ಪ್ರಥಮ್ ಹಲ್ಲೆಗೆ ಯತ್ನ, ಬೆದರಿಕೆ? ಲಾಯರ್ ಜಗದೀಶ್- ಪ್ರಥಮ್ ಆಡಿಯೋ ವೈರಲ್
ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಲಾಯರ್ ಜಗದೀಶ್ ಮಾತನಾಡಿರುವ ಫೋನ್ ಕಾಲ್ ಆಡಿಯೋ ಲೀಕ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಪ್ರಥಮ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪ್ರಥಮ್ ಮೇಲೆ ದಾಳಿಗೆ ಯತ್ನ ನಡೆದ ಬಗ್ಗೆಯೂ ಫೋನ್ ಸಂಭಾವಣೆ ವೇಳೆ ಮಾತನಾಡಿರುವುದು ದಾಖಲಾಗಿದೆ.
ಲಾಯರ್ ಜಗದೀಶ್ ಕರೆ ಮಾಡಿ ಪ್ರಥಮ್ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ನಾನು ಮಾತನಾಡುವ ಯಾವುದೇ ವಿಷಯ ಬಹಿರಂಗವಾಗಬಾರದು, ಎಂದು ಹೇಳುತ್ತಲೇ ಪ್ರಥಮ್ ದೊಡ್ಡಬಳ್ಳಾಪುರ ದೇವಸ್ಥಾನದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. "ಪ್ರಥಮ್ ಮಾತನಾಡಿ ನನ್ನನ್ನು ದೇವಸ್ಥಾನವೊಂದರ ಪೂಜೆ ಕರೆದರು. ಹಾಗಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಈ ರೀತಿ ಆಯಿತು" ಎಂದು ಹೇಳಿದ್ದಾರೆ.

ಪ್ರಥಮ್ ಮಾತಿಗೆ ಪ್ರತಿಕ್ರಿಯಿಸಿರುವ ಲಾಯರ್ ಜಗದೀಶ್ "ಇಷ್ಟೆಲ್ಲಾ ಆದರೂ ನೀನು ಯಾಕೆ ಪ್ರತಿಕ್ರಿಯಿಸಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಲಿಲ್ಲ" ಎಂದು ಕೇಳಿದ್ದಾರೆ. ಬಳಿಕ ಮಾತು ಮುಂದುವರೆಸಿದ ಪ್ರಥಮ್ "20 ಜನ ಹುಡುಗರು ನನ್ನ ಕಾರಿಗೆ ಮುತ್ತಿಗೆ ಹಾಕಿದರು, ಮೇಡಂ ಕರಿತ್ತಿದ್ದಾರೆ ಬನ್ನಿ ಅಂದ್ರು. ನಾನು ಯಾರು ಅಂದೆ. ರಕ್ಷಕ್ ಬುಲೆಟ್ ಕೂಡ ಅಲ್ಲೇ ಆ ರೌಡಿಗಳ ಜೊತೆ ಇದ್ದ. ವೆಪೆನ್ಸ್ ಕೂಡ ಹೊರಗೆ ತೆಗೆದಿದ್ದರು. ರಕ್ಷಕ್ ಸಹವಾಸ ಸರಿಯಿಲ್ಲ" ಎಂದಿದ್ದಾರೆ.
"ಬಾಸ್ ಬಗ್ಗೆ ಏನೋ ಮಾತಾಡ್ದೆ ಎಂದು ಅವಾಜ್ ಹಾಕಿದರು. ಯಾವಾಗ ಏನು? ಅಂದೆ. ಹೋದ ವರ್ಷ ಮಾತನಾಡಿದ್ದು ಅಂದ್ರು. ನಾನು ಸರಿಯಾಗಿ ವೀಡಿಯೋ ನೋಡಿ ಆಮೇಲೆ ಮಾತಾಡಿ ಅಂದೆ. ನೋಡ ನೋಡುತ್ತಲೇ ಡ್ರ್ಯಾಗರ್ ತೆಗೆದ್ರು. ಚುಚ್ಚಿ ಬಿಡ್ತೀವಿ ಎಂದು ಹೆದರಿಸಿದರು. ಬಾಸ್ ಬಗ್ಗೆ ಮಾತನಾಡಬೇಡ. ರಕ್ಷಕ್ ಕೂಡ ಅಲ್ಲೇ ಇದ್ದ. ನನ್ನ ಸಿನಿಮಾ ಬಿಡುಗಡೆಯಾಗಬೇಕಿದೆ. ಹಾಗಾಗಿ ನಾನು ದೂರು ನೀಡಲು ಮುಂದಾಗಲಿಲ್ಲ" ಎಂದು ಪ್ರಥಮ್ ಆ ಮಾತನಾಡಿರುವುದು ಗೊತ್ತಾಗುತ್ತಿದೆ.
ವೈರಲ್ ಆಡಿಯೋ ಬಗ್ಗೆ ಪ್ರಥಮ್ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. "ಆಡಿಯೋ ಸ್ಪಷ್ಟನೆ.. 4 ದಿನಗಳ ಹಿಂದೆ ಈ ಘಟನೆ ನಡೆದಿದ್ದು ನಿಜ,ನನ್ನ ಕೆಲಸದಲ್ಲಿ ಬ್ಯುಸಿ ಇದ್ದೆ. ಜಗದೀಶ್‌ರವರು ಫೋನ್ ಮಾಡುತ್ತಲೇ ಇದ್ರು ಅಂತ ಮಾತಾಡಿದೆ. ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಕಿರ್ಲಿಲ್ಲ. ನಾನು ಹೇಗೆ ಎಚ್ಚರಿಕೆಯಿಂದ ಇರ್ಬೇಕು ತಿಳಿದಿದೆ. ನಂಬಿಕೆ ಇಟ್ಟು ಮಾತಾಡಿದಾಗ ರೆಕಾರ್ಡ್ ಮಾಡಿ ಹಾಕಿದ್ರಿಂದ ಇನ್ಮೇಲೆ ಹೇಗೆ ನಂಬೋದು ಹೇಳಿ?" ಎಂದು ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ಶೋನಲ್ಲಿ ಗೆದ್ದ ಹೊರ ಬಂದ ಪ್ರಥಮ್ ಬಳಿಕ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ದೇಶನ, ನಟನೆ, ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. 'ಫಸ್ಟ್ ನೈಟ್ ವಿತ್ ದೆವ್ವ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಪ್ರಥಮ್ ಮಾತನಾಡಿದ್ದ ಮಾತು ವೈರಲ್ ಆಗಿತ್ತು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಬೆದರಿಕೆ ಕರೆಗಳು ಬಂದಿದ್ದಾಗಿ ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಲಾಯರ್ ಜಗದೀಶ್ ಕೂಡ ಪದೇ ಪದೆ ದರ್ಶನ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಮಾತನಾಡಿ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕೆಸರೆರಚಾಟ ನಡೆಯುತ್ತಿರುತ್ತದೆ. ಈ ಹಿಂದೆ ಆಗಂತುಕ ಗುಂಪೊಂದು ಜಗದೀಶ್ ಮೇಲೆ ಹಲ್ಲೆ ನಡೆಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು.


Click it and Unblock the Notifications











