"ಅಂಧಾಭಿಮಾನಿಗಳೇ ಆ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ?"; ಪ್ರಥಮ್ ಪ್ರಶ್ನೆ

ನಟ ದರ್ಶನ್ ಬಂಧನ ಬೆನ್ನಲ್ಲೇ ಪ್ರಥಮ್ ನೀಡಿದ ಹೇಳಿಕೆಯೊಂದು ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಅಂಧಾಭಿಮಾನಿಗಳು ಕೆಂಡಾಮಂಡಲವಾಗಿ ಪ್ರಥಮ್ ವಿರುದ್ಧ ತಿರುಗಿ ಬಿದ್ದಿದ್ದರು. ಬೆದರಿಕೆ ಕರೆಗಳು ಬರ್ತಿವೆ ಎಂದು ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಪ್ರಥಮ್ ಮಾಧ್ಯಮಗಳ ಜೊತೆ ಮಾತನಾಡುತ್ತಾ "ದರ್ಶನ್ ಅವರನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ಕೆಲ ಅಂಧಾಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಬಾರಿಸಿ ಓಡಿಸಬೇಕು" ಎಂದು ಹೇಳಿದ್ದರು. ಈ ಬಗ್ಗೆ ದರ್ಶನ್ ಅಭಿಮಾನಿಗಳು ಕೆಂಡಕಾರಿದ್ದರು.

Bigg Boss Fame Pratham takes an indirect jibe at Darshan fans

ಕೆಲವರು ಫೋನ್ ಕರೆಗಳನ್ನು ಮಾಡಿ ಬೆದರಿಸುತ್ತಿರುವುದಾಗಿ ಪ್ರಥಮ್ ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಮಾತನಾಡಿದ್ದ ಪ್ರಥಮ್ "ಕಳೆದ 2-3 ದಿನಗಳಿಂದ ಬೆದರಿಕೆ ಕರೆಗಳು ಬರ್ತಿದ್ದವು. ಪೊಲೀಸ್ ಠಾಣೆಗೆ ಕಂಪ್ಲೀಟ್ ಮಾಡಿದ್ದೇನೆ. ಎನ್ ಸಿ ಆರ್ ಆಗಿದೆ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರೆಸ್ಟ್ ಮಾಡೋದು ಬೇಡ ವಾರ್ನ್ ಮಾಡಿ ಎಂದು ಹೇಳಿದ್ದೇನೆ" ಎಂದು ಮಾಹಿತಿ ನೀಡಿದ್ದರು.

ಇದೀಗ ಈ ಬಗ್ಗೆ ಪ್ರಥಮ್ ಮತ್ತೆ ಪೋಸ್ಟ್ ಮಾಡಿದ್ದಾರೆ. "ಅಂಧಾಭಿಮಾನಿಗಳೇ;ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆ ಪೊಲೀಸ್ ನೋಟಿಸ್ ಬಂದಮೇಲೆ ಸ್ಟೇಷನ್‌ಗೆ ಬಂದಾಗ ನಾವು ಪ್ರಥಮ್ ಅಭಿಮಾನಿ, ಯಾರೋ ಫೇಕ್ ಪ್ರೊಫೈಲ್ ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ" ವ್ಯಂಗ್ಯವಾಡಿದ್ದಾರೆ.

"ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ಧಿ ಕಲಿಯಲ್ಲ, ಇನ್ಮೇಲೆ ಕಾನೂನಾತ್ಮಕವಾಗಿ ಹೋಗ್ತೀನಿ" ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಕೂಡ ಪ್ರಥಮ್ ಇದೇ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದರು. "ಎಷ್ಟು ಬುದ್ಧಿ ಹೇಳಿದ್ರೂ,ನಮ್ಮ ಪಾಡಿಗೆ ನಾವಿದ್ರೂ ಸಹಾ ಕೇಳ್ತಿಲ್ಲ ಈ ಅಂಧಾಭಿಮಾನಿಗಳು; ಇನ್ನೂ ಅತೀ ಅನಿಸುವಷ್ಟು ಕೆಟ್ಟ ಕಾಮೆಂಟ್, ವೈಯುಕ್ತಿಕ ಅಶ್ಲೀಲ ಸಂದೇಶ ಮಾಡ್ತಿದ್ದೀರಾ;ಎಲ್ಲಾ ದಾಖಲೆ ಪೋಲೀಸರ ಬಳಿ ಇದೆ. ಸ್ಟೇಷನ್‌ನಲ್ಲಿ ನಾಳೆ ಒಂದಷ್ಟು ಅಂಧರಿಗೆ ಟ್ರೀಟ್‌ಮೆಂಟ್ ಸಿಗಲಿದೆ‌. ದಯವಿಟ್ಟು ಇನ್ನಾದರೂ ನಿಮ್ಮ ಜೀವನ ಹಾಳುಮಾಡಿಕೊಳ್ಳದೇ ಚೆನ್ನಾಗಿ ಬದುಕಿ" ಎಂದು ಮನವಿ ಮಾಡಿದ್ದರು.

ಚೇತನ್ ಎಂಬ ದರ್ಶನ್ ಅಭಿಮಾನಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಬುದ್ದಿ ಹೇಳಿದ್ದರು. ಆತನೇ ವೀಡಿಯೋದಲ್ಲಿ ಮಾತನಾಡಿ ನಟ ಪ್ರಥಮ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕ್ಷಮೆ ಕೇಳಿದ್ದ. ಆ ವೀಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇದನ್ನು ಹಂಚಿಕೊಂಡು ಪ್ರಥಮ್ "ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ" ಎಂದಿದ್ದರು.

More from Filmibeat

English summary
Pratham warns legal action to darshan fans once again;
Read more about: pratham darshan fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X