"ಚಿತ್ರಾಲ್ ಬಿಕಿನಿ ಮಾಡೆಲ್, ಆಕೆ ನೋವು ಹೇಳಿಕೊಳ್ಳುವುದು ತಪ್ಪಾ"; ವಿನಯ್ ಪ್ರಶ್ನೆ

By ಫಿಲ್ಮಿಬೀಟ್ ಡೆಸ್ಕ್

ಮಹಿಳೆಯರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಹೆಚ್ಚಾಗಿದೆ. ಇದೇ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆತಂದು ದರ್ಶನ್ ಆಪ್ತರು ಥಳಿಸಿದ್ದರು. ಕೊನೆಗೆ ಆತನ ಜೀವವೇ ಹೋಯಿತು. ಆದರೆ ಇತ್ತೀಚೆಗೆ ಹಲವರು ನಮಗೂ ಫೇಕ್‌ ಅಕೌಂಟ್‌ನಿಂದ ರೇಣುಕಾಸ್ವಾಮಿ ಇಂತದ್ದೇ ಕೆಟ್ಟ ಮೆಸೇಜ್ ಕಳುಹಿಸಿದ್ದ ಎಂದು ಕೆಲ ನಟಿಯರು ಹೇಳುತ್ತಿದ್ದಾರೆ.

ನಟಿ, ಮಾಡೆಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಹಾಗೂ ಸೋನು ಶ್ರೀನಿವಾಸ್ ಗೌಡ ಸಹ ಇದೇ ರೀತಿಯ ಆರೋಪ ಮಾಡಿದ್ದರು. ಗೌತಮ್_ಕೆಎಸ್‌_1990 ಹೆಸರಿನ ಫೇಕ್ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಮಹಿಳೆಯರಿಗೆ ಕೆಟ್ಟ ಮೆಸೇಜ್ ಬಂದಿರುವ ಬಗ್ಗ 3 ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಅಕೌಂಟ್‌ ಹೆಸರು ಕೇಳಿದ ಮೇಲೆ ನಾನು ಕೂಡ ಈ ಅಕೌಂಟ್‌ ಎಲ್ಲೋ ನೋಡಿದ್ದೀನಿ. ಬ್ಲಾಕ್‌ ಮಾಡಿರಬಹುದು ಎಂದು ಹುಡುಕಿದ್ದಾಗ ಅದು ನಿಜವೇ ಆಗಿತ್ತು.

Bigg Boss fame Vinay upset against netizens who criticizing Chitral Rangaswamy

"ನನಗೆ ಕೆಟ್ಟ ಮೆಸೇಜ್, ಫೋಟೊ, ವಿಡಿಯೋ ಯಾರಾದರೂ ಕಳುಹಿಸಿದರೆ ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನಗೆ ಈ ಅಕೌಂಟ್ ನೋಡಿದಾಗ ಎಲ್ಲೋ ಈ ಅಕೌಂಟ್ ನೋಡಿದ್ದೀನಲ್ಲ ಎನಿಸಿತು. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ" ಎಂದು ಚಿತ್ರಾಲ್ ವಿವರಿಸಿದ್ದರು. ಆದರೆ ಚಿತ್ರಾಲ್‌ಗೆ ಬೆಂಬಲ ಸೂಚಿಸುವ ಬದಲು ಸಾಕಷ್ಟು ಜನ ಆಕೆಯ ಬಗ್ಗೆ ಟೀಕೆ ಮಾಡಿದ್ದರು. ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ವಿಸ್ತಾರ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

