"ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಬೇಕಿರಲಿಲ್ಲ": ಜೈಲು ದಿನಗಳ ಬಗ್ಗೆ ಸೋನು ಶ್ರೀನಿವಾಸ್ ಗೌಡ ಮಾತು

ಅಕ್ರಮವಾಗಿ ಮಗು ದತ್ತು ಪಡೆದಿದ್ದ ಆರೋಪದಲ್ಲಿ ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಬಂಧನವಾಗಿತ್ತು. 14 ದಿನಗಳ ಕಾಲ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ 11 ದಿನಕ್ಕೆ ಸೋನು ಜಾಮೀನು ಪಡೆದು ಹೊರ ಬಂದಿದ್ದರು. ಇದೀಗ ತಮ್ಮ ಜೈಲಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಮಾರ್ಚ್ 22ರಂದು ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ರಾಯಚೂರು ಮೂಲದ 8 ವರ್ಷದ ಬಾಲಕಿಯನ್ನು ಸೋನು ಶ್ರೀನಿವಾಸ್ ಗೌಡ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ತಾನು ಆಕೆಯನ್ನು ದತ್ತು ಪಡೆದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಆದರೆ ಸಾಮಾನ್ಯವಾಗಿ ಮಕ್ಕಳನ್ನು ದತ್ತು ಪಡೆಯಲು ಅನುಸರಿಸಬೇಕಾದ ಯಾವುದೇ ನಿಯಮ ಆಕೆ ಅನುಸರಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.

Bigg Boss Fame Sonu srinivas gowda shares her Jail experience

ಕಾನೂನಾತ್ಮಕವಾಗಿ ಮಗು ದತ್ತು ಪಡೆಯದೇ ಈ ರೀತಿ ಮಾಡುವುದು ಅಪರಾಧ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರಿದ್ದರು. ಬಾಲಕಿಯನ್ನು ಅಕ್ರಮವಾಗಿ ಸೋನು ಶ್ರೀನಿವಾಸ್ ಗೌಡ ಮನೆಯಲ್ಲಿಟ್ಟುಕೊಂಡಿದ್ದಾರೆ. ಆ ಬಾಲಕಿ ಜೊತೆಗೆ ಯೂಟ್ಯೂಬ್ ವೀಡಿಯೋಗಳನ್ನು ಮಾಡುತ್ತಿದ್ದಾರೆ. ಅದರಿಂದ ಬರುವ ಹಣದಲ್ಲಿ ಆಕೆಯ ಕುಟುಂಬಕ್ಕೆ ನೀಡುವುದಾಗಿ ಹೇಳಿಕೊಂಡಿದ್ದರು ಎಂದು ಗೀತಾ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋನು ಬಂಧನವಾಗಿತ್ತು.

ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ರೂ. ಬಾಂಡ್ ಷರತ್ತು ವಿಧಿಸಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ನೀಡಲಾಗಿತ್ತು. ಮೊದಲಿಗೆ ಪೊಲೀಸರ ಕಸ್ಟಡಿಯಲ್ಲಿ ಸೋನು ಅವರನ್ನು ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಏಪ್ರಿಲ್ 6ರಂದು ಕೇಂದ್ರ ಕಾರಾಗೃಹದಿಂದ ಸೋನು ಹೊರ ಬಂದಿದ್ದರು. ಮಾಧ್ಯಮಗಳ ಜೊತೆ ಮಾತನಾಡದೇ ಹೊರಟುಬಿಟ್ಟಿದ್ದರು. ಇದೀಗ ಯೂಟ್ಯೂಬ್ ವಿಡಿಯೋ ಮಾಡಿ ಮಾತನಾಡಿದ್ದಾರೆ.

Bigg Boss Fame Sonu srinivas gowda shares her Jail experience

"ಮೊದಲಿಗೆ ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆಗೆ ಕರೆದೊಯ್ದರು. ಬಳಿಕ ನ್ಯಾಯಾಂಗ ಬಂಧನ ವಿಧಿಸಿದರು. ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ತಕ್ಷಣ ಬೇಸರವಾಯಿತು. ಯಾಕಂದರೆ ಈ 23, 24 ವರ್ಷ ವಯಸ್ಸಿಗೆ ಆ 4 ಗೋಡೆಗಳ ಮಧ್ಯೆ ಇದ್ದೆ. ಅಲ್ಲಿನ ವಾತಾವರಣ, ಜನಗಳು ಎಲ್ಲಾ ನೋಡಿ ಇದೆಲ್ಲಾ ಯಾಕೆ ಬೇಕಿತ್ತು ಎನಿಸಿತು" ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.

