"ಲಾಸ್ಟ್ ವಾರ್ನಿಂಗ್.. ನನ್ನ ಬಗ್ಗೆ ಹುಷಾರಾಗಿರಿ"; ಪ್ರಥಮ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

ನಟ ಪ್ರಥಮ್‌ ತಮಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ ಎಂದು ತಿಂಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರಥಮ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ಕೆಲ ಅಂಧಾಭಿಮಾನಿಗಳ ಬಗ್ಗೆ ಬೇಸರ ಹೊರ ಹಾಕಿದ್ದರು. ಆದರೆ ಈ ಹೇಳಿಕೆ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಪ್ರಥಮ್ ಮಾತನಾಡಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ದರ್ಶನ್‌ ಅಭಿಮಾನಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದೆ ಎನ್ನಲಾಗಿತ್ತು. ಕೆಲವರು ಮಾಧ್ಯಮಗಳ ಮುಂದೆಯೇ ಕೂಗಾಡಿದ್ದ ವೀಡಿಯೋಗಳು ವೈರಲ್ ಆಗಿತ್ತು. ಈ ಸಂಬಂಧ ಚೇತನ್ ಎಂಬ ದರ್ಶನ್ ಅಭಿಮಾನಿಯನ್ನು ಪೊಲೀಸರು ವಶಕ್ಕೆ ಪಡೆದು ಬುದ್ಧಿ ಹೇಳಿ ಕಳುಹಿಸಿದ್ದರು. ಆತ ಕ್ಷಮೆ ಕೇಳಿದ್ದ ವೀಡಿಯೋ ಕೂಡ ಹರಿದಾಡಿತ್ತು.

Bigg Boss Fame Pratham once again warns at Darshan fans

ಮಾಧ್ಯಮಗಳ ಜೊತೆ ಮಾತನಾಡಿದ್ದ ಪ್ರಥಮ್ "ದರ್ಶನ್ ಅವರನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ಕೆಲ ಅಂಧಾಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಬಾರಿಸಿ ಓಡಿಸಬೇಕು" ಎಂದಿದ್ದರು.

ಪ್ರಥಮ್ ಎಲ್ಲಾ ದರ್ಶನ್ ಅಭಿಮಾನಿಗಳಿಗೆ ಹೀಗೆ ಹೇಳಿದ್ದಾರೆ ಎನ್ನುವಂತೆ ವೀಡಿಯೋ ತಿರುಚಿ ವೈರಲ್ ಮಾಡಲಾಗಿತ್ತು. ಪರಿಣಾಮ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬೆದರಿಕೆ ಕರೆಗಳು ಬರುತ್ತಿದ್ದಂತೆ ಪ್ರಥಮ್ ದೂರು ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. "ಮೂರ್ನಾಲ್ಕು ದಿನಗಳಿಂದ ಬೆದರಿಕೆ ಕರೆಗಳು ಬರ್ತಿದ್ದವು. ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದೇನೆ. ಎನ್‌ಸಿಆರ್ ಆಗಿದೆ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರೆಸ್ಟ್ ಮಾಡೋದು ಬೇಡ ವಾರ್ನ್ ಮಾಡಿ ಎಂದು ಹೇಳಿದ್ದೇನೆ" ಎಂದಿದ್ದರು.

ಪೊಲೀಸರು ಬೆದರಿಕೆ ಹಾಕುತ್ತಿದ್ದರನ್ನು ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿರುವ ಬಗ್ಗೆ ಪ್ರಥಮ್ ಆಗಾಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸದ್ಯ ಪ್ರಥಮ್ ಈ ಬಗ್ಗೆ ಇಬ್ಬರು ಮಾತನಾಡಿರುವ ವೀಡಿಯೋ ಹಂಚಿಕೊಂಡಿದ್ದಾರೆ. "ಅರ್ಥ ಮಾಡ್ಕೊಳ್ಳಿ; ಫ್ಯಾನ್ಸ್‌ನ ಅವಮಾನ ಮಾಡ್ಲೇಬೇಕು ಅಂತಿದ್ರೆ ಫೇಸ್‌ಬ್ಲರ್ ಮಾಡದೇ ಒರಿಜಿನಲ್ ಹಾಕ್ತಿದ್ದೆ" ಎಂದಿದ್ದಾರೆ.

"ನನಗೆ ನಿಮ್ಮ ಕುಟುಂಬದ ಚಿಂತೆ. ಕೆಟ್ಟ ಟ್ರೋಲ್ ಮಾಡ್ತಿರೋ ಎಲ್ಲರ ಮೇಲೂ FIR ಆಗಿದೆ.station ಅಲೀತಿದ್ದಾರೆ. ಫೇಕ್ ಪ್ರೋಫೈಲ್‌ ಅಂತ ಕಣ್ಣೀರಿಡ್ತಾವ್ರೆ. ಯಾರನ್ನೂ ಅರೆಸ್ಟ್ ಮಾಡ್ಬೇಡಿ ಅಂತ ಕೇಳ್ಕೊಂಡಿದ್ದೀನಿ. ಲಾಸ್ಟ್ ವಾರ್ನಿಂಗ್, ಪ್ರಥಮ್ ಬಗ್ಗೆ ಹುಷಾರಾಗಿರಿ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ವೀಡಿಯೋದಲ್ಲಿರುವವರು ಮಾತನಾಡಿ "ಪ್ರಥಮ್ ಸರ್‌ಗೂ ನಮ್ ಕೇಸ್‌ಗೂ ಸಂಬಂಧ ಇಲ್ಲ. ಫೇಕ್ ಐಡಿ ಕ್ರಿಯೇಟ್ ಮಾಡ್ಕೊಂಡು ಯಾರೋ ಮಾಡ್ತಿದ್ದಾರೆ. ಕಾನೂನು ಪ್ರಕಾರ ಏನೇ ಇದ್ದರು ಪೊಲೀಸರು ನೋಡಿಕೊಳ್ತಾರೆ" ಎಂದಿದ್ದಾನೆ. ಮತ್ತೊಬ್ಬ ಮಾತನಾಡಿ "ನಮ್ಮ ನಂಬರ್ ಬಳಸಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹೀಗೆ ಮಾಡ್ತಿದ್ದಾರೆ. ಸೆಲೆಬ್ರೆಟಿ ಪ್ರೊಫೈಲ್‌ಗೆ ಹೋಗಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾರೆ. ನಮಗೂ ಇದಕ್ಕೂ ಸಂಬಂಧವಿಲ್ಲ" ಎಂದಿದ್ದಾನೆ.

More from Filmibeat

English summary
Pratham onemore post warning legal action to darshan fans;
Read more about: pratham darshan fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X