"ಆ ಫೇಕ್ ಅಕೌಂಟ್‌ ಇಂದ ಸಾಕಷ್ಟು ಜನರಿಗೆ ಕೆಟ್ಟ ಮೆಸೇಜ್, ಫೋಟೊ ಹೋಗಿದೆ ಎಂದು ನನಗೂ ಗೊತ್ತಾಯಿತು. ಈಗ ಎಲ್ಲಾ ಹೊರಗೆ ಬರುತ್ತಿದೆ. ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್. ಆಕೆ ಧೈರ್ಯವಾಗಿ ಬಂದು ನನಗೆ ಈ ರೀತಿ ಕೆಟ್ಟ ಕಾಮೆಂಟ್ ಮಾಡಿದ್ದ ಈ ಫೇಕ್ ಅಕೌಂಟ್ ಇಂದ ಎಂದಾಗ ಯಾಕೆ ಅದನ್ನು ಒಪ್ಪುತ್ತಿಲ್ಲ" ಎಂದು ವಿನಯ್ ಪ್ರಶ್ನಿಸಿದ್ದಾರೆ.

Bigg Boss fame Vinay upset against netizens who criticizing Chitral Rangaswamy

"ತಮಗಾದ ಕಹಿ ಅನುಭವ ಬಿಚ್ಚಿಟ್ಟ ಆಕೆಯ ಮೇಲೆ ಟೀಕೆ ವ್ಯಕ್ತವಾಗ್ತಿದೆ. ಆಕೆನೇ ಸರಿಯಿಲ್ಲ ಅಂತ ಯಾಕೆ ಹೇಳ್ತಿದ್ದಾರೆ. ಹೆಣ್ಣು ಮಕ್ಕಳು ಯಾವ ರೀತಿಯ ಬಟ್ಟೆ ಹಾಕಿದರೂ ಕಾಮೆಂಟ್ ಮಾಡುತ್ತಾರೆ. ಬಿಕಿನಿ ಹಾಕಿಕೊಂಡ್ರು ಏನೇನೋ ಹೇಳ್ತಾರೆ. ಮಾಡ್ತಾರೆ. ಆಕೆ ಬಿಕಿನಿ ಮಾಡೆಲ್, ಅವರ ವೃತ್ತಿ ಅದು. ಅದರ ಮೇಲೂ ಕಾಮೆಂಟ್ಸ್ ಮಾಡಿದ್ದಾರೆ. ಕೆಟ್ಟದಾಗಿ ಫೋಟೊ ಕಳ್ಸಿ, ನನ್ನತ್ರ ಬಾ ಅಂತೆಲ್ಲಾ ಕೇಳ್ತಾರೆ ಅಂದ್ರೆ, ಅದು ಸರೀನಾ?"

"ಯಾರು ಕಾಮೆಂಟ್ ಮಾಡಿದ್ದಾರೋ ಅವರಿಗೆಲ್ಲಾ ಕೇಳ್ತಿದ್ದೀನಿ ನೀವು ಮಾಡೋದು ಸರೀನಾ? ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಯಾರಾದರೂ ಫೋಟೊ ಕಳ್ಸಿ ಅಂತಹ ಮಸೇಜ್ ಕಳ್ಸಿದರೆ ನೋವಾಗುತ್ತದೆ ಅಲ್ಲವೇ? ತಮ್ಮವರಿಗೆ ಇಂತದ್ದು ಎದುರಾದರೆ ಸುತ್ತಾ ಇದ್ದವರಿಗೆ ಹೇಗಾಗುತ್ತದೆ. ನಿಜಕ್ಕೂ ಬಹಳ ಬೇಸರವಾಗುತ್ತದೆ" ಎಂದು ವಿನಯ್ ತಿಳಿಸಿದ್ದಾರೆ.

ಒಂದಷ್ಟು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ವಿನಯ್, ಬಿಗ್‌ಬಾಸ್ ಶೋನಲ್ಲಿ ಫಿನಾಲೆವರೆಗೂ ಹೋಗಿದ್ದರು. ಸದ್ಯ ದರ್ಶನ್ ನಟನೆಯ 'ಡೆವಿಲ್' ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ.

More from Filmibeat

English summary
Vinay supports Chitra Rangaswamy who spoke boldly about Renukaswamy's bad messages;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X