"ನಾನು ಹಳ್ಳಿಕಾರ್ ಕೈ ಹಿಡಿದಾಗ ಈಗ ಮಾತನಾಡುವ ಸೋ ಕಾಲ್ಡ್ ಜನ ಬಾಯಿಗೆ ಮುದ್ದೆ ತುರುಕಿಕೊಂಡಿದ್ದರಾ?" ವರ್ತೂರು ಸಂತೋಷ್
ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಭಾರೀ ಸುದ್ದಿಯಲ್ಲಿದ್ದಾರೆ. ಸಂತೋಷ್ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇನ್ನು 'ಹಳ್ಳಿಕಾರ್ ಒಡೆಯ' ಎಂದು ಸಂತೋಷ್ ತಮ್ಮನ್ನು ಕರೆಸಿಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮಂಡ್ಯ ಭಾಗದ ಹಳ್ಳಿಕಾರ್ ಸಂರಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಹಳ್ಳಿಕಾರ್ ಒಡೆಯ' ಬಿರುದಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವರ್ತೂರು ಸಂತೋಷ್ ಪ್ರತಿಕ್ರಿಯಿಸಿದ್ದಾರೆ. ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಅದ್ಯ ವರ್ತೂರು ಸಂತೋಷ್ ಕೌಂಟರ್ ವೈರಲ್ ಆಗುತ್ತಿದೆ. "ನಾನು ಯಾರಿಗೂ ಹೇಳಿಕೊಟ್ಟಿಲ್ಲ, ಹಳ್ಳಿಕಾರ್ ಒಡೆಯ ಎಂದು ಕರೆಯಲು" ಎಂದು ತಿರುಗೇಟು ಕೊಟ್ಟಿದ್ದಾರೆ.

ಹಳ್ಳಿಕಾರ್ ಒಡೆಯ ಬಿರುದಿನ ವಿವಾದ ಬಗ್ಗೆ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನಲ್‌ಗೂ ವರ್ತೂರು ಸಂತೋಷ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಾಕಷ್ಟು ಜನ ನನಗೆ ಹಳ್ಳಿಕಾರ್ ಒಡೆಯ ಬಿರುದು ಯಾರು ಕೊಟ್ರು ಎಂದು ಕೇಳುತ್ತಿದ್ದಾರೆ. ನನಗೆ ಕಾಡುಗೋಡಿ ಹುಡುಗರು(ಅಭಿಮಾನಿಗಳು) ಈ ಬಿರುದು ಕೊಟ್ಟರು. ಅಭಿಮಾನದಿಂದ ಕೊಟ್ಟಿರುವುದು. ಹಳ್ಳಿಕಾರ್ ಜನಾಂಗ ಇರುವುದು ನನಗೆ ಗೊತ್ತು. ನಾನು ಎಂದು ಹಳ್ಳಿಕಾರ್ ಜನಾಂಗಕ್ಕೆ ಒಡೆಯ ಎಂದು ಹೇಳಿಕೊಂಡಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ಆ ಬಗ್ಗೆ ಮಾತನಾಡಿಯೂ ಇಲ್ಲ" ಎಂದಿದ್ದಾರೆ.
