ಬಿಗ್‌ಬಾಸ್ ಫೈನಲಿಸ್ಟ್ ರಜತ್ ಕುಟುಂಬಕ್ಕೆ ಶಾಕ್; ಠಾಣೆ ಮೆಟ್ಟಿಲೇರಿದ ಪತ್ನಿ ಅಕ್ಷಿತಾ

ಬಿಗ್‌ಬಾಸ್ ಕನ್ನಡ ಸೀಸನ್ 11 ರೋಚಕ ಘಟ್ಟ ತಲುಪಿದೆ. 6 ಜನ ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ರಜತ್ ಕೂಡ ಫಿನಾಲೆ ವಾರಕ್ಕೆ ಬಂದು ಅಚ್ಚರಿ ಮೂಡಿಸಿದ್ದಾರೆ. ಇತ್ತ ಅವರ ಕುಟುಂಬಕ್ಕೆ ಶಾಕ್ ಎದುರಾಗಿದೆ. ಕಿಡಿಗೇಡಿಗಳು ರಜತ್, ಮಾಜಿ ಗೆಳತಿ ಜೊತೆಗಿರುವ ಫೋಟೊ ವೈರಲ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳಿಗೆ ಟ್ರೋಲ್ ಹೊಸದೇನು ಅಲ್ಲ. ಇನ್ನು ಬಿಗ್‌ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳ ಬಗ್ಗೆಯೂ ಟ್ರೋಲ್ ಮಾಡುವುದು ಹೆಚ್ಚಾಗಿದೆ. ಹೇಗಿದ್ದರು ಮನೆಯೊಳಗೆ ಇರುವವರು ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುವ ಧೈರ್ಯದಲ್ಲಿ ಮನಸೋ ಇಚ್ಛೇ ಟ್ರೋಲ್ ಮಾಡುವವರು ಇದ್ದಾರೆ. ಇತ್ತೀಚೆಗೆ ಟ್ರೋಲ್ ಪೇಜ್‌ಗಳು ಹಾವಳಿ ಹೆಚ್ಚಾಗಿದೆ.

Bigg Boss Kannada 11 Rajath Kisan wife Akshita legal action against troll pages

ಬಿಗ್‌ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ರಜತ್ ಕಿಶನ್ ಬಗ್ಗೆಗ ಕಳೆದ ಕೆಲ ದಿನಗಳಗಳಿಂದ ಟ್ರೋಲ್ ಮಾಡಲಾಗುತ್ತಿದೆ. ನವೆಂಬರ್ 20ರಂದು ಕೆಲ ಟ್ರೋಲ್ ಪೇಜ್‌ಗಳಲ್ಲಿ ರಜತ್ ತನ್ನ ಮಾಜಿ ಗೆಳತಿಯ ಜೊತೆಗಿರುವ ವೈಯಕ್ತಿಕ ಫೋಟೊಗಳನ್ನು ಟ್ರೋಲ್ ಪೇಜ್‌ಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದು ರಜಿತ್ ಪತ್ನಿ ಅಕ್ಷಿತಾ ಗಮನಕ್ಕೆ ಬಂದಿತ್ತು. ಕೂಡಲೇ ಆಕೆ ಫೋಟೊ ಡಿಲೀಟ್ ಮಾಡುವಂತೆ ಆ ಇನ್‌ಸ್ಟಾಗ್ರಾಮ್‌ ಅಕೌಂಟ್‌ಗಳಿಗೆ ಮೆಸೇಜ್ ಮಾಡಿದ್ದರು.

ಟ್ರೋಲ್ ಪೇಜ್‌ ಅಡ್ಮಿನ್‌ಗಳಾದ ಅಪರಿತರು ಹಣ ಕೊಟ್ಟರೆ ಡಿಲೀಟ್ ಮಾಡುವುದಾಗಿ ಹೇಳಿದ್ದಾರೆ. ಬಳಿಕ ಅಕ್ಷಿತಾ ಅವರ ತಾಯಿ ಸರೋಜಾ ಅವರ ಬ್ಯಾಂಕ್ ಖಾತೆಯಿಂದ 6500 ರೂಪಾಯಿ ಹಣವನ್ನು ಅಪರಚಿತರ ಅಕೌಂಟ್‌ಗೆ ಹಾಕಲಾಗಿತ್ತು. ಬಳಿಕ ಆ ಅಕೌಂಟ್‌ಗಳಿಂದ ಫೋಟೊ ಡಿಲೀಟ್ ಮಾಡಿ ಬೇರೆ ಬೇರೆ ಇನ್‌ಸ್ಟಾಗ್ರಾಮ್‌ ಟ್ರೋಲ್ ಪೇಜ್‌ಗಳಲ್ಲಿ ಮತ್ತೆ ಫೋಟೊ ಹಾಕಲಾಗಿತ್ತು. ಡಿಲೀಟ್ ಮಾಡಲು ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದು ಸಹಜವಾಗಿಯೇ ರಜತ್ ಕುಟುಂಬ ಸದಸ್ಯರಿಗೆ ಕಸಿವಿಸಿ ಉಂಟು ಮಾಡಿತ್ತು.

