Just In
- 2 hrs ago
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?
- 3 hrs ago
ಕಿರುತೆರೆಯಲ್ಲಿ ಪವರ್ ಸ್ಟಾರ್ ಅಬ್ಬರ: 'ಡಿಕೆಡಿ'ಯಲ್ಲಿ ಅಪ್ಪು ಡಾನ್ಸ್
- 3 hrs ago
ಹಿಂದಿ ಬರಲ್ಲ ಎಂದು ಅವಮಾನಕ್ಕೊಳಗಾಗಿದ್ದ ದಿನಗಳನ್ನು ನೆನೆದು ಕಣ್ಣೀರಿಟ್ಟ ನೋರಾ ಫತೇಹಿ
- 3 hrs ago
ಜೆಎಸ್ಎಸ್ ಕಾಲೇಜಿಗೆ ಡಿ ಬಾಸ್ ಎಂಟ್ರಿ: ವಿದ್ಯಾರ್ಥಿಗಳ ಜೊತೆ ಸಂಭ್ರಮ
Don't Miss!
- News
ನ್ಯೂಜಿಲ್ಯಾಂಡ್ನಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
- Automobiles
ಉತ್ಪಾದನೆ ಹೆಚ್ಚಳದ ನಂತರವೂ ತಗ್ಗದ ಹೊಸ ಥಾರ್ ಕಾರಿನ ಕಾಯುವಿಕೆ ಅವಧಿ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ 'ಬಿಗ್ ಬಾಸ್' ನಯನ ಪುಟ್ಟಸ್ವಾಮಿ
ಕಿರುತೆರೆ ನಟಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿಕೊಂಡಿರುವ ನಯನ ಪುಟ್ಟಸ್ವಾಮಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮ್ಮನಾಗುತ್ತಿರುವ ಸಂಗತಿಯನ್ನು ನಯನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
''ಹೊಸ ಆರಂಭ, ಈ ಸಂಭ್ರಮ ಕ್ಷಣವನ್ನು ಅನುಭವಿಸಲು ಕಾಯಲಾಗುತ್ತಿಲ್ಲ. ನಮ್ಮ ಮಗು ಆಗಸ್ಟ್ ತಿಂಗಳಲ್ಲಿ ಬರಲಿದೆ, ನಮಗೆ ಆಶೀರ್ವಾದ ಮಾಡಿ, ಧನ್ಯವಾದ'' ಎಂದು ನಯನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್
ನಯನ ಪುಟ್ಟಸ್ವಾಮಿ ದಂಪತಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುತ್ತಿರುವುದರ ವಿಶೇಷವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಸಹ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದ್ಹಾಗೆ, ನಟಿ ನಯನ ಪುಟ್ಟಸ್ವಾಮಿ ಮತ್ತು ಚರಣ್ ತೇಜ್ ಅವರ ವಿವಾಹ 2018ರಲ್ಲಿ ನಡೆದಿತ್ತು. ನಯನ ಅವರ ಪತಿ ಚರಣ್ ತೇಜ್ ಮೂಲತಃ ಹೈದರಾಬಾದ್‌ನವರಾಗಿದ್ದು, ಈ ದಂಪತಿ ಪ್ರಸ್ತುತ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಇದೆ.
ಅಚ್ಚರಿ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಹೊರನಡೆದ ನಯನ.!
ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು' ಸೀಸನ್ 1 ರಲ್ಲಿ ನಯನ ಪುಟ್ಟಸ್ವಾಮಿ ವಿಜೇತೆ ಆಗಿದ್ದರು. ಈ ಕಾರ್ಯಕ್ರಮದ ಮೂಲಕ ಅವರು ಮೊದಲು ಕನ್ನಡಿಗರಿಗೆ ಪರಿಚಯ ಆಗಿದ್ದರು.
ಬಳಿಕ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಮೊದಲ ದಿನವೇ ಬಿಗ್ ಬಾಸ್ ಮನೆಗೆ ಹೋಗಿದ್ದ ನಯನ 63 ದಿನಗಳ ಬಳಿಕ ಎಲಿಮಿನೇಟ್ ಆಗಿದ್ದರು.
ರಿಯಾಲಿಟಿ ಶೋ ಬಿಟ್ಟು 'ಚಿಟ್ಟೆ ಹೆಜ್ಜೆ' ಎಂಬ ಧಾರಾವಾಹಿಯಲ್ಲಿಯೂ ನಯನ ನಟಿಸಿದರು. ಪುನೀತ್ ರಾಜ್ ಕುಮಾರ್ ಅವರ 'ಪವರ್', 'ಸಿದ್ಧಾರ್ಥ', 'ಅಲೆಮಾರಿ', 'ಘರ್ಷಣೆ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.