"ಸದ್ಯದಲ್ಲೇ ನನಗೂ ಗನ್ ಲೈಸೆನ್ಸ್ ಬರುತ್ತೆ.. ಗುಂಡಿನ ಸದ್ದು ಆಗುತ್ತೆ": ದರ್ಶನ್ ಫ್ಯಾನ್ಸ್‌ಗೆ ಲಾಯರ್ ಜಗದೀಶ್ ಎಚ್ಚರಿಕೆ
ಲಾಯರ್ ಜಗದೀಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಕಿತ್ತಾಟ ಇನ್ನೂ ಮುಗಿದಿಲ್ಲ. ಮೊನ್ನೆ ತಾನೇ ದರ್ಶನ್ ಫ್ಯಾನ್ಸ್ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆ ಘಟನೆಯ ಬಳಿಕ ಲಾಯರ್ ಜಗದೀಶ್ ಮತ್ತೊಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದರ್ಶನ್ ಫ್ಯಾನ್ಸ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ದರ್ಶನ್ ಫ್ಯಾನ್ಸ್ ಏಕಾಏಕಿ ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದರು. ಇಬ್ಬರ ನಡುವೆ ಯಾಕೀ ಗಲಾಟೆ? ಅನ್ನೋ ಪ್ರಶ್ನೆ ಅಂತೂ ಎದ್ದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ವರದಿ ಆಗಿರುವ ಪ್ರಕಾರ, ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪ ಲಾಯರ್ ಜಗದೀಶ್ ಒಡೆತನದ ಕಾಂಪ್ಲೆಕ್ಸ್ ಇದೆ. ಅಲ್ಲಿ ಅಣ್ಣಾ ದೇವಿ ಕಾರ್ಯಕ್ರಮದ ಅಂಗವಾಗಿ ಪೆಂಡಲ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಕಿತ್ತಾಟ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆ ಬಳಿಕ ಲಾಯರ್ ಜಗದೀಶ್ ನೇರವಾಗಿ ದರ್ಶನ್ ಅಭಿಮಾನಿಗಳ ಕಡೆ ಬೊಟ್ಟು ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ತನ್ನನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ತನ್ನನ್ನು ಹೊಡೆಯುವುದಕ್ಕೆ 40 ಜನರನ್ನು ಕಳುಹಿಸಿದ್ದರು ಎಂದು ಇತ್ತೀಚೆಗೆ ರಿಲೀಸ್ ಮಾಡಿದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹಾಗೇ ದರ್ಶನ್ ಫ್ಯಾನ್ಸ್‌ಗೆ ನಮ್ಮ ಪ್ರಾಣಕ್ಕೆ ಕುತ್ತು ಬಂದರೆ, ಗುಂಡಿನ ಸದ್ದು ಆಗುತ್ತೆ ಎಂದು ವಿಡಿಯೋದಲ್ಲಿ ಎಚ್ಚರಿಸಿದ್ದಾರೆ. ಐದು ನಿಮಿಷಗಳ ವಿಡಿಯೋ ಝಲಕ್ ಹೀಗಿದೆ.
ಒಬ್ಬನ ಮೇಲೆ 40 ಜನ ಅಟ್ಯಾಕ್
"ಈ ವಿಡಿಯೋ ಮಾಡುತ್ತಿರೋದು ದರ್ಶನ್ ಫ್ಯಾನ್ಸ್‌ಗೋಸ್ಕರ. ಅಲ್ಲೋ ದರ್ಶನ ಒಬ್ಬನ ಮೇಲೆ 40 ಜನ ನಿಮ್ಮ ಹುಡುಗರನ್ನು ಕಳಿಸಿದ್ದೀಯಲ್ಲೋ ಹಾಗಂತ ನಿಮ್ಮ ಹುಡುಗರು ಬರೆದುಕೊಳ್ಳುತ್ತಾ ಇದ್ದಾವ್ರಂತೆ ಅದಕ್ಕೆ ಕೇಳ್ತಾ ಇದ್ದೀನಿ. ನೀನೇನು ದೊಡ್ಡ ಫಿಗರ್ ಅಂದುಕೊಂಡಿದ್ದೀಯಾ? ಹುಡುಗರು ಬರೆದುಕೊಂಡರೆ, ನಿನ್ನ ಗಲೀಜ್ ಫ್ಯಾನ್ಸ್, ಕಿತ್ತೋಗಿರೋ ಕೆಲವು ಲೂಸ್‌ಗಳು ಬರೆದುಕೊಂಡಾಗ ನಿನ್ನನ್ನು ಕೇಳಲೇ ಬೇಕಲ್ವಾ?" ಎಂದಿದ್ದಾರೆ.
