ಯಾರು ಅಸಲಿ ಸಿಂಹ? ದರ್ಶನ್ ಆಪ್ತ ಧನ್ವೀರ್, ಸುದೀಪ್ ಆಪ್ತ ವಿನಯ್ ಕೌಂಟರ್ ವಾರ್

ಹುಬ್ಬಳ್ಳಿಯಲ್ಲಿ ಸುದೀಪ್ ಯುದ್ಧ ಮಾಡ್ತೀವಿ ಎಂದು ಕೊಟ್ಟ ಹೇಳಿಕೆ ಚಂದನವನದಲ್ಲಿ ಭಾರೀ ಸದ್ದು ಮಾಡ್ತಿದೆ. ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಹೇಳಿಕೆ ವೈರಲ್ ಆಗಿ ದರ್ಶನ್- ಸುದೀಪ್ ಫ್ಯಾನ್ಸ್ ನಡುವೆ ಕಿರಿಕ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪ ಶುರುವಾಗಿದೆ. ಈ ನಡುವೆ ಧನ್ವೀರ್, ವಿನಯ್ ನಡುವೆ ಕೌಂಟರ್ ವಾರ್ ಶುರುವಾಗಿದೆ.

ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ವಿಲನ್ ಆಗಿ ವಿನಯ್ ಗೌಡ ನಟಿಸಿದ್ದಾರೆ. ಬಿಗ್‌ಬಾಸ್ ಮನೆಗೂ ಹೋಗಿ ಬಂದಿದ್ದಾರೆ. ಸುದೀಪ್ ಆಪ್ತ ವಲಯದಲ್ಲಿ ಗುರ್ತಿಸಿಕೊಂಡವರು. ಆದರೆ 'ಡೆವಿಲ್' ಚಿತ್ರದ ಪ್ರಚಾರದಲ್ಲಿ ಮಾತ್ರ ಭಾಗಿ ಆಗಲಿಲ್ಲ. ಇದೆಲ್ಲದರ ನಡುವೆ ಇತ್ತೀಚೆಗೆ ಧನ್ವೀರ್ ಮಾಡಿದ್ದ ಪೋಸ್ಟ್‌ಗೆ ಕೌಂಟರ್ ಎನ್ನುವಂತೆ ವಿನಯ್ ಪೋಸ್ಟ್ ವೈರಲ್ ಆಗುತ್ತಿದೆ.

Bigg Boss fame Vinay Gowda s Viral Post Fuels Fresh Fan War Amid Sudeep Darshan Controversy

ಸುದೀಪ್ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಫ್ಯಾನ್ಸ್ ನಡುವೆ ಕೆಸರೆರಚಾಟ ಜೋರಾಗಿರುವ ಸಮಯದಲ್ಲೇ ಧನ್ವೀರ್ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು. ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡು "ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ. ಆದರೆ ಸಿಂಹನೇ ರಾಜ" ಎಂದು ತಮಿಳು ಸಿನಿಮಾ ಡೈಲಾಗ್ ಹಾಕಿದ್ದರು. ದರ್ಶನ್ ಬೆಂಬಲಿಸಿ ಪೋಸ್ಟ್ ಹಾಕಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಇದಕ್ಕೆ ಕೌಂಟರ್ ಎನ್ನುವಂತೆ ವಿನಯ್ ಪೋಸ್ಟ್ ಸದ್ದು ಮಾಡ್ತಿದೆ.

ವಿನಯ್ ಆಗಲಿ, ಧನ್ವೀರ್ ಆಗಲಿ ಯಾವುದೇ ಹೆಸರು ತೆಗೆದುಕೊಳ್ಳದೇ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. "ಖಂಡಿತ ಕಾಡಿನ ರಾಜ ಸಿಂಹನೇ.. ಅದು ಎಲ್ಲರಿಗೂ ಗೊತ್ತು. ಕಾಡಿನ ರಾಜ ಯಾರೆಂದರೆ, ಲಯನ್ ಈಸ್​.. ಕಿಚ್ಚ ಸುದೀಪ್ ಎಂದು ವಿನಯ್ ಪೋಸ್ಟ್ ಮಾಡಿದ್ದಾರೆ. 'ಡೆವಿಲ್' ಚಿತ್ರದಲ್ಲಿ ನಟಿಸಿದ್ದ ವಿನಯ್ ದಿಢೀರನೆ ಯಾಕೆ ಹೀಗೆ ಕೌಂಟರ್ ಕೊಡಲು ಆರಂಭಿಸಿದ್ದಾರೆ. ದರ್ಶನ್ ಜೊತೆ ಸಿನಿಮಾ ಮಾಡುವಾಗ ಏನಾದರೂ ಭಿನ್ನಾಭಿಪ್ರಾಯ ಮೂಡಿದ್ಯಾ? ಎನ್ನುವ ಅನುಮಾನ ಶುರುವಾಗಿದೆ. ನ್ಯೂಸ್ ಫಸ್ಟ್ ವಾಹಿನಿಗೆ ಈ ಬಗ್ಗೆ ವಿನಯ್ ಪ್ರತಿಕ್ರಿಯಿಸಿದ್ದಾರೆ.

