Varthur Santhosh: ಬಂಧಿತ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಧರಿಸಿದ್ದು ಒರಿಜಿನಲ್ ಹುಲಿ ಉಗುರು! ಮುಂದೇನು?
ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿ ದೊಡ್ಡ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುವ ವರ್ತೂರ್ ಸಂತೋಷ್ ಅವರನ್ನು ಬಂಧಿಸಲಾಗಿದೆ. ಬಿಗ್ ಬಾಸ್ ಮನೆಯಿಂದಲೇ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಮೋಹಳ್ಳಿ ಅರಣ್ಯಾಧಿಕಾರಿಗಳು ವರ್ತೂರ್ ಸಂತೋಷ್ ಅವರನ್ನು ಬಂಧಿಸಿದ್ದರು. ಹುಲಿ ಉಗುರನ್ನು ಲಾಕೆಟ್ ಮಾಡಿಕೊಂಡಿದ್ದ ಆರೋಪದಲ್ಲಿ ಅವರನ್ನು ಕಾರಣ ಅವರನ್ನು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಅಡಿಯಲ್ಲಿ ಬಂಧಿಸಲಾಗಿತ್ತು. ಹೀಗಾಗಿ ಈ ಲಾಕೆಟ್ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಇಂತಹ ಲಾಕೆಟ್‌ಗಳು ಹೆಚ್ಚಾಗಿ ನಕಲಿ ಸಿಗುವ ಕಾರಣ ಅದರ ಪರೀಕ್ಷೆ ಮಾಡಲಾಗಿದೆ.

ವರ್ತೂರ್ ಸಂತೋಷ್ ಧರಿಸಿದ್ದು ಅಸಲಿ ಹುಲಿ ಉಗುರು!
ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಅವರು ಕತ್ತಿಗೆ ಹಾಕಿದ್ದ ಚೈನ್ನಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಅಸಲಿ ಹುಲಿ ಉಗುರು ಎಂಬುದು ಖಚಿತವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ದೃಢಪಟ್ಟಿದ್ದು, ಶೀಘ್ರವೇ ಸಂತೋಷ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ.
ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದ ಅರಣ್ಯ ಅಧಿಕಾರಿಗಳ ವಿಚಾರಣೆಯಲ್ಲಿ ವರ್ತೂರ್ ಸಂತೋಷ್ ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಇವುಗಳಲ್ಲಿ ಮುಖ್ಯವಾಗಿರುವುದು, ತನ್ನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು ಎಂಬುದು. ಹೌದು, ಬಂಧಿತ ಸಂತೋಷ್ ಅವರೇ ತನ್ನ ಬಳಿ ಇರುವುದು ಅಸಲಿ ಹುಲಿ ಉಗುರು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅನಾಮಿಕ ವ್ಯಕ್ತಿಯಿಂದ ಹುಲಿ ಉಗುರು ಖರೀದಿ!?
ಈ ಉಗುರನ್ನು ಅನಾಮಿಕ ವ್ಯಕ್ತಿಯಿಂದ ಖರೀದಿಸಿದ್ದೆ. ಅವರ ಹೆಸರು ಗೊತ್ತಿಲ್ಲ ಎಂದೂ ಹೇಳಿದ್ದಾರೆ. ಹಾಗಾಗಿ ಹುಲಿ ಉಗುರಿನ ಮೂಲ ಹುಡುಕುತ್ತಾ ಇದ್ದಾರೆ ಅರಣ್ಯ ಅಧಿಕಾರಿಗಳು. ಇನ್ನು, ಇದು ಜಾಮೀನು ರಹಿತ ಪ್ರಕರಣ ಆಗಿರುವುದರಿಂದ ಅರಣ್ಯ ಅಧಿಕಾರಿಗಳು ಸೋಮವಾರವೇ (ಅಕ್ಟೋಬರ್ 23) ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅವರನ್ನು ಹಾಜರು ಮಾಡುತ್ತಾರೆ. ಇನ್ನು, ಕೋರ್ಟ್‌ನಲ್ಲಿ ವರ್ತೂರ್ ಸಂತೋಷ್ ಬಳಿ ಇರುವುದು ಅಸಲಿ ಹುಲಿ ಉಗುರು ಎಂದು ಸಾಬೀತು ಆದರೆ, ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಿದೆ ಎನ್ನುತ್ತಾರೆ ವಕೀಲರು.
ಪ್ರಕರಣ ಸಂಬಂಧಪಟ್ಟಂತೆ ಟಿವಿ9 ಕನ್ನಡ ಉಪ ಅರಣ್ಯಾಧಿಕಾರಿ ರವೀಂದ್ರ ಹೇಳಿಕೆಯನ್ನು ಉಲ್ಲೇಖಿಸಿದೆ. "ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಎಂಬುದು ಖಚಿತವಾಗಿದೆ. ಜಿಲ್ಲಾಧಿಕಾರಿ ಅವರ ಮಾಹಿತಿ ಆಧಾರದ ಮೇಲೆ ಅವರನ್ನು ಬಂಧಿಸಿದ್ದೇವೆ. ತಪಾಸಣೆ ಮಾಡಿದ ಮೇಲೆ ಅದು ಹುಲಿ ಉಗುರು ಎಂದು ಸಾಬೀತಾಗಿದೆ. ಬಿಗ್ ಬಾಸ್ ಮನೆಗೆ ಹೋಗಿ ಅವರನ್ನ ಬಂಧಿಸಿದ್ದೇವೆ' ಎಂದು ಅರಣ್ಯಾಧಿಕಾರಿ ರವೀಂದ್ರ ಹೇಳಿದ್ದಾರೆ ಎಂದಿದೆ.
ರೈತ ಸಂತೋಷ್ ಅವರು ಹಳ್ಳಿಕಾರ್ ತಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಇವರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯಲಾಗುತ್ತದೆ. ಬಿಗ್ ಬಾಸ್‌ಗೆ ಬಂದಾಗಲೂ ಕೂಡ ಹಳ್ಳಿಕಾರ್ ತಳಿಯ ಬಗ್ಗೆ ಮಾತನಾಡಿದ್ದರು.
ಈಗಾಗಲೇ ಬಿಗ್ ಬಾಸ್‌ನಲ್ಲಿ ಎಲಿಮಿನೇಷನ್ ನಡೆದಿದೆ. ಎರಡೂ ಬಾರಿಯೂ ಇವರು ಬಜಾವ್ ಆಗಿದ್ದರು. ಆದರೆ, ಒಮ್ಮೆ ಬಿಗ್ ಬಾಸ್ ಮನೆಯಿಂದ ಹೊರ ಬಂದರೆ ಮತ್ತೆ ಮನೆಗೆ ಹೋಗುವಂತಿಲ್ಲ. ಹೀಗಾಗಿ ವರ್ತೂರ್ ಸಂತೋಷ್ ವಿಷಯದಲ್ಲಿ ಏನಾಗಲಿದೆ ಎಂಬುದು ಕುತೂಹಲ ಜನರಲ್ಲಿ ಮೂಡಿದೆ.


Click it and Unblock the Notifications











