ಟೂ ಪೀಸ್ ಬಿಕಿನಿಯಲ್ಲಿ ನಿವೇದಿತಾ ಗೌಡ ಪೋಸ್; ಸೋನು ತಂಗಿ ಎಂದು ಟ್ರೋಲ್

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹಾಟ್ ಅವತಾರದಲ್ಲಿ ಫೋಟೊ, ವೀಡಿಯೋ ಶೇರ್ ಮಾಡುತ್ತಿದ್ದಾರೆ. ಅದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಟೀಕಿಸುತ್ತಾರೆ. ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ಅದ್ಯಾವುದಕ್ಕೂ ನಿವಿ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಎಷ್ಟೇ ಟ್ರೋಲ್ ಮಾಡಿದರೂ ತಮ್ಮ ಮೈಮಾಟ ಪ್ರದರ್ಶನ ಕಮ್ಮಿ ಮಾಡುತ್ತಿಲ್ಲ. ಅದರಲ್ಲೂ ಚಂದನ್ ಶೆಟ್ಟಿಯಿಂದ ಡಿವೋರ್ಸ್ ಪಡೆದ ಬಳಿಕ ಗ್ಲಾಮರ್ ಡೋಸ್ ಹೆಚ್ಚಿಸಿಬಿಟ್ಟಿದ್ದಾರೆ. ಇತ್ತೀಚೆಗೆ ವಿದೇಶದಲ್ಲಿ ನಿವೇದಿತಾ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಿಸಿದ್ದರು. ಸ್ನೇಹಿತರ ಜೊತೆ ಥೈಲ್ಯಾಂಡ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು.

Bigg Boss Fame Niveditha Gowda trolled for wearing a bikini

ನಿವಿ ಯಾವುದೇ ಫೋಟೊ, ವೀಡಿಯೋ ಶೇರ್ ಮಾಡಿದರೂ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಎಲ್ಲಾ ಗೊತ್ತಿದ್ದೂ ಬೇಕಂತಲೇ ಆಕೆ ಪೋಸ್ಟ್ ಮಾಡುತ್ತಾರೆ ಎನ್ನುವುದು ಕೆಲವರ ವಾದ. ಸದ್ಯ ಬಿಕಿನಿ ತೊಟ್ಟು ಹೊಸ ವೀಡಿಯೋ ಹಂಚಿಕೊಂಡಿದ್ದಾರೆ. ಕೇವಲ 3 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ 1400ಕ್ಕೂ ಹೆಚ್ಚು ಕಾಮೆಂಟ್ಸ್ ಬಂದಿದೆ.

ಕೆಲವೇ ಗಂಟೆಗಳ ಹಿಂದೆ ಕೆಂಪು ಬಣ್ಣದ ಬಿಕಿನಿ ತೊಟ್ಟು ಅದರ ಮೇಲೆ ಪಾರದರ್ಶಕ ಮೇಲು ಹೊದಿಕೆ ತೊಟ್ಟು ನಿವೇದಿತಾ ವೀಡಿಯೋ ಹಂಚಿಕೊಂಡಿದ್ದರು. ಇದೀಗ ಬಿಳಿ ಬಣ್ಣದ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದಾರೆ. ಮೇಲೆ ಸವನ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದ್ದು ಸೋನು ಶ್ರೀನಿವಾಸ ತಂಗಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಹಿಂದೆ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಮಾಲ್ಡೀವ್ಸ್ ಪ್ರವಾಸದ ವೇಳೆ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದು ಭಾರೀ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ವೀಡಿಯೋ ಮಾಡಿ ಗಮನ ಸೆಳೆದವರು ನಿವೇದಿತಾ ಗೌಡ. ಬಳಿಕ ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಹೋಗಿದ್ದರು. ಇದೇ ವೇಳೆ ಮತ್ತೊಬ್ಬ ಸ್ಪರ್ಧಿ ಚಂದನ್ ಶೆಟ್ಟಿ ಪರಿಚಯ, ಸ್ನೇಹ ಮೂಡಿತ್ತು. ಶೋ ಮುಗಿಸಿ ಹೊರಬಂದ ಮೇಲೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು.

ಕೆಲ ಭಿನ್ನಾಭಿಪ್ರಾಯಗಳಿಂದ ಚಂದನ್- ನಿವೇದಿತಾ ದಂಪತಿ ಪರಸ್ಪರ ಒಪ್ಪಿ ವಿಚ್ಛೇದನ ಪಡೆದಿದ್ದರು. 'ಮುದ್ದು ರಾಕ್ಷಸಿ' ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ. ಚಂದನ್ ಆಲ್ಬಮ್ ಸಾಂಗ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ನಿವೇದಿತಾ ತಮ್ಮದೇ ಪ್ರಪಂಚದಲ್ಲಿ ಕಳೆದು ಹೋಗಿದ್ದಾರೆ.

ಡಿವೋರ್ಸ್ ಬಳಿಕ ಕೂಡ ಚಂದನ್- ನಿವಿ 'ಮುದ್ದು ರಾಕ್ಷಸಿ' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇಬ್ಬರೂ ಡಿವೋರ್ಸ್ ಪಡೆಯುವ ಮುನ್ನ ಬಹುತೇಕ ಶೂಟಿಂಗ್ ಮುಗಿದಿತ್ತು. ಆದರೆ ಒಂದು ವಾರದ ಮಟ್ಟಿಗೆ ಬಳಿಕ ಚಿತ್ರೀಕರಣ ನಡೆಸಿದರು. ಪುನೀತ್ ಶ್ರೀನಿವಾಸ್ ಎಂಬುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲು ಚಿತ್ರಕ್ಕೆ 'ಕ್ಯಾಂಡಿಕ್ರಶ್' ಎಂಬ ಟೈಟಲ್ ಇತ್ತು. ಬಳಿಕ ಬದಲಿಸಲಾಗಿತ್ತು.

ನಿವೇದಿತಾ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ 19 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಸಾಕಷ್ಟು ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಆಕೆಯ ಪೋಸ್ಟ್‌ಗಳಿಗೆ ಮೆಚ್ಚುಗೆ ಸೂಚಿಸುತ್ತಾರೆ. ಇನ್ನು ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಕಾಮೆಂಟ್ಸ್ ಸೆಕ್ಷನ್ ಸಹ ಆಫ್ ಮಾಡದೇ ನಿವಿ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ.

More from Filmibeat

English summary
Netizens troll Niveditha Gowda for her latest bikini video;
Read more about: bigg boss sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X