ಗಿಲ್ಲಿ ಜೊತೆ ಕಾವ್ಯ ಶೈವಾ: ವೈರಲ್ ಸುದ್ದಿಗೆ ಕೆರಳಿದ ಬಿಗ್ ಬಾಸ್ ಕಾವು

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಅಭಿನಯದ 'ಪಳಾರ್' ಸಿನಿಮಾ ಚಿತ್ರೀಕರಣ ಶುರುವಾಗಿದೆ. ಕೆಲ ದಿನಗಳ ಹಿಂದೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸಿನಿಮಾ ಸೆಟ್ಟೇರಿತ್ತು. ಚಂದ್ರ ಮೋಹನ್ ಚಿತ್ರಕ್ಕೆ ಆಕ್ಷ್ನ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರತಂಡದ ಬೆಂಬಲಕ್ಕೆ ನಿಂತಿದೆ. ಇನ್ನು ಸಿನಿಮಾ ನಾಯಕಿ ಯಾರು ಎನ್ನುವ ಬಗ್ಗೆ ಕುತೂಹಲ ಮುಂದುವರೆದಿದೆ.

ಗಿಲ್ಲಿ ಹಾಗೂ ಕಾವ್ಯಾ ಶೈವ ಸ್ನೇಹದ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳಾಗಿದ್ದ ಇಬ್ಬರ ನಡುವೆ ಆತ್ಮೀಯ ಒಡನಾಟ ಇದೆ. ಸ್ನೇಹಿತರಿಗಿಂತ ಹೆಚ್ಚು ಪ್ರೇಮಿಗಳಿಗಿಂತ ಕಮ್ಮಿ ಎನ್ನುವಂತೆ ಇಬ್ಬರು ಒಡನಾಟದ ಕ್ಷಣಗಳು ವೈರಲ್ ಆಗಿತ್ತು. ಇಬ್ಬರೂ ಮದುವೆ ಆಗಬೇಕು ಎನ್ನುವ ಹಂತಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದು ಇದೆ. ಇಬ್ಬರೂ ಒಟ್ಟಿಗೆ ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸಬೇಕು ಎಂದು ಅಭಿಮಾನಿಗಳ ಆಸೆಯಾಗಿದೆ.

Bigg Boss Fame Kavya Shaiva says she is not part of Gilli Nata s Palaar film

'ಪಳಾರ್' ಚಿತ್ರದಲ್ಲಿ ಗಿಲ್ಲಿಗೆ ಕಾವ್ಯಾ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಕೊನೆಗೂ ಈ ಬಗ್ಗೆ ಕಾವ್ಯಾ ಮೌನ ಮುರಿದಿದ್ದಾರೆ. "ನಾನು 'ಪಳಾರ್' ಚಿತ್ರದ ಭಾಗವಲ್ಲ. ಆ ಪಾತ್ರದಲ್ಲಿ ನಟಿಸುವಂತೆ ಯಾರು ನನ್ನನ್ನು ಸಂಪರ್ಕಿಸಿಲ್ಲ" ಎಂದು ಕಾವ್ಯಾ ಸ್ಪಷ್ಟನೆ ನೀಡಿದ್ದಾರೆ. ಇಷ್ಟು ದಿನ ಯಾಕೆ ಈ ಬಗ್ಗೆ ಮಾತನಾಡಲಿಲ್ಲ ಎನ್ನುವ ಬಗ್ಗೆ ಕೂಡ ಮತ್ತೊಂದು ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ಚರ್ಚೆ ಶುರುವಾಗಿದ್ದು ಹೇಗೆ?