Bigg Boss fame Vinay Gowda s Viral Post Fuels Fresh Fan War Amid Sudeep Darshan Controversy

ಕನ್ನಡ ಚಿತ್ರರಂಗದಲ್ಲಿ ಸಿಂಹ ಅಂದ್ರೆ ವಿಷ್ಣುವರ್ಧನ್ ಸರ್. ಅವ್ರು ಬಿಟ್ಟರೆ ಈಗ ಸುದೀಪ್ ಸರ್. ಅದನ್ನೇ ನಾನು ಹಾಕಿದ್ದೀನಿ ಅಷ್ಟೆ. ಯಾರಿಗೋ ಕೌಂಟರ್ ಯಾಕೆ ಕೊಡಲಿ ಎಂದು ವಿನಯ್ ಗೌಡ ಪ್ರಶ್ನಿಸಿದ್ದಾರೆ. ದರ್ಶನ್ ಫ್ಯಾನ್ಸ್- ಸುದೀಪ್ ಫ್ಯಾನ್ಸ್ ವಾರ್ ಬಗ್ಗೆ ಮಾತನಾಡಿ ಯಾರೋ ಕೆಲವರು ಇಂತಹ ಕೆಲಸ ಮಾಡ್ತಾರೆ. ನಿಜವಾದ ಫ್ಯಾನ್ಸ್ ಮಾಡಲ್ಲ ಎಂದಿದ್ದಾರೆ.

'ಡೆವಿಲ್' ಚಿತ್ರದ ಪ್ರಚಾರ ಯಾಕೆ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ವಿನಯ್ ಪ್ರತಿಕ್ರಿಯಿಸಿ "ನಾನು ಪೇಯ್ಡ್ ಆಕ್ಟರ್. ನನಗೆ ಸಂಭಾವನೆ ಕೊಟ್ರು ನಟಿಸಿ ಬಂದಿದ್ದೀನಿ. ಡೆವಿಲ್ ಚಿತ್ರದಲ್ಲಿ ನನಗೆ ಎಷ್ಟು ಸ್ಕೋಪ್ ಇದೆ ನೀವು ನೋಡಿದ್ದೀರಾ, ಬುಕ್‌ಮೈ ಶೋನಲ್ಲಿ ಎಲ್ಲರ ಹೆಸರು ಇದೆ, ನನ್ನ ಹೆಸರಿಲ್ಲ. ನಾನು ದರ್ಶನ್ ಸರ್ ಬಗ್ಗೆ ಎಲ್ಲೂ ಮಾತನಾಡಿಲ್ಲ ಎನ್ನುವ ಚರ್ಚೆ ನಡೀತಿದೆ. ಮಾತನಾಡಬಾರ್ದು ಅಂತ್ಲೇ ದರ್ಶನ್ ಸರ್ ಬಗ್ಗೆ ನಾನು ಮಾತನಾಡ್ಲಿಲ್ಲ. ಏನೋ ಮಾತಾಡಿ ಅವರಿಗೆ ಕಾನೂನಾತ್ಮಕವಾಗಿ ಏನಾದರೂ ಸಮಸ್ಯೆ ಆಗಬಹುದು. ಹಾಗಾಗಿ ನಾನು ಮಾತನಾಡಲಿಲ್ಲ" ಎಂದು ವಿನಯ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಮಗೆ ಯಾರು ಇಷ್ಟವೋ ಅವರೊಟ್ಟಿಗೆ ಇರ್ತೀವಿ, ಪ್ರಮೋಟ್ ಮಾಡ್ತೀವಿ. ನಮಗಿಷ್ಟವಾಗಿದ್ದು ಮಾಡ್ತೀವಿ, ಆ ಸ್ವಾಂತಂತ್ರ್ಯ ನನಗಿದೆ ಅಂದುಕೊಂಡಿದ್ದೀನಿ ಎಂದು ವಿನಯ್ ಹೇಳಿದ್ದಾರೆ. ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಮಾತನಾಡಿ "ರಮ್ಯಾ ಮೇಡಂ ಒಂದಷ್ಟು ಜನರ ವಿರುದ್ಧ ದೂರು ಕೊಟ್ರು. ನಾವು ಮಾಡಬಹುದು. ಅರೆಸ್ಟ್ ಆದಮೇಲೆ ಏನಾಗುತ್ತೆ, ಚಿಕ್ಕ ಹುಡುಗರ ಜೀವನ ಹಾಳಾಗುತ್ತೆ. ಇದನ್ನೆಲ್ಲಾ ನಿಲ್ಲಿಸಿದ್ರೆ ಒಳ್ಳೆದು. ಇದರ ಪರಿಣಾಮ ಏನು ಬೇಕಾದರೂ ಆಗಬಹುದು" ಎಂದು ವಿನಯ್ ಎಚ್ಚರಿಕೆ ನೀಡಿದ್ದಾರೆ.

More from Filmibeat

Read more about: dhanveer gowda sudeep darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X