ಸೋನು ದತ್ತು ಪಡೆದಿದ್ದಾಗಿ ಹೇಳಿಕೊಂಡಿದ್ದ ಮಗುವಿನ ಹಿನ್ನೆಲೆ ಏನು? ವಿಚಾರಣೆ ವೇಳೆ ರೀಲ್ಸ್ ರಾಣಿ ಹೇಳಿದ್ದೇನು?

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿರುವ ಆರೋಪದಡಿ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ಆಕೆ ವಾಸಿಸುತ್ತಿದ್ದರು. ಅಲ್ಲಿಂದಲೇ ಪೊಲೀಸರು ಇಂದು(ಮಾರ್ಚ್ 22) ಬೆಳಗ್ಗೆ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಸೋನು ಗೌಡ ಅಕ್ರಮವಾಗಿ 8 ವರ್ಷದ ಮಗುವನ್ನು ತಮ್ಮೊಟ್ಟಿಗೆ ಇಟ್ಟುಕೊಂಡಿದ್ದಾರೆ. ಪ್ರಚಾರಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಕಾನೂನಾತ್ಮಕವಾಗಿ ದತ್ತು ಪಡೆಯದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದಾರೆ. ಬಾಲಾಪರಾಧ ಕಾಯ್ದೆ ಹಾಗೂ ಜೆ.ಜೆ ಆ್ಯಕ್ಟ್ ಅಡಿ ಪೊಲೀಸರು ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

Bigg boss fame Sonu Srinivas gowda arrest police enquiry details

ಪೊಲೀಸರ ವಿಚಾರಣೆ ವೇಳೆ ಸೋನುಗೌಡ ಹೇಳಿಕೆ ಮಗು ದತ್ತು ಪಡೆದುಕೊಳ್ಳುವುದು ಇಷ್ಟು ದೊಡ್ಡ ಪ್ರಕ್ರಿಯೆ ಎನ್ನುವುದು ನನ್ನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. "ನಮ್ಮ ಅಪಾರ್ಟ್ಮೆಂಟ್ ಬಳಿ ಗಾರೆ ಕೆಲಸ ಮಾಡ್ತಿದ್ದ ದಂಪತಿಗಳ ಮಗಳು ಆಕೆ. ನಮ್ಮ ಮನೆಗೆ ಬಂದು ಆಟ ಆಡುತ್ತಾ ಬಹಳ ಆಪ್ತವಾಗಿಬಿಟ್ಟಿದ್ದಳು. ಆಕೆ ರಾಯಚೂರಿನ ತನ್ನ ಹುಟ್ಟೂರಿಗೆ ಹೋದಾಗಲೂ ನನ್ನ ಬಗ್ಗೆಯೇ ಮಾತನಾಡುತ್ತಿದ್ದಳಂತೆ. ಹುಷಾರಿಲ್ಲದಾಗ ಅಕ್ಕನಿಗೆ ಕರೆ ಮಾಡಿ ಹೇಳಿ ಎಂದು ಪೋಷಕರಿಗೆ ಹೇಳುತ್ತಿದ್ದಳಂತೆ. ಅದಕ್ಕೆ ಮಗುವನ್ನು ನಾನೇ ಸಾಕಿಕೊಳ್ಳೊದಾಗಿ ಹೇಳಿ ಕರೆತಂದಿದ್ದೆ" ಎಂದು ಹೇಳಿದ್ದಾರೆ.

"ಆ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ಸಿದ್ಧತೆ ನಡೀತಿತ್ತು. ಮದುವೆಯಾಗದೇ ಮಗುವನ್ನು ನೋಡಿಕೊಂಡಿರಲು ನಿರ್ಧರಿಸಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಂದ ಹಣವನ್ನ ಆಕೆಯ ಜೀವನ ರೂಪಿಸಲು ಉಪಯೋಗಿಸುತ್ತೀನಿ. ಸತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕಾನೂನಾತ್ಮಕವಾಗಿಯೇ ದತ್ತು ಪಡೆಯುತ್ತಿದ್ದೆ" ಎಂದು ಸೋನು ಗೌಡ ಪೊಲೀಸರ ವಿಚಾರಣೆ ವೇಳೆ ಹೇಳಿರುವುದಾಗಿ ವರದಿಯಾಗಿದೆ.

