For Quick Alerts
  ALLOW NOTIFICATIONS  
  For Daily Alerts

  ಡ್ರಗ್ ದಂಧೆ ಆರೋಪಿ ಅನಿಕಾ ನನಗೆ ಗೊತ್ತು- ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ

  |

  ಡ್ರಗ್ ಡೀಲರ್ ಅನಿಕಾ ಜೊತೆ ಸಂಪರ್ಕವಿದೆ ಎಂದು ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ ಹೇಳಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಆ್ಯಡಂ ಪಾಷಾ, "ಅನಿಕಾ ನನಗೆ ಪರಿಚಯವಿದ್ದಾರೆ. ಒಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಡ್ಯಾನ್ಸ್ ಕ್ಲಬ್ ನಲ್ಲಿ ಪರಿಚಯ ಆಗಿದ್ದರು. ಆದರೆ ನಿಜ ಹೆಸರು ಹೇಳಿರಲಿಲ್ಲ. ಅವರ ಹೆಸರು ನಿಕಿ ಎಂದು ಹೇಳಿದ್ದರು. ಮಾಮೂಲಿಯಾಗಿ ಬಹುತೇಕರು ಕ್ಲಬ್ ಗೆ ಬರ್ತಾರೆ ಹಾಗಾಗಿ ತಲೆಕೆಡಿಸಿಕೊಂಡಿಲ್ಲ" ಎಂದಿದ್ದಾರೆ.

  Darshan first reaction about sandalwood drug mafia | Filmibeat Kannada

  "ಅನಿಕಾ ಡ್ರಗ್ ಸಪ್ಲೈ ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ಸಿನಿಮಾ ಸೆಲೆಬ್ರಿಟಿಗಳ ಜೊತೆ ನನಗೆ ನಂಟಿಲ್ಲ. ಹಾಗಾಗಿ ಅನಿಕಾ ಜೊತೆ ಯಾರು ಬರುತ್ತಿದ್ದರು ಎಂದು ನನಗೆ ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ನಾನು ಭಯ ಪಡುವುದಿಲ್ಲ. ನಾನು ಕ್ಲಬ್ ಗೆ ಸಾಲ್ಸಾ ಡ್ಯಾನ್ಸ್ ಮಾಡಲು ಹೋಗುತ್ತಿದ್ದೆ ಅಷ್ಟೆ" ಎಂದು ಹೇಳಿದ್ದಾರೆ.

  20 ತಾರೆಯರ ಪಟ್ಟಿ ಸಿದ್ಧ: ಟಾಲಿವುಡ್ ಮಾದರಿಯಲ್ಲಿ 'ಡ್ರಗ್ಸ್' ಕುರಿತು ವಿಚಾರಣೆ!

  ಡ್ರಗ್ ದಂಧೆಯ ಕುರಿತು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕ ಮತ್ತು ನಟ ನವೀನ್ ಕೃಷ್ಣ ಮಾತನಾಡಿ, ಚಿತ್ರರಂಗದಲ್ಲಿ ಸಾವಿರಾರು ಕಲಾವಿದರು, ತಂತ್ರಜ್ಞರು ಕೆಲಸ ಮಾಡ್ತಾರೆ. ಯಾರೋ ಒಬ್ರು ಇರಬಹುದು ಎನ್ನುವ ಮಾತ್ರಕ್ಕೆ ಇಡೀ ಇಂಡಸ್ಟ್ರಿಯನ್ನು ಎಳೆದು ತರೋದು ತಪ್ಪು ಎಂದು ಹೇಳಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ ದಂಧೆ ಪ್ರಕರಣದಲ್ಲಿ ಕೆಲವು ನಟ-ನಟಿಯರ ಹೆಸರು ಕೇಳಿ ಬರುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿರುವ ಬಾಂಬ್ ನಿಂದ ಇಡೀ ಚಿತ್ರರಂಗ ಬೆಚ್ಚಿಬಿದ್ದದೆ. ತನ್ನ ಬಳಿ ದಾಖಲೆ ಇರುವುದಾಗಿ ಹೇಳಿದ್ದ ಇಂದ್ರಜಿತ್ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ಇಂದು (ಆಗಸ್ಟ್ 31) ಇಂದ್ರಜಿತ್ ಸಿಸಿಬಿ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ನೀಡಲಿದ್ದಾರೆ. ಇಂದ್ರಜಿತ್ ನೀಡುವ ಮಾಹಿತಿ ಆಧರಿಸಿ ಸಿಸಿಬಿ ತನಿಖೆ ನಡೆಸಲಿದೆ.

  English summary
  Bigg Boss fame Adam Pasha says i know Anika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X