"ಸರ್ಜರಿ ಬಳಿಕ ಹೆಣ್ಣಾಗಿ ಬದಲಾಗಿದ್ದೇನೆ, ಗರ್ಭಕೋಶ ಮಾತ್ರ ಇಲ್ಲ"; ಬಿಗ್‌ಬಾಸ್ ಸ್ಪರ್ಧಿ ನೀತು ವನಜಾಕ್ಷಿ

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ಬಾಸ್ ಸೀಸನ್ 10ರ ಮೂಲಕ ಟ್ರಾನ್ಸ್‌ಜೆಂಡರ್ ವುಮನ್ ನೀತು ವನಜಾಕ್ಷಿ ಮನೆಯೊಳಗೆ ಪ್ರವೇಶ ಪಡೆದಿದ್ದರು. ಈ ಮೂಲಕ ಕೇವಲ ಸೋಶಿಯಲ್ ಮೀಡಿಯಾದ ಅಷ್ಟೇ ಅಲ್ಲ. ಕನ್ನಡಿಗರಿಗೆಲ್ಲ ನೀತು ವನಜಾಕ್ಷಿ ಪರಿಚಯ ಆಗಿತ್ತು. ಈ ವೇಳೆ ನೀತು ಹಿನ್ನೆಲೆಯೇನು? ಗಂಡಾಗಿದ್ದವರು ಹೆಣ್ಣಾಗಿ ಬದಲಾಗಿದ್ದು ಹೇಗೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಈ ಪ್ರಶ್ನೆಗಳಿಗೆ ಇತ್ತೀಚೆಗೆ ನೀತು ವನಜಾಕ್ಷಿ ಸ್ಪಷ್ಟನೆ ಕೊಟ್ಟಿದ್ದರು. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ನೀತು ವನಜಾಕ್ಷಿ ತಾನು ಹೆಣ್ಣಾಗಿ ಹೇಗೆ ಬದಲಾದೆ ಅನ್ನುವುದನ್ನು ರಿವೀಲ್ ಮಾಡಿದ್ದಾರೆ. ಹೆಣ್ಣಾಗಿ ಬದಲಾಗುವುದಕ್ಕೆ ಸರ್ಜರಿ ಹೇಗಾಯ್ತು? ಅದಕ್ಕೆ ಎಷ್ಟು ಖರ್ಚಾಯ್ತು? ಇದೆಲ್ಲವನ್ನೂ ರಿವೀಲ್ ಮಾಡಿದ್ದಾರೆ.

Bigg Boss fame Neetu Vanajakshi said that it was disgusting to see private parts while taking a bath

ಒಬ್ಬ ಗಂಡಿಗೆ ಯಾನು ಹೆಣ್ಣಿನಂತೆ ಫೀಲ್ ಮಾಡುತ್ತಿದ್ದರೆ, ಅದೇ ಹೆಣ್ಣಾಗಿದ್ದವರಿಗೆ ಗಂಡಾಗೇಕು ಅನ್ನೋ ಫೀಲಿಂಗ್ ಬಂದರೆ ಏನು ಮಾಡಬೇಕು ಮೊದಲು ಏನು ಮಾಡಬೇಕು ಅಂತ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಯಾರ ಬಳಿಗೆ ಹೋಗಬೇಕು? ಯಾರಿಂದ ಸಲಹೆ ಪಡೆದುಕೊಳ್ಳಬೇಕು ಅನ್ನೋದನ್ನು ಹೇಳಿದ್ದಾರೆ.

"ಒಬ್ಬ ವ್ಯಕ್ತಿ ಹುಡುಗಿಯಾಗಿ ಫೀಲ್ ಮಾಡುತ್ತಿದ್ದಾನೆ ಅಂದರೆ, ಅವರು ಮೊದಲು ಮನಶಾಸ್ತ್ರಜ್ಞರ ಬಳಿ ಹೋಗಿಬೇಕು. ಅವರು ನಿಮ್ಮ ಜರ್ನಿಯನ್ನು ಕೇಳುತ್ತಾರೆ. ನಾನೇ ಖುದ್ದಾಗಿ ಹೋಗಿ ಕೇಳುತ್ತಿದ್ದೆ. ನಾನು ಹುಡುಗಿ ಆಗಬೇಕು ಹೇಳಿ ಏನು ಮಾಡಬೇಕು ಅಂತ ಕೇಳುತ್ತಿದ್ದೆ. ಯಾವಾಗ ಬ್ಯೂಟಿಫುಲ್ ಆಗಿ ಕಾಣಿಸುತ್ತಿನೋ. ಯಾವಾಗ ಜನರು ನನ್ನನ್ನು ಹುಡುಗಿಯಾಗಿ ನೋಡುತ್ತಾರೋ ಅಂತ ಅನಿಸುತ್ತಿತ್ತು." ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

Bigg Boss fame Neetu Vanajakshi said that it was disgusting to see private parts while taking a bath