Bigg boss fame Sonu Srinivas gowda arrest police enquiry details

ಇನ್ನು ಸೋನು ಗೌಡ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಬಾಲಕಿ ಜೊತೆ ಸಾಕಷ್ಟು ವ್ಲಾಗ್‌ ವೀಡಿಯೊಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ಆ ಬಾಲಕಿ ಹಾಗೂ ಆಕೆಯ ಸಹೋದರಿಯರ ಜೊತೆಗೂ ವೀಡಿಯೋಗಳನ್ನು ಮಾಡಿದ್ದಾರೆ. ಆಕೆಯ ಮೇಕಪ್, ಶಾಪಿಂಗ್, ಊಟ ಮಾಡುವುದು ಹೀಗೆ ಸಾಕಷ್ಟು ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ಇನ್ನು ಬಾಲಕಿಯನ್ನು ಸಾಕಿಕೊಳ್ಳಲು ನಿರ್ಧರಿಸಿ ರಾಯಚೂರಿನ ಆಕೆಯ ಮನೆಗೆ ಹೋಗಿ ಕರೆದುಕೊಂಡು ಬಂದಿದ್ದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಎರಡು ವಾರದ ಹಿಂದೆ ರಾಯಚೂರಿನ ಕಾಚಾಪೂರ ಹಳ್ಳಿಗೆ ಸೋನು ಶ್ರೀನಿವಾಸ್ ಗೌಡ ಹೋಗಿದ್ದರು. ಅಲ್ಲಿ ಬಾಲಕಿಯ ಮನೆಯನ್ನು ಹುಡುಕಿದ್ದರು. ಮಧ್ಯರಾತ್ರಿ ಮಲಗಿ ನಿದ್ರಿಸುತ್ತಿದ್ದ ಮಗುವನ್ನು ಎಬ್ಬಿಸಿ, ಅವರ ಮನೆಯ ಚಿತ್ರಣವನ್ನು ತೋರಿಸಿದ್ದರು. ಪೋಷಕರ ಒಪ್ಪಿಗೆ ಪಡೆದು ಬಾಲಕಿಯನ್ನು ಸೋನು ಗೌಡ ಕರೆತಂದಿದ್ದರು. ಆ ವ್ಲಾಗ್‌ ವೀಡಿಯೋ ಸಖತ್ ವೈರಲ್ ಆಗಿತ್ತು. ಬಳಿಕ 41 ದಿನಗಳಿಂದ ಬಾಲಕಿಯನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪೋಷಿಸುತ್ತಿದ್ದರು.

ನಿಯಮಗಳನ್ನು ಮೀರಿ ಮಗುವನ್ನು ದತ್ತು ಪಡೆಯುವುದು ಮಾತ್ರವಲ್ಲ, ಮಗುವನ್ನು ಬೇರೆಯವರಿಗೆ ಕೊಡುವುದು ಕೂಡ ಅಪರಾಧವಾಗುತ್ತದೆ. ಇದೇ ಕಾರಣಕ್ಕೆ ಬ್ಯಾಡರಹಳ್ಳಿ ಪೊಲೀಸರು ಬಾಲಕಿಯ ಪೋಷಕರನ್ನು ವಿಚಾರಣೆಗೆ ಕರೆಸುತ್ತಿದ್ದಾರೆ. ಇನ್ನು ಇದು ನಾನ್‌ ಬೇಲಬಲ್ ಪ್ರಕರಣ ಆಗಿರುವುದರಿಂದ ಶೀಘ್ರದಲ್ಲೇ ಸೋನು ಶ್ರೀನಿವಾಸ್ ಗೌಡ ಅವರನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

More from Filmibeat

English summary
Sonu Srinivas gowda's reaction on illegal adoption of a girl child case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X