ಬಾತ್‌ಟಬ್‌ನಲ್ಲಿ ನಿವೇದಿತಾ ಗೌಡ ಬೋಲ್ಡ್ ಅವತಾರ, ಇನ್ನೇನು ಅದೊಂದೇ ವಿಡಿಯೋ ಬಾಕಿ ಎಂದ ಜನ..!

ಹೆಸರು ಸಂಪಾದಿಸುವುದು ಕಷ್ಟ. ಆದರೆ ಅದೇ ಹೆಸರನ್ನು ಹಾಳು ಮಾಡಿಕೊಳ್ಳುವುದು ತುಂಬಾನೇ ಸುಲಭ. ಇದಕ್ಕೆ ನಿವೇದಿತಾ ಗೌಡ ಸದ್ಯದ ಅತ್ಯುತ್ತಮ ಉದಾಹರಣೆ. ಹೌದು, ಮೊದಲೆಲ್ಲ ಬಾರ್ಬಿ ಡಾಲ್, ನಿವ್ವಿ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಜನ ಇವತ್ತು ನಿವೇದಿತಾ ಗೌಡ ಅವರ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮನಸೋ ಇಚ್ಛೆ ಕಾಮೆಂಟ್ ಮಾಡುತ್ತಿದ್ದಾರೆ.

ಈ ಅಪಾಯಕಾರಿ ಬೆಳವಣಿಗೆಗೆ ನಿವೇದಿತಾ ಗೌಡ ಅವರಲ್ಲದೇ ಬೇರೆ ಯಾರು ಕಾರಣ ಅಲ್ಲ. ಆದರೂ ಕೂಡ ನಿವೇದಿತಾ ಗೌಡಗೆ ಈ ವಿಚಾರದ ಅರಿವು ಆಗುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ನಿವೇದಿತಾ ಗೌಡ ಅವರ ಬಟ್ಟೆಯ ಸೈಜ್ ಇನ್ನೂ ಕಡಿಮೆಯಾಗುತ್ತಿದೆ. ಇದಕ್ಕೆ ಇವತ್ತು ನಿವೇದಿತಾ ಗೌಡ ಹಂಚಿಕೊಂಡ ಫೋಟೊ ಮತ್ತೊಂದು ಸಾಕ್ಷಿ.

bigg-boss-fame-niveditha-gowda-brutally-trolled-for-sharing-pictures-from-her-bathtub

ಹೌದು, ಕಳೆದೊಂದು ವರ್ಷದಲ್ಲಿ ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ನಿವೇದಿತಾ ಪ್ರತಿ ಬಾರಿ ವಿಡಿಯೋ ಮಾಡಿದಾಗ ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳು ಹೇಳಲಾಗದಷ್ಟು ಅಸಹ್ಯ ಮತ್ತು ಅಶ್ಲೀಲವಾಗಿರುತ್ತವೆ.

ಆದರೂ ಕೂಡ ನಿವೇದಿತಾ ಗೌಡ ತಲೆ ಕೆಡಿಸಿಕೊಂಡಿಲ್ಲ. ರೀಲ್ಸ್ ಮಾಡುವುದನ್ನು ಬಿಟ್ಟಿಲ್ಲ. ಇದಕ್ಕೆ ಮತ್ತೊಂದು ಕೈಗನ್ನಡಿ ಎನ್ನುವಂತೆ ನಿವೇದಿತಾ ಗೌಡ ತಮ್ಮ ನೆಚ್ಚಿನ ಬಾತ್‌ರೂಮ್‌ಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸೀದಾ ಬಾತ್ ಟಬ್‌ನಲ್ಲಿ ಅಡ್ಡಡ್ಡ ಉದ್ದುದ್ದ ಮಲಗಿ ಫೋಸ್ ನೀಡಿದ್ದಾರೆ. ಲಾಂಗ್ ಡ್ರೆಸ್‌ನಲ್ಲಿ ಎದೆಯ ಸೀಳು ಕಾಣುವಂತೆ ನಿವೇದಿತಾ ಗೌಡ ಕ್ಯಾಮರಾಗೆ ಫೋಸ್ ನೀಡಿದ್ದಾರೆ.

ಎಂದಿನಂತೆ ನಿವೇದಿತಾ ಗೌಡ ಅವರ ಈ ಅವತಾರಕ್ಕೂ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಟ್ರೋಲಿಗರಿಗೆ ಮತ್ತೊಮ್ಮೆ ನಿವೇದಿತಾ ಗೌಡ ಅವರ ಲುಕ್ ಆಹಾರವೂ ಆಗಿದೆ. ಈ ಫೋಟೊಗಳ ನೆಪದಲ್ಲಿ ನಿವೇದಿತಾ ಗೌಡ ಅವರನ್ನು ನಿಂದಿಸುವ ಹೀಯಾಳಿಸುವ ಕೆಲಸವನ್ನುಅನೇಕರು ಮುಂದುವರೆಸಿದ್ದು. ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಓದಲು ಆಗದಷ್ಟು ಈ ಕಾಮೆಂಟ್‌ಗಳ ಅಸಹ್ಯಕರವಾಗಿವೆ. ಹೀಗಾಗಿಯೇ ತಮಗೆ ಬಂದ ಈ ಕಾಮೆಂಟ್‌ಗಳನ್ನು ನಿವೇದಿತಾ ಗೌಡ ಕೊನೆ ಪಕ್ಷ ಓದುತ್ತಾರಾ ಇಲ್ಲವಾ ಎನ್ನುವ ಅನುಮಾನ ಕೂಡ ಅನೇಕರನ್ನು ಈಗ ಕಾಡುತ್ತಿದೆ.

ಇನ್ನು ನಿವೇದಿತಾ ಗೌಡ ಅವರಿಗೆ ಮೊದಲಿಂದ ತಮ್ಮ ಮನೆಯ ಬಾತ್‌ರೂಮ್‌ ಮೇಲೆ ವಿಶೇಷವಾದ ವ್ಯಾಮೋಹ ಇದೆ. ಲಿವಿಂಗ್ ರೂಮ್‌ನಲ್ಲಿಗಿಂತ ತಮ್ಮ ಅಭಿಮಾನಿಗಳಿಗೆ ಇವರು ಬಾತ್ ರೂಮ್‌ದಿಂದನೇ ದರ್ಶನ ನೀಡಿದ್ದು ಹೆಚ್ಚು. ಹೀಗಾಗಿಯೇ ಅನೇಕರು ಇವರ ಈ ಫೋಟೊಗೆ ಬಾತ್‌ರೂಮ್ ಸ್ಟಾರ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ನಿವೇದಿತಾ ಗೌಡಗೆ ಹೊಸ ಬಿರುದನ್ನು ಕೂಡ ನೀಡಿದ್ದಾರೆ.

ಇನ್ನುಳಿದಂತೆ ರೀಲ್ಸ್ ಮಾಡುವ ಅಭ್ಯಾಸ ಹೊರತು ಪಡಿಸಿದರೆ ನಿವೇದಿತಾ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ ಸೇರಿ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಮುದ್ದು ರಾಕ್ಷಸಿ ಕೂಡ ಒಂದು. ಈ ಚಿತ್ರದಲ್ಲಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ತೆರೆಹಂಚಿಕೊಂಡಿದ್ದಾರೆ.ಈ ವರ್ಷ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X