'ಯಾವನೋ ಕಿತ್ತೋದ್ ನನ್ಮಗ" ಎನ್ನುವ ಜಗ್ಗೇಶ್ ಹೇಳಿಕೆಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಹುಲಿ ಉಗುರು ಪ್ರಕರಣದ ಬಗ್ಗೆ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಹುಲಿ ಉಗುರು ಪೆಂಡೆಂಟ್ ವಿಚಾರ ಭಾರೀ ಸದ್ದು ಮಾಡಿತ್ತು. ಹಲವರು ಬಳಿಕ ಇದ್ದ ಹುಲಿ ಉಗುರನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿತ್ತು. ಈ ಬಗ್ಗೆ ಇತ್ತೀಚೆಗೆ ನಟ ಜಗ್ಗೇಶ್ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ.
'ರಂಗನಾಯಕ' ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ "ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು" ಎಂದು ಜಗ್ಗೇಶ್ ಹೇಳಿದ್ದರು. ವರ್ತೂರು ಸಂತೋಷ್ ಬಗ್ಗೆ ಜಗ್ಗೇಶ್ ಈ ರೀತಿ ಹೇಳಿದ್ದಾರೆ, ಜಗ್ಗೇಶ್ ಅಂತಹವರು "ಕಿತ್ತೋದ್ ನನ್ಮಗ" ಎನ್ನುವ ಪದ ಬಳಸಿದ್ದು ಸರಿಯಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಜಗ್ಗೇಶ್ ಹೇಳಿಕೆಗೆ ಈಗ ವರ್ತೂರು ಸಂತೋಷ್ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ 'ಬಿಗ್ ಬಾಸ್ ಕನ್ನಡ ಸೀಸನ್ 10' ಶೋ ನಡುವೆಯೇ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನವಾಗಿತ್ತು. ಅದಕ್ಕೆ ಕಾರಣ ಅವರು ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು. ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದು 11 ದಿನ ಸೆರೆವಾಸ ಅನುಭವಿಸಿ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಬಳಿಕ ಮತ್ತೆ ಬಿಗ್‌ಬಾಸ್ ಮನೆ ಪ್ರವೇಶಿಸಿ ಶೋನಲ್ಲಿ ಮುಂದುವರೆದಿದ್ದರು.
ವರ್ತೂರು ಸಂತೋಷ್ ಬಂಧನವಾಗುತ್ತಿದ್ದಂತೆ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಹುಲಿ ಪೆಂಡೆಂಟ್ ಧರಿಸಿದ್ದ ಫೋಟೊಗಳು ವೈರಲ್ ಆಗಿತ್ತು. ವರ್ತೂರು ಸಂತೋಷ್ ಮೇಲೆ ಕ್ರಮ ಜರುಗಿಸಿದರೆ ಉಳಿದವರ ಬಳಿ ಇರುವ ಪೆಂಡೆಂಟ್ ಕಥೆ ಏನು? ಎನ್ನುವ ಚರ್ಚೆ ಶುರುವಾಯಿತು. ಹಳೇ ಸಂದರ್ಶನವೊಂದರಲ್ಲಿ ನಟ ಜಗ್ಗೇಶ್ ತಮ್ಮ ತಾಯಿ ಕೊಟ್ಟಿದ್ದ ಹುಲಿ ಉಗುರಿನ ಪೆಂಡೆಂಟ್ ತೋರಿಸಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಮನೆಗಳಲ್ಲಿ ಶೋಧ ನಡೆಸಿ ಹುಲಿ ಉಗುರಿನ ಪೆಂಡೆಂಟ್ ಕೊಂಡೊಯ್ದಿದ್ದರು. ಇದೇ ವಿಚಾರ ಪ್ರಸ್ತಾಪಿಸಿದ ನಟ ದರ್ಶನ್ ಜಗ್ಗೇಶ್ ಮಾತನಾಡಿದ್ದರು. ವರ್ತೂರು ಸಂತೋಷ್ ಹೆಸರು ಹೇಳದಿದ್ದರೂ ಅವರ ಹೇಳಿದ್ದು ಆತನ ಬಗ್ಗೆಯೇ ಎಂದು ಚರ್ಚೆ ಆಗುತ್ತಿದೆ.
ಸದ್ಯ ಮಾಧ್ಯಮಗಳ ಜೊತೆ ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿದ್ದಾರೆ. "ಬಿಡಿ ಅವ್ರು ದೊಡ್ಡೋರು. ನಾನು ಏನು ಹೇಳ್ತೀನಿ ಅಂದ್ರೆ, ಕಾಲೈ ತಸ್ಮೈ ನಮಃ ಅಷ್ಟೆ. ನಾನು ಏನು ಹೇಳ್ತೀನಿ ಅಂದ್ರೆ, ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಸೈಲೆಂಟ್ ಆಗಿ ಇದ್ದರೆ ಸಾಕು ಉತ್ತರ ಸಿಗುತ್ತದೆ."
"ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಒಂದು ಹೇಳ್ತಾರೆ. ವರ್ತೂರು ಅವ್ರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ಅಷ್ಟೇ ಸಾಕು. ಕೆಲವು ಜಾಗಗಳಲ್ಲಿ ಮಾತನಾಡಲೇಬೇಕು ಸಂದರ್ಭ ಆ ತರ ಇರುತ್ತದೆ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು" ಎಂದಿದ್ದಾರೆ.


Click it and Unblock the Notifications