ಸದ್ಯ ಆ ಟ್ರೋಲ್ ಪೇಜ್‌ಗಳ ವಿರುದ್ಧ ರಜತ್ ಕಿಶನ್ ಪತ್ನಿ ಅಕ್ಷಿತಾ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ FIR ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ರಜತ್ ಹಾಗೂ ಮಾಜಿ ಗೆಳತಿಯ ಫೋಟೊವನ್ನು ಟ್ರೋಲ್ ಪೇಜ್‌ಗಳಿಂದ ಡಿಲೀಟ್ ಮಾಡಲಾಗಿದೆ. ಆ ಪೇಜ್‌ಗಳು ಡಿ ಆಕ್ಟೀವೆಟ್ ಆಗಿದೆ. ಸದ್ಯ ಬೆದರಿಸಿ ಹಣ ಪಡೆದು ಅಪರಿಚಿತರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಇನ್ನು ಬಿಗ್‌ಬಾಸ್ ಮನೆಯಲ್ಲಿ ರಜತ್ ಚೆನ್ನಾಗಿ ಆಟ ಆಡುತ್ತಿದ್ದಾರೆ. ತಮ್ಮ ನೇರಾ ನೇರ ಮಾತುಗಳಿಂದ ಎಲ್ಲರನ್ನು ನಗುಗಿಸುತ್ತಿದ್ದಾರೆ. 50 ದಿನಗಳ ಬಳಿಕ ಅವರು ದೊಡ್ಮನೆ ಒಳಗೆ ಪ್ರವೇಶಿಸಿದರು. 63 ದಿನಗಳ ಕಾಲ ಮನೆಯೊಳಗೆ ಉಳಿದುಕೊಂಡಿದ್ದಾರೆ. ರಜತ್ ಮಾತಿಗೆ ಎದುರು ಮಾತನಾಡಲು ಉಳಿದವರು ಹರಸಾಹಸಪಡುತ್ತಿದ್ದಾರೆ. ವೀಕೆಂಡ್‌ ಪಂಚಾಯ್ತಿಯಲ್ಲಿ ಸುದೀಪ್ ಎದುರೇ ಉಳಿದ ಸ್ಪರ್ಧಿಗಳಿಗೆ ರಜತ್ ಕೌಂಟರ್ ಕೊಡುತ್ತಿದ್ದಾರೆ.

ವೃತ್ತಿಯಲ್ಲಿ ರಜತ್ ಬ್ಯುಸಿನೆಸ್‌ಮನ್. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. 'ರಾಜ-ರಾಣಿ-2', ಸೂಪರ್ ಜೋಡಿ ರಿಯಾಲಿಟಿ ಶೋಗಳಲ್ಲಿ ಕೂಡ ರಜತ್ ಭಾಗವಹಿಸಿದ್ದರು. ಇನ್ನು ಅವರ ಪತ್ನಿ ಅಕ್ಷಿತಾ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಶೋನಲ್ಲಿ ಭಾಗವಹಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಜತ್ ಬುಜ್ಜಿ ಎಂದೇ ಜನಪ್ರಿಯರಾಗಿದ್ದಾರೆ.

ವೈಲ್ಡ್‌ಕಾರ್ಡ್ ಎಂಟ್ರಿ ಮೂಲಕ 50 ದಿನಗಳ ಬಳಿಕ ರಜತ್ ಬಿಗ್‌ಬಾಸ್ ಮನೆಯೊಳೆ ಹೋಗಿದ್ದಾರೆ. ಹಾಗಾಗಿ ಅವರು ಗೆಲ್ಲುವುದು ಸಾಧ್ಯಾನಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ನೇರಾನೇರ ಮಾತನಾಡುವ ರಜತ್ ಗೆಲ್ಲಬೇಕು ಎಂದು ಬೆಂಬಲ ಸೂಚಿಸುತ್ತಿದ್ದಾರೆ. ಸದ್ಯ ಮನೆಯಲ್ಲಿ ಇರುವ ಇನ್ನುಳಿದ ಐವರಿಗಿಂತ ರಜತ್ ಒಳ್ಳೆ ಸ್ಪರ್ಧಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
BBK 11: Finalist Rajath wife Akitha Files Cyber Complaint Over Social Media Harassment
Read more about: bigg boss kannada 11 case tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X