ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ, ಪ್ರತಿಕ್ರಿಯಿಸಿದ ವಕೀಲ್ ಸಾಬ್

ಲಾಯರ್ ಜಗದೀಶ್ ಅವರ ಮೇಲೆ ಹಲ್ಲೆ ಮಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ನಾಲ್ಕೈದು ಜನ ವಾಗ್ವಾದ ನಡೆಸಿ ಜಗದೀಶ್ ಟೀ-ಶರ್ಟ್ ಹಿಡಿದು ನೂಕಾಟ ತಳ್ಳಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗದೀಶ್ ಮೇಲೆ ಎರಡು ಏಟು ಹಾಕಿದ್ದಾರೆ.

ಇತ್ತೀಚೆಗೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಲಾಯರ್ ಜಗದೀಶ್ ಮಾತನಾಡುತ್ತಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳೇ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ರೀತಿ ವೀಡಿಯೋ ವೈರಲ್ ಆಗುತ್ತಿದೆ. ಜಗದೀಶ್ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ.

Bigg Boss fame lawyer Jagadish attacked

ಇದು ನಮ್ಮ ಕಾಂಪ್ಲೆಕ್ಸ್. ಅದರ ಮುಂದೆ ರಸ್ತೆ ಬ್ಲ್ಯಾಕ್ ಮಾಡಿಕೊಂಡು ಅಣ್ಣಮ್ಮ ದೇವಿ ಕೂರಿಸಿದ್ದಾರೆ. ಅದರ ಬಗ್ಗೆ ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ಅಟ್ಯಾಕ್ ಮಾಡಿದ್ದಾರೆ. ನಮ್ಮ ಗನ್ ಮ್ಯಾನ್ ಮನೆಯಲ್ಲಿದ್ದಾರೆ. ನಾನು ವಾಕಿಂಗ್ ಬಂದಿದ್ದೆ. ಕಾರಣ ಬಹಳ ಸಿಂಪಲ್. ರಸ್ತೆ ಬ್ಲ್ಯಾಕ್ ಮಾಡಿ ಅಣಮ್ಮ ಉತ್ಸವ ಮಾಡುತ್ತಿದ್ದಾರೆ. ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಕ್ಕೆ ಇಷ್ಟೆಲ್ಲಾ ಆಗಿದೆ" ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

"ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದರೆ ಅವರಿಗೆ ಬೆಲೆಯಿಲ್ಲ. ರೌಡಿಗಳಿಗೆ ಬೆಲೆ. ಉತ್ಸವ ಮಾಡುವಂತಿದ್ದರೆ ಯಾವುದಾದರೂ ಮೈದಾನದಲ್ಲಿ ಮಾಡಿ. ರಸ್ತೆ ಬ್ಲ್ಯಾಕ್ ಮಾಡಬಾರದು. ಬಿಬಿಎಂಪಿ ಅವರಿಂದ ಅನುಮತಿ ಪಡೆಯಬೇಕು. 40 ಜನ ಬಂದವರೂ ನನ್ನ ಶರ್ಟ್ ಹರಿದಿದ್ದಾರೆ. ಪೊಲೀಸರಿಗೆ ಇಲ್ಲಿ ಬೆಲೆಯಿಲ್ಲ. ಪೊಲೀಸ್ ಕಮೀಷನರ್ ಏನ್ ಮಾಡುತ್ತಿದ್ದೀರಾ?" ಎಂದು ಲಾಯರ್ ಜಗದೀಶ್ ಪ್ರಶ್ನಿಸಿದ್ದಾರೆ.

"ನಮ್ಮ ಗನ್‌ಮ್ಯಾನ್ ಇದ್ದಿದ್ದರೆ ನಾವು ತಿರುಗೇಟು ಕೊಡುತ್ತಿದ್ದೆವು. ಅವರು 40 ಜನ ಇದ್ದರು. ಅಣ್ಣಮ್ಮ ಹೆಸರಿನಲ್ಲಿ ರೋಲ್‌ಕಾಲ್ ಮಾಡುತ್ತಿದ್ದಾರೆ" ಎಂದು ಜಗದೀಶ್ ಆರೋಪಿಸಿದ್ದಾರೆ.

ಜೋರು ಧ್ವನಿಯಲ್ಲಿ ಮಾತನಾಡುವ ಜಗದೀಶ್ ಮಾಧ್ಯಮಗಳ ಮುಂದೆ ತಮ್ಮ ಹೇಳಿಕೆಗಳಿಂದಲೇ ಭಾರೀ ಸದ್ದು ಮಾಡಿದ್ದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿ ಆಗಿದ್ದರು. ಶಾಸಕ ಮುನಿರತ್ನ ವಿರುದ್ಧ ಕೂಡ ಆರೋಪ ಮಾಡಿದ್ದರು. ಬಳಿಕ ಬಿಗ್‌ಬಾಸ್ ಎಂಟ್ರಿ ಅವಕಾಶ ಪಡೆದಿದ್ದರು.

More from Filmibeat

English summary
Lawyer Jagadish assaulted, he Eliminated from bigg house rule violations
Read more about: darshan bigg boss kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X