"ಹಳ್ಳಿಕಾರ್ ಸ್ನೇಹಿತರು ನನಗಿದ್ದಾರೆ. ಅವರ ಬಗ್ಗೆ ಗೌರವವೂ ನನಗಿದೆ. ಷಡ್ಯಂತ್ರ ಮಾಡಬೇಕು ಎಂದು ಯಾವುದಕ್ಕೆ ಯಾವ್ದೊ ಲಿಂಕ್ ಮಾಡಬೇಡಿ. ಹಳ್ಳಿಕಾರ್ ಎನ್ನುವುದು ದನದ ತಳಿ. ನಾನು ಆ ತಳಿಯನ್ನು ರಕ್ಷಿಸಿ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಸಾಕಷ್ಟು ಹಳ್ಳಿಕಾರ್ ತಳಿಯ ಜಾನವಾರುಗಳನ್ನು ಸಾಕಿದ್ದೇನೆ. ಹಾಗಾಗಿ ಜನ ಕೊಟ್ಟ ಬಿರುದು ಹಳ್ಳಿಕಾರ್ ಒಡೆಯ. ನಟ ವಜ್ರಮುನಿ ಕುಟುಂಬದವರು ಹಳ್ಳಿಕಾರ್ ಸಮುದಾಯದವರು. ಅವ್ರು ನನ್ನನ್ನು ಕರೆದು ಸನ್ಮಾನಿಸಿದ್ದಾರೆ. ಹಾಗಾಗಿ ಇದನ್ನು ವಿವಾದ ಮಾಡಬೇಡಿ" ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

ಇತ್ತೀಚೆಗೆ ಯಲಹಂಹದ ಕಾರ್ಯಕ್ರಮವೊಂದಕ್ಕೆ ವರ್ತೂರು ಸಂತೋಷ್ ಹೋಗಿದ್ದರು. ಆ ಸಮಯದಲ್ಲಿ ಕೂಡ ತಮ್ಮ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದರು. "ಒಂದು ಕಾಲದಲ್ಲಿ ನಾನು ದನ ಕೈ ಹಿಡಿದಾಗ ಏನು ಈಗ ಮಾತನಾಡುತ್ತಿದ್ದಾರಲ್ಲ, ಸೋ ಕಾಲ್ಡ್ ಜನ ಅವ್ರು ಬಾಯಿಗೆ ಮುದ್ದೆ ತುರುಕಿಕೊಂಡಿದ್ದರಾ? ನಾನು ಪ್ರತಿಯೊಬ್ಬರ ಬಾಯಲ್ಲಿ ಜೈ ಹಳ್ಳಿಕಾರ್ ಎಂದು ಹೇಳಿಸಿದ್ದೇನೆ ಹೊರತು ವರ್ತೂರು ಸಂತೋಷ್ ಜೈ ಅನ್ನಿ ಎಂದು ಹೇಳಿಕೊಟ್ಟಿದ್ದೀನಾ?" ಎಂದು ಪ್ರಶ್ನಿಸಿದ್ದಾರೆ.
"ಮಾಗಡಿ ಮೂಲದ ಒಬ್ಬ ಹೇಳ್ತಾನೆ, ನನಗೆ ಹಳ್ಳಿಕಾರ್ ಒಡೆಯ ಎನ್ನಬಾರದು. ಮತ್ತೊಬ್ಬರಿಗೆ ಹೇಳಬೇಕು ಎನ್ನುತ್ತಾನೆ. ಏನು ಇವರಪ್ಪನ ಮನೆ ಆಸ್ತಿ ಕೇಳಿದ್ವಾ? ನಾವು ಎಂದು ಗರಂ ಆಗಿದ್ದಾರೆ. ಎಷ್ಟು ಅಂತ ಷಡ್ಯಂತ್ರ ಮಾಡ್ತೀರಾ? ನಾನು ಒಂದು ರೂಪಾಯಿ ತಿಂದಿರುವುದು ಪ್ರೂವ್ ಮಾಡಿದರೆ ಎಲ್ಲರ ಮುಂದೆ ಪ್ರತಿ ರೂಪಾಯಿಗೆ ಒಂದು ಲಕ್ಷ ಕೊಡ್ತಿನಿ."
"ಕಳೆದ ಬಾರಿ ಹಳ್ಳಿಕಾರ್ ರೇಸ್ ಮಾಡಿ ಹಣ ಗುಳುಂ ಮಾಡ್ದೆ ಎನ್ನುತ್ತಾರೆ. ನಾನು ಪಟ್ಟಿರುವ ಕಷ್ಟ ನನಗೆ ಗೊತ್ತು. ಈ ವರ್ಷ ಅಕೌಂಟ್ ಮಾಡಿಸ್ತೀನಿ. ಇವರು ಜೀವನದಲ್ಲಿ ಒಳ್ಳೆಯದು ಮಾಡಲ್ಲ. ಮಾಡುವವರಿಗೆ ನೂರೆಂಟು ಕಾಟ ಕೊಡುತ್ತಾರೆ" ಎಂದು ವರ್ತೂರು ಸಂತೋಷ್ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