ಗುಂಡಿನ ಸದ್ದು ಆಗುತ್ತಿತ್ತು
"ದರ್ಶನ ದರ್ಶನ ದರ್ಶನ.. ನಿಮ್ಮ ಹುಡುಗರು ಟ್ರೋಲ್ ಪೇಜ್‌ನಲ್ಲಿ ಬರೆದುಕೊಳ್ಳುತ್ತಿದ್ದಾರಂತೆ, ನೀನೇ ಅಂತ ಅಟ್ಯಾಕ್ ಮಾಡಿಸಿದ್ದು. ಅಪ್ಪಿ ತಪ್ಪಿ ಗನ್ ಮ್ಯಾನ್ ಇರಲಿಲ್ಲ. ಒಬ್ಬನ ಮುಂದೆ 40 ಜನ ಚಿನ್ನಾ ಅಟ್ಯಾಕ್ ಮಾಡಿದ್ದು. ಎಲ್ಲಿ ವರ್ಕ್‌ಔಟ್ ಆಗುತ್ತೆ. ನಿನ್ನೆ ಗನ್ ಮ್ಯಾನ್ ಇದ್ದಿದ್ದರೆ, ಗುಂಡಿನ ಸದ್ದು ಆಗುತ್ತಿತ್ತು. ನಮ್ಮ ಆಸ್ತಿ, ನಮ್ಮ ಪ್ರಾಣ ಕುತ್ತು ಬಂದರೆ, ನಾವೇನು ಸುಮ್ಮನೆ ಇರಬೇಕಾ?" ಎಂದು ಪ್ರಶ್ನೆ ಮಾಡಿದ್ದಾರೆ.
ದರ್ಶನ್ ಮತ್ತೆ ಜೈಲ್‌ಗೆ ಹೋಗಬೇಕಾ?
"ಸದ್ಯದಲ್ಲೇ ನನಗೂ ಗನ್ ಲೈಸೆನ್ಸ್ ಬರುತ್ತೆ. ನಮ್ಮ ತಂಟೆಗೆ ಬಂದರೆ, ನಮ್ಮ ಪ್ರಾಣಕ್ಕೆ ಕುತ್ತು ಬಂದರೆ, ಗುಂಡಿನ ಸದ್ದು ಆಗುತ್ತೆ. ಬರೆದುಕೊಂಡ ಮೇಲೆ ಹೇಳಬೇಕಾಗುತ್ತೆ. ನನಗೆ ಗೊತ್ತಿಲ್ಲ. ದರ್ಶನ್ ಹುಡುಗರು ಯಾಕೆ ಬರೆದುಕೊಳ್ಳುತ್ತಿದ್ದಾರೆ ಅಂತ. ದರ್ಶನ್ ಅನ್ನು ಮತ್ತೆ ಸಿಕ್ಕಿಸಬೇಕು ಅಂತಿದ್ದೀರಾ? ನೀವು ಹಾಗೇನಾದರೂ ಬರೆದುಕೊಂಡು ನಾನೇನಾದರೂ ಎಫ್‌ಐಆರ್‌ನಲ್ಲಿ ಸೇರಿದರೆ, ಪಾಪ ದರ್ಶನ್ ಮರ್ಡರ್ ಕೇಸ್‌ನಲ್ಲಿ ಜೈಲಿನಲ್ಲಿದ್ದು ಬೇಜಾರಾಗಿ ಫೀಲಿಂಗ್‌ನಲ್ಲಿ ಬಂದಿದ್ದಾನೆ. ಮತ್ತೆ ಅವನು ಜೈಲಿಗೆ ಹೋಗಬೇಕಾ?" ಎಂದು ವಿಡಿಯೋದಲ್ಲಿ ಲೇವಡಿ ಮಾಡಿದ್ದಾರೆ.
ಬರೋಕೂ ಮುನ್ನ ಮನೆಗೆ ಹೇಳಿ ಬನ್ನಿ
"ದರ್ಶನ್ ಫ್ಯಾನ್ಸ್ ಬರೋಕೂ ಮುನ್ನ ಮನೆಗೆ ಹೇಳಿ ಬನ್ನಿ. ಇನ್ಶ್ಯುರೆನ್ಸ್ ಮಾಡಿಸಿಕೊಂಡು ಬನ್ನಿ. ಎತ್ತುತ್ತೇವೆ ಅಂತ ನೀವು ಬಂದರೆ, ಇತ್ತ ನಾವೇನಾದರೂ ಗನ್ ಮ್ಯಾನ್‌ಗೆಳು ಎತ್ತಿಬಿಟ್ಟರೆ ಕಷ್ಟ ಆಗುತ್ತೆ. ಗುಂಡು ಸದ್ದು ಆದ ತಕ್ಷಣ ಓಂ ನಮ: ಶಿವಾಯ. ಮೇಲಕ್ಕೆ ಹೋಗುತ್ತೀರ." ಎಂದು ಹೇಳಿದ್ದಾರೆ. ಆದರೆ, ವಿಡಿಯೋದಲ್ಲಿ ಗುಂಡು, ಗನ್ ಅಂತೆಲ್ಲ ಹೇಳಿರುವುದು ಎಷ್ಟು ಸರಿ ಅಂತಲೂ ನೆಟ್ಟಿಗರು ಲಾಯರ್ ಜಗದೀಶ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











