ್ರಚಾರದ ಹುಚ್ಚು.

ಸೋನು ಗೌಡ ಜನಪ್ರಿಯತೆಗಾಗಿ ಚಿತ್ರ ವಿಚಿತ್ರ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ಕ್ಯಾರೆ ಎನ್ನದೇ ಹಾಟ್ ಹಾಟ್ ಫೋಟೊ, ವಿಡಿಯೋ ತೇಲಿಬಿಡುತ್ತಿದ್ದರು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಇತ್ತೀಚೆಗೆ ಆಕೆ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಈ ಸಂಬಂಧ ಪೋಸ್ಟ್ ಕೂಡ ಮಾಡಿದ್ದರು. ಸಾಕಷ್ಟು ಜನ ಆಕೆಯ ನಡೆಗೆ ಮೆಚ್ಚುಗೆ ಸೂಚಿಸಿದ್ದರು.

Bigg Boss Fame actress Sonu Srinivas gowda arrested

ಸೋನು ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿದ್ದಾರೆ ಎನ್ನುವ ಆರೋಪದಡಿ ಆಕೆಯನ್ನು ಬಂಧಿಸಲಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಈ ಸಂಬಂಧ ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಮಗುವನ್ನು ದತ್ತುಪಡೆಯಲು ಅವಕಾಶವಿಲ್ಲ, ಒಂದು ವೇಳೆ ಮಗು ದತ್ತು ಪಡೆದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಪ್ರಚಾರ ಪಡೆಯುವಂತಿಲ್ಲ, ಇದು ಕಾನೂನು ಬಾಹಿರವಾಗುತ್ತದೆ ಎಂದು ಗೀತಾ ದೂರಿದ್ದಾರೆ.

ಉತ್ತರ ಕರ್ನಾಟಕದ 8 ವರ್ಷದ ಹೆಣ್ಣು ಮಗುವನ್ನು ಸೋನು ಶ್ರೀನಿವಾಸ್ ಗೌಡ ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅನಧಿಕೃತವಾಗಿ ಮಗುವನ್ನು ತಮ್ಮೊಟ್ಟಿಗೆ ಸೋನು ಇಟ್ಟುಕೊಂಡಿದ್ದ ಆರೋಪ ಕೇಳಿಬಂದಿದೆ. ಇನ್ನು ಆ ಮಗುವಿನ ಜೊತೆ ಶಾಪಿಂಗ್ ಮಾಡಿದ್ದು ಸೇರಿದ್ದಂತೆ ಹಲವು ವೀಡಿಯೋಗಳನ್ನು ಸೋನು ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಕುತ್ತಾ ಬರುತ್ತಿದ್ದಾರೆ. ತಮ್ಮ ಜನಪ್ರಿಯತೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಣ ಗಳಿಸುವ ಉದ್ದೇಶದಿಂದ ಆಕೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು.

ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ವೀಡಿಯೋ ಮಾಡಿ "ನಾನು ಪ್ರಚಾರಕ್ಕಾಗಿ ಮಗುವನ್ನು ದತ್ತು ಪಡೆದಿಲ್ಲ" ಎಂದು ಕೂಡ ಹೇಳಿದ್ದರು. ಆದರೆ ಮಗು ದತ್ತು ಪಡೆಯುವಲ್ಲಿ ಆಕೆ ಯಾವುದೇ ನಿಮಯ ಪಾಲಿಸಿಲ್ಲ ಎಂದು ಹೇಳಲಾಗುತ್ತಿದೆ. ಮಗು ಹಾಗೂ ಮಗುವನ್ನು ದತ್ತು ಪಡೆಯುವವರ ನಡುವೆ 25 ವರ್ಷ ಅಂತರವಿರಬೇಕು. ದತ್ತು ಪಡೆಯುವವರಿಗೂ 25 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಜೊತೆಗೆ ಮಗು ದತ್ತು ಪಡೆಯಲು ಕಾನೂನಾತ್ಮಕವಾಗಿ ಸಾಕಷ್ಟು ಪ್ರಕ್ರಿಯೆಗಳಿವೆ. ಅದ್ಯಾವುದು ಇಲ್ಲದೇ ಆಕೆ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿ ತನ್ನೊಟ್ಟಿಗೆ ಇಟ್ಟುಕೊಂಡಿದ್ದಾರೆ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಟಿವಿ9ಗೆ ಮಾಹಿತಿ ನೀಡಿದ್ದಾರೆ.

Bigg Boss Fame actress Sonu Srinivas gowda arrested

ನೇರವಾಗಿ ಮಗುವನ್ನು ದತ್ತು ಪಡೆಯಲು ಸಾಧ್ಯವಿಲ್ಲ. ಪೋಷಕರು ಕೂಡ ಆ ರೀತಿ ತಮ್ಮ ಮಕ್ಕಳನ್ನು ದತ್ತು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನು ಮಗುವನ್ನು ತಾಔಉ ದತ್ತು ಪಡೆದುಕೊಂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವುದು ದೊಡ್ಡ ತಪ್ಪು ಎಂದು ದೂರುದಾರೆ ಗೀತಾ ಹೇಳಿದ್ದಾರೆ.

More from Filmibeat

English summary
social media influencer Sonu Srinivas gowda taken into custody by bengaluru police;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X