"ಖ್ಯಾತ ಸಂಗೀತ ನಿರ್ದೇಶಕನ ಹೃದಯಾಘಾತಕ್ಕೆ ಆರು ಅಡಿ ಎತ್ತರದ ಮೃಗ ಕಾರಣ": ಪ್ರಶಾಂತ್ ಸಂಬರ್ಗಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇತ್ತ ದರ್ಶನ್ ಬಗ್ಗೆ ನಾನಾ ಆರೋಪಗಳು ಕೇಳಿಬರ್ತಿದೆ. ಈ ಹಿಂದೆ ದರ್ಶನ್ ಹಾಗೂ ಆಪ್ತರ ರೀತಿ ರಿವಾಜು ಹೇಗಿರುತ್ತದೆ ಎನ್ನುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ದರ್ಶನ್ ವಿರುದ್ಧ ಪ್ರಶಾಂತ್ ಸಂಬರ್ಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ಆಗಿದ್ದಾರೆ. ಈ ಹಿಂದೆ ಸಾಕಷ್ಟು ವಿಚಾರಗಳ ಬಗ್ಗೆ ಅವರು ದನಿ ಎತ್ತಿದ್ದರು. ನನಗೆ ಪ್ರಚಾರ ಹುಚ್ಚು ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದೀನಿ ಎಂದುಕೊಂಡರೂ ಪರವಾಗಿಲ್ಲ. ನಾನು ಹೇಳಬೇಕು ಎಂದುಕೊಂಡಿರುವುದನ್ನು ಹೇಳುತ್ತೇನೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ದರ್ಶನ್ ಅರೆಸ್ಟ್ ಬಳಿಕ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ದರ್ಶನ್ ಬೆದರಿಕೆಯಿಂದಲೇ ಖ್ಯಾತ ಸಂಗೀತ ನಿರ್ದೇಶಕರೊಬ್ಬರಿಗೆ ಹೃದಯಾಘಾತವಾಗಿತ್ತು ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

Bigg Boss fame Prashanth Sambargi Shocking Allegations on Actor Darshan

"ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು TV ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರೋ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ ಹಾರ್ಟ್ ಅಟ್ಯಾಕ್ ಆಯಿತು. ಇದಕ್ಕೆ ಕಾರಣ, ರೌಡಿ ಬಾಸ್(D boss is now R Boss rowdy boss) ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ" ಎಂದು ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಶಾಂತ್ ಸಂಬರ್ಗಿ ನೇರವಾಗಿ ದರ್ಶನ್ ಹೆಸರು ಹೇಳದಿದ್ದರೂ ಆತನ ವಿರುದ್ಧವೇ ಆರೋಪ ಹೊರಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ಮತ್ತೊಂದು ಪೋಸ್ಟ್‌ನಲ್ಲಿ "ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಈ ಅಮಾಯಕ ರೇಣುಕಾ ಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೊಗರಿದರು ಕೇಳದೆ ಬಲವಂತವಾಗಿ ಚಿಕನ್ ಪೀಸ್ ಬಾಯಿಗೆ ತುರಿಕಿದನು ಈ ರೌಡಿ ಬಾಸ್"

"ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ ,ಈ ದೈತ್ಯಾಕಾನ ಸೂಚನೇಯಂತೆ ಮಧ್ಯಾಹ್ನದ ಊಟದಲ್ಲಿ ನಾನ್‌ವೆಜ್ ಮಾಂಸವನ್ನು ಬೆರೆಸಿ ನೀಡಲಾಯಿತು.ಇವಳು ಅದನ್ನು ತಿನ್ನುವಾಗ ಈ ದುರತ್ಮ ದುರ್ಯೋದನಂತೆ ಗಹಗಹಿಸಿ ನಕ್ಕನಂತೆ. ತು ಇವನೊಬ್ಬ ಹೆರನೋವುಗ ಮೃಗ" ಎಂದು ಪ್ರಶಾಂತ್ ಸಂಬರಗಿ ಬರೆದುಕೊಂಡಿದ್ದಾರೆ.

ಆ ಸಂಗೀತ ನಿರ್ದೇಶಕ ಯಾರು ಎಂದು ಪ್ರಶಾಂತ್ ಸಂಬರ್ಗಿ ಹೇಳಿಲ್ಲ. ಆದರೆ 4 ವರ್ಷಗಳ ಹಿಂದೆ ಅರ್ಜುನ್ ಜನ್ಯಾಗೆ ಹೃದಯಾಘಾತವಾಗಿತ್ತು. ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಮನೆಯಲ್ಲಿರುವಾಗ ಈ ಘಟನೆ ಸಂಭವಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಶೋಗಳಿಗೆ ಅರ್ಜುನ್ ಜನ್ಯಾ ತೀರ್ಪುಗಾರರಾಗಿದ್ದರು. ಹಾಗಾಗಿ ಅಭಿಮಾನಿಗಳು ಪ್ರಶಾಂತ್ ಸಂಬರ್ಗಿ ಹೇಳುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇರಬಹುದಾ? ಎಂದು ಗೆಸ್ ಮಾಡುತ್ತಿದ್ದಾರೆ.

'ರಾಬರ್ಟ್' ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದರು. ಆಕೆಗೆ ಊಟದಲ್ಲಿ ನಾನ್‌ವೆಜ್ ಬೆರೆಸಿ ಕೊಟ್ರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಪ್ರಶಾಂತ್ ಸಂಬರ್ಗಿ ಪೋಸ್ಟ್ ವೈರಲ್ ಆಗ್ತಿದೆ.

More from Filmibeat

English summary
Prashanth Sambargi Face book post on Datshan goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X