ರೊಮ್ಯಾಂಟಿಕ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ 'ಬಿಗ್ ಬಾಸ್' ಕಿಶನ್

By ಫಿಲ್ಮ್ ಡೆಸ್ಕ್

ಅದ್ಭುತ ಡ್ಯಾನ್ಸರ್ ಹಾಗೂ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದ ಕಿಶನ್ ಬಿಳಗಲಿ ಇದೀಗ ರೊಮ್ಯಾಂಟಿಕ್ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

Recommended Video

ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾದ Kishan | Filmibeat Kannada

ಬಿಗ್ ಬಾಸ್ ಬಳಿಕ ಕಿಶನ್ ಏನ್ಮಾಡ್ತಾರೆ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕಿಶನ್ ಬೆಳ್ಳಿ ಪರದೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ. ಅಂದಹಾಗೆ ಕಿಶನ್ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ ವಿಸ್ಮಯಾ ಗೌಡ.

ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೋರ್ವ ಮಹಿಳಾ ನಿರ್ದೇಶಕಿ ಎಂಟ್ರಿ ಕೊಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆ ಇದೆ. ಈ ನಡುವೆ ವಿಸ್ಮಯಾ ಗೌಡ ಎಂಟ್ರಿ ಅಚ್ಚರಿಯ ಜೊತೆಗೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ವಿಸ್ಮಯಾ ಗೌಡ, ಹಲವು ವರ್ಷಗಳಿಂದ ಚಿತ್ರರಂಗದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ.

Bigg Boss fame Kishen Bilagalias lead with romantic movie

ಕಳೆದ ಒಂದು ವರ್ಷದಿಂದ ಈ ಸಿನಿಮಾಗಾಗಿ ಕಥೆ ತಯಾರಿಸಿದ್ದಾರೆ. ಬಳಿಕ ಈ ಸಿನಿಮಾಗೆ ಕಿಶನ್ ಸೂಕ್ತ ಎನಿಸಿ ಅವರನ್ನು ಆಯ್ಕೆ ಮಾಡಿದ್ದಾರಂತೆ. ಇದೊಂದು ಪಕ್ಕ ಲವ್ ಸ್ಟೋರಿ ಸಿನಿಮಾವಾಗಿದೆಯಂತೆ. ಅಂದಹಾಗೆ ಕಿಶನ್ ಜೊತೆ ಮತ್ತೋರ್ವ ನಾಯಕ ಪ್ರವೀಣ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಚಿತ್ರದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರಾವ್ಯ ಸದ್ಯ ಹೆಸರು ಬದಲಾಯಿಸಿಕೊಂಡಿದ್ದು, ಸಾತ್ವಿಕಾ ಎನ್ನುವ ಹೊಸ ಹೆಸರಿನ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

ಮುಂದಿನ ವರ್ಷ ಜನವರಿಯಲ್ಲಿ ಕಿಶನ್ ಹೊಸ ಸಿನಿಮಾದ ಮುಹೂರ್ತ ನಡೆಯಲಿದ್ದು, ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರಂತೆ.

ರೊಮ್ಯಾಂಟಿಕ್ ಸಿನಿಮಾದ ಟೈಟಲ್ ಸಹ ಸಖತ್ ಕ್ಯಾಚಿ ಆಗಿದೆಯಂತೆ. ಫೆಬ್ರವರಿ 14 ಪ್ರೇಮಿಗಳ ದಿನದಂದು ಟೈಟಲ್ ಬಿಡುಗಡೆ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಸದ್ಯ ಸಿನಿಮಾದ ನಾಯಕ ಮತ್ತು ನಾಯಕಿ ಯಾರೆಂದು ಬಹಿರಂಗ ಪಡಿಸಿರುವ ಸಿನಿಮಾತಂಡ ಉಳಿದ ಕಲಾವಿದರು ಮತ್ತು ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದನ್ನು ಸದ್ಯದಲ್ಲೇ ಬಹಿರಂಗ ಪಡಿಸಲಿದ್ದಾರೆ.

More from Filmibeat

English summary
Bigg Boss fame Kishen Bilagali as lead with romantic movie. This movie is directed by Vismaya Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X