"ಜೈಲಿನಲ್ಲಿ ನನ್ನ ಅನುಭವ ಹೇಗಿತ್ತು ಅಂದ್ರೆ, ನನ್ನ ರೀತಿಯೇ ಸಾಕಷ್ಟು ಜನ ಇರ್ತಾರೆ. ಏನೇನೋ ಕೇಸ್‌ಗಳು. ಅವರ ಮಧ್ಯೆ ನಾವು ಇದ್ದೆ ಎನ್ನುವುದನನು ಹೇಳೋಕೆ ಸಾಧ್ಯವಿಲ್ಲ. 3 ದಿನಕ್ಕೊಮ್ಮೆ ಕುಟುಂಬಸ್ಥರು, ವಕೀಲರ ಜೊತೆ ಮಾತನಾಡಲು ಫೋನ್ ಕೊಡುತ್ತಿದ್ದರು. ಹೊರಗೆ ನನ್ನ ಬಳಿ ಫೋನ್ ಇತ್ತು. ನನ್ನ ಜೊತೆ ಮಾತನಾಡುವವರು ಇರುತ್ತಿದ್ದರು. ಆದರೆ ಮಾತನಾಡುತ್ತಿರಲಿಲ್ಲ. ಆದರೆ ಅಲ್ಲಿ ನನಗೆ ಎಲ್ಲದರ ಅನುಭವ ಆಯಿತು. 4 ಗೋಡೆ ಮಧ್ಯೆ ಎಲ್ಲವೂ ನಿಮಗೆ ಕಲಿಸುತ್ತದೆ."

"ಸ್ಟೇಷನ್‌ನಲ್ಲಿ ಇದ್ದಾಗ ಅಕ್ಕ ಪಕ್ಕ ಇದ್ದವರ ಫೋನ್ ನೋಡುತ್ತಿದ್ದೆ. ತುಂಬಾ ನೆಗೆಟಿವ್ ಕಾಮೆಂಟ್ಸ್ ಬರುತ್ತಿತ್ತು. ಮತ್ತೆ ನನ್ನ ಲೈಫ್ ನೆಗೆಟಿವ್ ಆಗಿಬಿಡ್ತು ಅಂತ ಬೇಸರಗೊಂಡಿದ್ದೆ. ಅಲ್ಲಿ ನನ್ನ ಆಪ್ತರು, ಇಷ್ಟದ ಊಟ ಏನು ಇಲ್ಲದೇ ಹೇಗೆ ಇದ್ದೆ ಎಂದು ಹೇಳೊಕ್ಕೆ ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಕೆಟ್ಟ ಅನುಭವ. ಖುಷಿ ಏನು ಅಂದ್ರೆ, ಟ್ರೋಲ್ ಪೇಜಸ್ ಎಲ್ಲಾ ಸಪೋರ್ಟ್ ಮಾಡಿದ್ದೀರಾ. ಎಲ್ಲರಿಗೂ ಧನ್ಯವಾದ" ಎಂದಿದ್ದಾರೆ.

"ಕಷ್ಟದಲ್ಲಿ ಯಾರು ಜೊತೆಗಿರುತ್ತಾರೆ ಎನ್ನುವುದು ಮುಖ್ಯ. ನನಗೆ ಅದು ಈ ಘಟನೆಯಿಂದ ಗೊತ್ತಾಯಿತು. ಜೈಲಿನಲ್ಲಿ ತುಂಬಾ ಸೊಳ್ಳೆ ಇರ್ತಿತ್ತು. ನಾವು ಹೊರಗೆ ನೋಡಿದ ಲೈಫ್ ಬೇರೆ, ಅಲ್ಲಿ ನೋಡಿದ ಲೈಫ್ ಬೇರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದನ್ನೆಲ್ಲಾ ನೋಡಿದೆ ಎನ್ನುವುದು ಬೇಸರ. ನಮ್ಮ ಫ್ಯಾಮಿಲಿ ಹಾಗೂ ಆಪ್ತರ ಸಹಾಯದಿಂದ ಬೇಗ ಹೊರಬಂದೆ. ನಿಯಮಗಳ ಪ್ರಕಾರ ನಾನು ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲ. ಹಾಗಾಗಿ ಮಾತನಾಡಲಿಲ್ಲ" ಎಂದು ಸೋನು ಹೇಳಿದ್ದಾರೆ.

More from Filmibeat

English summary
Adoption Case: Sonu srinivas gowda talks about her jail days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X