Sanya Iyer:ಕಿರುತೆರೆಯ ಪುಟ್ಟ ಗೌರಿ ಸಾನ್ಯಾ ಅಯ್ಯರ್‌ಗೆ ನಕ್ಷತ್ರವನ್ನೇ ಉಡುಗೊರೆಯಾಗಿ ನೀಡಿದ ಫ್ಯಾನ್ಸ್.. ಏನು ವಿಶೇಷ?

By ಅನಿತಾ ಬನಾರಿ

ಸಾರ್ವಜನಿಕ ವ್ಯಕ್ತಿಗಳ ಹೆಸರನ್ನು ನಕ್ಷತ್ರಗಳಿಗೆ ಇಡುವುದು ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಆಗಿ ಬದಲಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸೆಲೆಬ್ರಿಟಿಗಳ ವಿಚಾರದಲ್ಲಂತೂ ಕೇಳುವುದೇ ಬೇಡ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ಅಭಿಮಾನಿಗಳೇ ಇದೀಗ ಇಂತಹ ಉಡುಗೊರೆಯನ್ನು ನೀಡುತ್ತಿದ್ದಾರೆ. ತಮ್ಮ ನೆಚ್ಚಿನ ನಟ ಅಥವಾ ನಟಿಯ ಹೆಸರನ್ನು ನಕ್ಷತ್ರಕ್ಕೆ ಇಟ್ಟು ಅವರ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಾರೆ.

ಇದೀಗ ಕಿರುತೆರೆ ನಟಿ, ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿ ಸಾನ್ಯಾ ಅಯ್ಯರ್ ಅವರ ಸರದಿ.'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಸಾನ್ಯಾ ಅಯ್ಯರ್ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡರು.

Bigg Boss fame Sanya Iyer recently celebrated her birthday got a special gift from her fans

ಸಾನ್ಯಾ ಅಯ್ಯರ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಮಯದಲ್ಲಿ ಅವರು ಅತ್ಯಮೂಲ್ಯವಾದ ಉಡುಗೊರೆಯೊಂದನ್ನು ಪಡೆದುಕೊಂಡಿದ್ದಾರೆ. ಹೌದು, ಸಾನ್ಯಾ ಅಯ್ಯರ್ ಅವರ ಅಭಿಮಾನಿಗಳು ಸಾನ್ಯಾ ಅವರಿಗೆ ಉಡುಗೊರೆ ನೀಡಿದ್ದು ಆಕೆಯಂತೂ ಸಕತ್ ಖುಷಿಯಲ್ಲಿದ್ದಾರೆ.

ಅದೇನೆಂದರೆ ನಕ್ಷತ್ರವೊಂದಕ್ಕೆ ತಮ್ಮ ನೆಚ್ಚಿನ ನಟಿಯ ಹೆಸರನ್ನು ಆಕೆಯ ಅಭಿ‌ಮಾನಿಗಳು ಇರಿಸಿದ್ದಾರೆ. ಆ ಮೂಲಕ ನಟಿಯ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಾನ್ಯಾ ಐಯ್ಯರ್ ಹುಟ್ಟುಹಬ್ಬಕ್ಕೆ ವಿಶೇಷವಾದ ಉಡುಗೊರೆಯನ್ನು ನೀಡಿ ಸಂಭ್ರಮಿಸಿದ್ದಾರೆ.

Bigg Boss fame Sanya Iyer recently celebrated her birthday got a special gift from her fans

ಸಾನ್ಯಾ ಅಯ್ಯರ್ ಅವರು ಗಿಫ್ಟ್ ಓಪನ್ ಮಾಡುವ ವಿಡಿಯೋದ ತುಣುಕೊಂದು ಇನ್‌ಸ್ಟಾಗ್ರಾಂನಲ್ಲಿ ಸಖತ್ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಅಭಿಮಾನಿಯಿಂದ ಪಡೆದ ಗಿಫ್ಟ್ ಅನ್ನು ಸಾನ್ಯಾ ಓಪನ್ ಮಾಡುವುದನ್ನು ಕಾಣಬಹುದು. ಇದರ ಜೊತೆಗೆ ವಿಡಿಯೋದ ಆರಂಭದಲ್ಲಿ ಇದೊಂದು ಫೋಟೋ ಫ್ರೇಮ್‌ನ ರೀತಿ ಕಾಣಿಸುತ್ತದೆ. ಆದರೆ ಕೊನೆಯಲ್ಲಿ ಅದು ತನ್ನ ಹೆಸರಿನ ನಕ್ಷತ್ರದ ಫೋಟೋ ಎಂದು ತಿಳಿದಾಗ ಸಾನ್ಯಾ ಅವರ ಸಂತಸ ಜಾಸ್ತಿಯಾಗುತ್ತದೆ.

ಆಕಾಶಕಾಯದಲ್ಲಿರುವ ನಕ್ಷತ್ರಕವೊಂದಕ್ಕೆ ತನ್ನ ಹೆಸರಿಡಲಾಗಿದೆ ಎಂದು ತಿಳಿದ ನಟಿ ಸಾನ್ಯಾ ಅಯ್ಯರ್ ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಅಭಿಮಾನಿಗಳು ತಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ಆಕೆ ಕೃತಜ್ಞತೆಗಳನ್ನು ತಿಳಿಸಿದರು. ಅಂದ ಹಾಗೇ ನಕ್ಷತ್ರಗಳಿಗೆ ಮನುಷ್ಯರ ಹೆಸರನ್ನು ಇಡಬಹುದು ಎಂಬ ಅಂಶದ ಬಗ್ಗೆ ತನಗೆ ತಿಳಿದಿರಲಿಲ್ಲವಂತೆ.

ಅಭಿಮಾನಿಗಳು ತನ್ನ ಹುಟ್ಟುಹಬ್ಬವನ್ನು ಇಷ್ಟೊಂದು ವಿಭಿನ್ನ ರೀತಿಯ ಗಿಫ್ಟ್ ನೀಡಿ ಆಚರಿಸಿರುವುದು ಸಾನ್ಯಾ ಅವರಿಗೆ ತುಂಬಾನೇ ಖುಷಿ ನೀಡಿದೆಯಂತೆ. ಇದರ ಜೊತೆಗೆ ಇಂತಹ ಅಮೂಲ್ಯ ಗಿಫ್ಟ್ ಅನ್ನು ನಾನು ಜೀವನದುದ್ದಕ್ಕೂ ಶಾಶ್ವತವಾಗಿ ಕಾಪಾಡಿಕೊಳ್ಳುತ್ತೇನೆ ಎಂದು ಹೇಳಿದ ಸಾನ್ಯಾ ಅಯ್ಯರ್ ವೀಕ್ಷಕರು ನೀಡಿದ ಪ್ರೀತಿಗೆ ಋಣಿಯಾಗಿದ್ದಾರೆ.

ಕಿರುತೆರೆಯ ಮೂಲಕ ಗುರುತಿಸಿಕೊಂಡಿರುವ ಸಾನ್ಯಾ ಅಯ್ಯರ್ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ "ಗೌರಿ" ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಅವರು ನಾಯಕಿಯಾಗಿ ನಟಿಸಲಿದ್ದು ಇಂದ್ರಜಿತ್ ಅವರ ಮಗ ಸರ್ಮಜಿತ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

More from Filmibeat

English summary
Bigg Boss fame Sanya Iyer recently celebrated her birthday got a special gift from her fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X