ಸಿನಿಮಾ ಶೂಟಿಂಗ್ ವೇಳೆ ಬಿದ್ದು ಗಾಯಗೊಂಡ ಬಿಗ್‌ಬಾಸ್ ಖ್ಯಾತಿಯ ಶಶಿ: ವಿಡಿಯೋ ವೈರಲ್

ಬಿಗ್‌ಬಾಸ್ ಕನ್ನಡ ಸೀಸನ್-6ರ ವಿಜೇತ ಶಶಿ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'ಮೆಹಬೂಬ' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ನಟ ಶಶಿ ಗಾಯಗೊಂಡಿದ್ದರು.

ಸಿನಿಮಾ ಚಿತ್ರೀಕರಣದ ವೇಳೆ ಬಿಲ್ಡಿಂಗ್ ಮೇಲೆ ಏರುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಆಯತಪ್ಪಿ ಶಶಿ ಸುಮಾರು 20 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕೊಂಚ ಪೆಟ್ಟಾಗಿದ್ದು ಕಾಲು ಉಳುಕಿತ್ತು. ಅದಕ್ಕೆ ಸಂಬಂಧಿಸಿದ ಚಿತ್ರೀಕರಣದ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ಶಶಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Bigg boss Fame Shashi gets injured on Mehabooba sets, shares health update

"3 ವಾರಗಳ ಹಿಂದೆ ಮೈಸೂರಿನ ಕಾಲೇಜ್‌ವೊಂದರಲ್ಲಿ 'ಮೆಹಬೂಬ' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಆ ಘಟನೆ ನಡೀತು. ಬಳಿಕ ಚಿಕಿತ್ಸೆ ಪಡೆದುಕೊಂಡೆ. ಈಗ ಆರಾಮಾಗಿ ಇದ್ದೀನಿ. ಕೆಳಗೆ ಬೆಡ್ ಹಾಕಿದ್ದರಿಂದ ಹೆಚ್ಚು ಪೆಟ್ಟು ಆಗಲಿಲ್ಲ" ಎಂದು ಶಶಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಡ್ರನ್ ರೈತ ಎಂದೇ ಬಿಗ್‌ಬಾಸ್ ಮನೆಯಲ್ಲಿ ಹೆಸರು ಮಾಡಿದ್ದ ಶಶಿ 6ನೇ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದರು. ಕೃಷಿಯ ಜೊತೆಗೆ ಸಿನಿಮಾಗಳಲ್ಲಿ ಕೂಡ ಶಶಿ ನಟಿಸುತ್ತಿದ್ದಾರೆ. 'ಮೆಹಬೂಬ' ಸಿನಿಮಾ ಮೂಲಕ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಸ್ವತಃ ಶಶಿ ಈ ಚಿತ್ರವನ್ನು ನಿರ್ಮಾಣ ಮಾಡಿ ನಟಿಸಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ಗೊಂಬೆಗಳ ಲವ್' ಖ್ಯಾತಿಯ ಪಾವನಾ ಗೌಡ 'ಮೆಹಬೂಬ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಸಚಿವರಾದ ಚೆಲುವರಾಯ ಸ್ವಾಮಿ ಇತ್ತೀಚೆಗೆ 'ಮೆಹಬೂಬ' ಸಿನಿಮಾ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ಚಿತ್ರಕ್ಕಿದ್ದು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ಸಾಹಿತ್ಯ ಗೀಚಿದ್ದಾರೆ.

Bigg boss Fame Shashi gets injured on Mehabooba sets, shares health update

ಮಾಸ್ ಮಾದ ಸಾಹಸ ನಿರ್ದೇಶನ, ಕಲೈ ನೃತ್ಯ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ 'ಮೆಹಬೂಬ' ಚಿತ್ರಕ್ಕಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿದೆ.

ಕಳೆದ ವರ್ಷ ಬಿಡುಗಡೆಯಾದ 'ಶುಗರ್ ಫ್ಯಾಕ್ಟರಿ' ಚಿತ್ರದ ಅತಿಥಿ ಪಾತ್ರದಲ್ಲಿ ಶಶಿ ನಟಿಸಿದ್ದರು. ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದ ಶಶಿ ಜೆಕೆವಿಕೆ ಕೃಷಿ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಜಾನಪದ ಕೆಲಗಳು ಹಾಗೂ ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಶಶಿ ಡೊಳ್ಳು ಕುಣಿತ, ಪೂಜೆ ಕುಣಿತ, ವೀರಗಾಸೆ, ಕಂಸಾಳೆ ರೀತಿಯ ಕಲೆಗಳನ್ನು ಕಲಿತಿದ್ದಾರೆ. 'ಭೂಮಿಕ' ಎನ್ನುವ ತಂಡ ಕಟ್ಟಿಕೊಂಡು ಹಲವೆಡೆ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ರಾಮನಗರ ಬಳಿ 4 ಎಕರೆ ಜಾಗದಲ್ಲಿ ಕೋಳಿ ಹಾಗೂ ಕುರಿ ಸಾಕಾಣಿಕೆ ಕೂಡ ಮಾಡುತ್ತಿದ್ದಾರೆ.

'ಮೆಹಬೂಬ' ಸಿನಿಮಾ ಬಿಡುಗಡೆಗೂ ಮುನ್ನ 'ಪ್ರೇಮಿಗಳ ಗಮನಕ್ಕೆ' ಎನ್ನುವ ಮತ್ತೊಂದು ಚಿತ್ರದಲ್ಲಿ ಶಶಿ ನಟಿಸುತ್ತಿದ್ದಾರೆ. ಲಿವ್‌ ಇನ್‌ ರಿಲೇಷನ್‌ಶಿಪ್ ಕುರಿತಾದ ಕತೆ ಈ ಚಿತ್ರದಲ್ಲಿದೆ. ವಿನ್ಸೆಂಟ್ ಇನ್ಬುರಾಜ್ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾ ಶೂಟಿಂಗ್ ಕೂಡ ಬಹತೇಕ ಮುಕ್ತಾಯವಾಗಿದೆ. ಚೈತ್ರಾ ಶ್ರೀ ಚಿತ್ರದಲ್ಲಿ ನಾಯಕಿಯಾಗಿ ಶಶಿಗೆ ಸಾಥ್ ಕೊಟ್ಟಿದ್ದಾರೆ.

More from Filmibeat

English summary
Bigg Boss Shashi gets injured while shooting in mysure;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X