For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ 'ಬಿಗ್ ಬಾಸ್' ನಯನ ಪುಟ್ಟಸ್ವಾಮಿ

  |

  ಕಿರುತೆರೆ ನಟಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿಕೊಂಡಿರುವ ನಯನ ಪುಟ್ಟಸ್ವಾಮಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮ್ಮನಾಗುತ್ತಿರುವ ಸಂಗತಿಯನ್ನು ನಯನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

  ''ಹೊಸ ಆರಂಭ, ಈ ಸಂಭ್ರಮ ಕ್ಷಣವನ್ನು ಅನುಭವಿಸಲು ಕಾಯಲಾಗುತ್ತಿಲ್ಲ. ನಮ್ಮ ಮಗು ಆಗಸ್ಟ್‌ ತಿಂಗಳಲ್ಲಿ ಬರಲಿದೆ, ನಮಗೆ ಆಶೀರ್ವಾದ ಮಾಡಿ, ಧನ್ಯವಾದ'' ಎಂದು ನಯನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

  'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್

  ನಯನ ಪುಟ್ಟಸ್ವಾಮಿ ದಂಪತಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳುತ್ತಿರುವುದರ ವಿಶೇಷವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಸಹ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ಅಂದ್ಹಾಗೆ, ನಟಿ ನಯನ ಪುಟ್ಟಸ್ವಾಮಿ ಮತ್ತು ಚರಣ್ ತೇಜ್ ಅವರ ವಿವಾಹ 2018ರಲ್ಲಿ ನಡೆದಿತ್ತು. ನಯನ ಅವರ ಪತಿ ಚರಣ್ ತೇಜ್ ಮೂಲತಃ ಹೈದರಾಬಾದ್‌ನವರಾಗಿದ್ದು, ಈ ದಂಪತಿ ಪ್ರಸ್ತುತ ವಿದೇಶದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಇದೆ.

  ಅಚ್ಚರಿ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಹೊರನಡೆದ ನಯನ.!ಅಚ್ಚರಿ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಹೊರನಡೆದ ನಯನ.!

  ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು' ಸೀಸನ್ 1 ರಲ್ಲಿ ನಯನ ಪುಟ್ಟಸ್ವಾಮಿ ವಿಜೇತೆ ಆಗಿದ್ದರು. ಈ ಕಾರ್ಯಕ್ರಮದ ಮೂಲಕ ಅವರು ಮೊದಲು ಕನ್ನಡಿಗರಿಗೆ ಪರಿಚಯ ಆಗಿದ್ದರು.

  ಬಳಿಕ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಮೊದಲ ದಿನವೇ ಬಿಗ್ ಬಾಸ್ ಮನೆಗೆ ಹೋಗಿದ್ದ ನಯನ 63 ದಿನಗಳ ಬಳಿಕ ಎಲಿಮಿನೇಟ್ ಆಗಿದ್ದರು.

  ಪತಿಯನ್ನು ಆಡಿಕೊಂಡಿದ್ದವರಿಗೆ ಸರಿಯಾದ ಉತ್ತರಕೊಟ್ಟ ಪ್ರಿಯಾ ಸುದೀಪ್ | Priya Sudeep | Sudeep | Vikrant Rona

  ರಿಯಾಲಿಟಿ ಶೋ ಬಿಟ್ಟು 'ಚಿಟ್ಟೆ ಹೆಜ್ಜೆ' ಎಂಬ ಧಾರಾವಾಹಿಯಲ್ಲಿಯೂ ನಯನ ನಟಿಸಿದರು. ಪುನೀತ್ ರಾಜ್ ಕುಮಾರ್ ಅವರ 'ಪವರ್', 'ಸಿದ್ಧಾರ್ಥ', 'ಅಲೆಮಾರಿ', 'ಘರ್ಷಣೆ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.

  English summary
  Bigg Boss fame naina puttaswamy expecting first baby and she shared pictures of maternity shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X