ಹೆಣ್ಣಾಗಿ ಬದಲಾಗುವುದಕ್ಕೆ ನೀತು ವನಜಾಕ್ಷಿ ಹಾರ್ಮೋನ್ಸ್ ಅನ್ನು ತೆಗೆದುಕೊಳ್ಳುತ್ತಿದ್ದರು. ಆ ಬಳಿಕ ಅವರ ಮೂಡಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವಂತೆ. "ಹಾರ್ಮೋನ್ಸ್ ತೆಗೆದುಕೊಂಡಾಗ ಮುಖದಲ್ಲಿ ಬದಲಾವಣೆ ಆಗುತ್ತೆ. ಹೆಣು ಮುಖದ ತರ ಫೀಲ್ ಆಗುತ್ತೆ. ಗಡ್ಡ, ಮೀಸೆ ಬರುವುದಿಲ್ಲ. ಕೈಯಲ್ಲಿರುವ ಕೂದಲು ಹೋಗುತ್ತೆ. ಹಾಗೆ ದೇಹದಲ್ಲೂ ಬದಲಾವಣೆ ಆಗುತ್ತೆ. ತುಂಬಾನೇ ಮೂಡ್ ಸ್ವಿಂಗ್ ಆಗುತ್ತೆ. ಇದ್ದಕ್ಕಿಂತ ಡಿಪ್ರೆಷನ್‌ಗೆ ಹೋಗುತ್ತೇವೆ. ಎಷ್ಟು ಫೀಲ್ ಆಗುತ್ತೆ ಅಂದರೆ, ಮಲಗಿಕೊಂಡಿದ್ದರೆ ಮಲಗಿಕೊಂಡೇ ಇರಬೇಕು ಅಂತ ಅನಿಸುತ್ತೆ. ಹಾರ್ಮೋನ್ಸ್ ತೆಗೆದುಕೊಳ್ಳುತ್ತಿದೆ. ಅದು ತಪ್ಪಾ ಸರಿನಾ ಅನ್ನೋದು ಗೊತ್ತಿರಲಿಲ್ಲ. ಮನೆಯವರಿಗೂ ಹೇಳಿರಲಿಲ್ಲ." ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ನಿರೂಪಕ ರಾಜೇಶ್ ಗೌಡ ಜೊತೆ ಸರ್ಜರಿಗೆ ಎಷ್ಟು ಖರ್ಚಾಯ್ತು? ಏನಕ್ಕೆಲ್ಲ ಖರ್ಚು ಆಯ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ. "ಈ ಸರ್ಜರಿಗೆ 10 ರಿಂದ 12 ಲಕ್ಷ ರೂಪಾಯಿ ಬೇಕಾಗುತ್ತೆ. ಹಾರ್ಮೋನ್ಸ್‌ಗೆ ಒಂದು ಲಕ್ಷ ರೂಪಾಯಿ ಬೇಕಾಗುತ್ತೆ. ಅದಾದ್ಮೇಲೆ ಸರ್ಜರಿಗೆ ಆರು ಲಕ್ಷ ರೂಪಾಯಿ ಬೇಕಾಗುತ್ತೆ. ಅದಾದ್ಮೇಲೆ ಬೇರೆ ಬೇರೆ ಸರ್ಜರಿ ಬರುತ್ತೆ. ಅದಕ್ಕೊಂದು ಎರಡು ಲಕ್ಷ ಬೇಕಾಗುತ್ತೆ. ಆಮೇಲೆ ಔಷಧಿಗೆಲ್ಲ ದುಡ್ಡು ಬೇಕಾಗುತ್ತೆ. ನನ್ನ ಸರ್ಜರಿ ದೆಹಲಿಯಲ್ಲಿ ಮಾಡಿಸಿದ್ದು, ಅಲ್ಲಿಗೆ ವಿದೇಶದವರೆಲ್ಲ ಬಂದು ಮಾಡಿಸುತ್ತಾರೆ." ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಹಾಗೇ ಸರ್ಜರಿಗೂ ಮುನ್ನ ತಮ್ಮ ಮನ:ಸ್ಥಿತಿ ಹೇಗಿತ್ತು ಅನ್ನೋದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. "ನಾವು ಸ್ನಾನ ಮಾಡುತ್ತಿರಬೇಕಾದರೆ ನಮ್ಮ ಖಾಸಗಿ ಅಂಗವನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿರಲ್ಲ. ನಮಗೆ ಅದು ಅಸಹ್ಯ ಅಂತ ಅನಿಸುತ್ತಿರುತ್ತೆ. ಯಾವಾಗ ನಾವು ಹೆಣ್ಣಾಗಿಬಿಡುತ್ತೇವೋ ಅನ್ನೋ ಫೀಲ್ ಇರುತ್ತೆ. ಆ ಟೈಮ್‌ನಲ್ಲಿ ಖುಷಿಯಿಂದ ಹೆಣ್ಣಾಗಬೇಕು ಅಂತ ಸಹಿ ಮಾಡಿದೆ. ಎಷ್ಟು ಖುಷಿ ಆಗುತ್ತಿರುತ್ತೆ ಅಂದರೆ, ಕಣ್ಣಲ್ಲಿ ನೀರು ಬರುತ್ತಿರುತ್ತೆ. ಅದು ಸಂತೋಷದ ಕಣ್ಣೀರು. ಅದೇನೋ ಒಂದು ನಿರಾಳತೆ ಇರುತ್ತೆ." ಎಂದಿದ್ದಾರೆ.

More from Filmibeat

English summary
Neethu Vanajakshi about her transformation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X