'ಪಳಾರ್' ಚಿತ್ರಕ್ಕೆ ಕಾವ್ಯಾ ಶೈವ ನಾಯಕಿ ಎನ್ನುವ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೇಳ್ತೀವಿ ಎಂದು ಚಿತ್ರತಂಡ ಹೇಳಿದೆ. ಕಾವ್ಯಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ಕಾವ್ಯಾ ಅಭಿಮಾನಿಗಳ ಇನ್‌ಸ್ಟಾಗ್ರಾಮ್ ಪೇಜ್‌ವೊಂದರಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಲಂಗಾ ದಾವಣಿಯಲ್ಲಿ ಹುಡುಗಿಯೊಬ್ಬಳು ಹಿಂದೆ ತಿರುಗಿ ಹೋಗುತ್ತಿರುವ ಫೋಟೊ ಹಾಕಿ "ಪಳಾರ್ ಹೀರೋಯಿನ್ ಲೋಡಿಂಗ್.. ಕಮ್ಮಿಂಗ್ ಸೂನ್" ಎಂದು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿ 'ಪಳಾರ್' ಚಿತ್ರಕ್ಕೆ ಕಾವ್ಯಾ ನಾಯಕಿ ಅನ್ನೋದು ಫಿಕ್ಸ್ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

Bigg Boss Fame Kavya Shaiva says she is not part of Gilli Nata s Palaar film

ಮೌನ ಮುರಿದ ಕಾವ್ಯಾ ಶೈವಾ

ಕೊನೆಗೆ ಪ್ರತಿಕ್ರಿಯಿಸಿರುವ ಕಾವ್ಯಾ "ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ನಿರಂತರವಾಗಿ ಕರೆಗಳು ಹಾಗೂ ಸಂದೇಶಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಗಮನಿಸಿ ಈ ಮೂಲಕ ಎಲ್ಲರಿಗೂ ಸ್ಪಷ್ಟಪಡಿಸುತ್ತಿದ್ದೇನೆ.- ನಾನು ಈ ಚಿತ್ರದ ಭಾಗವಲ್ಲ.. ಈ ಪಾತ್ರಕ್ಕಾಗಿ ನನಗೆ ಯಾವುದೇ ರೀತಿಯ ಕರೆ ಅಥವಾ ಸಂಪರ್ಕ ಬಂದಿಲ್ಲ. ಹಾಗಾಗಿ ಹರಿದಾಡುತ್ತಿರುವ ಯಾವುದೇ ತಪ್ಪು ಮಾಹಿತಿ ನಂಬಬೇಡಿ. ಸಾರ್ವಜನಿಕ ವ್ಯಕ್ತಿಯಾಗಿ ನನ್ನ ಬಗ್ಗೆ ಹರಿದಾಡುತ್ತಿರುವ ಈ ಗೊಂದಲಕ್ಕೆ ಸ್ಪಷ್ಟನೆ ನೀಡುವುದು ನನ್ನ ಜವಾಬ್ದಾರಿ ಎಂದು ಭಾವಿಸಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಸದಾ ಚಿರಋಣಿ ಎಂದು ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್

ಕಾವ್ಯಾ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕುತ್ತಿದ್ದಂತೆ ಇಷ್ಟು ದಿನ ಯಾಕೆ ಸುಮ್ಮನಿದ್ರಿ ಮೊದಲೇ ಹೇಳಬೇಕಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ "ನಾನು ಇಷ್ಟು ದಿನ ಮೌನವಾಗಿ ಇದ್ದಿದ್ದು ಕಾಲ ಕಳೆದಂತೆ ಸತ್ಯ ಎಲ್ಲರಿಗೂ ತಿಳಿಯುತ್ತದೆ ಮತ್ತು ಚಿತ್ರತಂಡವೇ ಅಧಿಕೃತವಾಗಿ ಈ ವಿಷಯವನ್ನು ಘೋಷಿಸುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ದಿನ ಕಳೆದಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕರೆಗಳು, ಸಂದೇಶಗಳು ಹಾಗೂ ಊಹಾಪೋಹಗಳು ಹೆಚ್ಚಾಗುತ್ತಲೇ ಹೋದವು. ನನ್ನನ್ನು ಪ್ರೀತಿಸುವ ಮತ್ತು ಬೆಂಬಲಿಸುವ ನಿಮ್ಮೆಲ್ಲರಿಗೆ ಯಾವುದೇ ಸ್ಪಷ್ಟನೆ ನೀಡದೇ ಇರುವುದು ಸರಿಯಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Read more about: gilli nata bigg boss sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X