"ಮೀನಾ ತೂಗದೀಪ ಅವರ ಫೋಟೋ ವಿರೂಪ ಮಾಡಿ ಪೋಸ್ಟ್ ಮಾಡಿರುವುದು ನೋಡಿ ಬೇಸರವಾಯ್ತು"; ಪ್ರಥಮ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಗಜಪಡೆ ಟ್ವೀಟ್ ವಿವಾದ ಇನ್ನು ತಣ್ಣಗಾಗಿಲ್ಲ. ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಮಸ್ತ ರಾಜವಂಶದ ಅಭಿಮಾನಿಗಳು ಇಂದು(ಏಪ್ರಿಲ್ 8) ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಮತ್ತೊಂದು ಕಡೆ ವಿಜಯಲಕ್ಷ್ಮಿ ದರ್ಶನ್, ಮೀನಾ ತೂಗುದೀಪ ಬಗ್ಗೆಯೂ ಕೆಲವರು ಅವಹೇಳಕಾರಿ ಪೋಸ್ಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ತಿಕ್ಕಾಟ ಜೋರಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತಾಗಿ ಹಾಕಿದ್ದ ಅವಹೇಳನಕಾರಿ ಪೋಸ್ಟ್‌ಗೆ ಪ್ರತಿಯಾಗಿ ಕೆಲ ಕಿಡಿಗೇಡಿಗಳು ವಿಜಯಲಕ್ಷ್ಮಿ ದರ್ಶನ್ ಹಾಗೂ ಮೀನಾ ತೂಗುದೀಪ ಬಗ್ಗೆಯೂ ಇಂತದ್ದೇ ಕೆಟ್ಟ ಪದಗಳನ್ನು ಬಳಸಿ ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಬೆಂಬಲ ಸೂಚಿಸಿದ್ದರು. "ಅದ್ಭುತ ವ್ಯಕ್ತಿತ್ವದ ಅಶ್ವಿನಿ ಅವರಿಗೆ ನಮ್ಮ ಬೆಂಬಲ, ನೀವೇ ನಿಮ್ಮ ಶಕ್ತಿ, ಐಡೆಂಟಿಟಿ ಇಲ್ಲದೋರು ನಿಮ್ಮ ವ್ಯಕ್ತಿತ್ವವನ್ನ ಅವಮಾನಿಸಿದರೆ ಯಾರನ್ನ ಕೇಳೋದು? ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತಾಡಿದ್ರೂ ಏನೂ ಮಾಡದ ಕಾನೂನು ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ. ಎಲ್ಲರೂ ಅಶ್ವಿನಿ ಮೇಡಂ ಫೋಟೋ ಹಾಕಿ ಬೆಂಬಲಿಸೋಣ"
"ಅಪ್ಪು ಸರ್ ಸಹಾಯ ತಗೊಂಡು ಬೆಳೆದ ಬಹಳಷ್ಟು ಪುಣ್ಯಾತ್ಮರು ಇವತ್ತು ಜಾಣಕಿವುಡರಾಗಿದ್ದಾರೆ; ಅಶ್ವಿನಿ ಮೇಡಂರನ್ನ ಕರೆಸಿ ತಮ್ಮ ಸಿನಿಮಾ ಪ್ರಚಾರ ಮಾಡಿದವರು ಇವತ್ತು ಮೂಕರಾಗಿದ್ದರೆ. ನಾಚಿಕೆ ಆಗ್ಬೇಕು ನಿಮ್ಗೆಲ್ಲಾ. ಆತ್ಮಾವಲೋಕನ ಮಾಡಿಕೊಳ್ಳೋ ಸಮಯವಿದು" ಎಂದು ಟ್ವೀಟ್ ಮಾಡಿದ್ದರು.
ಇದೀಗ ಮೀನಾ ತೂಗುದೀಪ ಅವರ ಬಗ್ಗೆ ಹಾಕುತ್ತಿರುವ ಅವಹೇಳನಕಾರಿ ಪೋಸ್ಟ್ ಬಗ್ಗೆಯೂ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ. "ನಾನು ತುಂಬಾ ಗೌರವಿಸೋ, ಪ್ರೀತಿಸೋ ಮೀನಾ ತೂಗದೀಪ ಶ್ರೀನೀವಾಸ್‌ರವರ ಫೋಟೋ ವಿರೂಪ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿರೋದು ನೋಡಿ ತೀವ್ರ ಬೇಸರವಾಯ್ತು. ಯಾರೇ ಆಗ್ಲಿ ಮೊದಲು ಮಹಿಳೆಯರನ್ನ ಗೌರವಿಸಿ. ಮೀನಾ ತೂಗದೀಪ ಶ್ರೀನೀವಾಸ್ ಅಮ್ಮನವರು ಮತ್ತು ಅಶ್ವಿನಿ ಮೇಡಂರವರ ಬಗ್ಗೆ ಅವಹೇಳನ ಮಾಡಿರೋ ಎಲ್ಲರಿಗೂ ಶೀಘ್ರದಲ್ಲೇ ಕಾನೂನಿನ ಕ್ರಮವಾಗಲಿ" ಎಂದು ಆಗ್ರಹಿಸಿದ್ದಾರೆ.
ಎಡಗೈ ಸರ್ಜರಿ ಬಳಿಕ ನಟ ದರ್ಶನ್ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಥಮ್, "ಶೀಘ್ರ ಗುಣಮುಖರಾಗಿ ದರ್ಶನ್ ಸರ್, ಮೊನ್ನೆ ನಡೆದ ಸರ್ಜರಿಯಿಂದ ಚೇತರಿಸಿಕೊಂಡು ಮತ್ತದೇ ಹೊಸ ಹುರುಪಿನಿಂದ ಅಭಿಮಾನಿಗಳನ್ನ ರಂಜಿಸಿ..ಚೆನ್ನಾಗಿ ನಿದ್ರೆ ಮಾಡಿ. ಶೀಘ್ರದಲ್ಲೇ ಡೆವಿಲ್ ಸಿನಿಮಾದ ಹೊಸ ಅಪ್‌ಡೇಟ್ ಜೊತೆಗೆ ನಿಮ್ಮನ್ನ ಎದುರು ನೋಡಲು ಉತ್ಸಾಹದಿಂದ ಕಾಯ್ತಾ ಇದೀವಿ. ಶುಭವಾಗಲಿ ಸರ್ ನಿಮ್ಗೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











