BBK 11: ಬಿಗ್‌ಬಾಸ್ ಮನೆಗೆ ಗಾಯಕ ವೈಲ್ಡ್ ಕಾರ್ಡ್ ಎಂಟ್ರಿ; ಬರ್ತಿದ್ದಂತೆ ಕ್ಯಾಪ್ಟನ್ ಆಗಿ ಆಯ್ಕೆ
ವಾರದ ನಡುವೆಯೇ ಇಬ್ಬರು ಸ್ಪರ್ಧಿಗಳು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು. ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್ ಜಗದೀಶ್ ಹಾಗೂ ಹಲ್ಲೆ ಮಾಡಿದ್ದಕ್ಕೆ ರಂಜಿತ್‌ಗೆ ಬಿಗ್‌ಬಾಸ್ ಶಿಕ್ಷೆ ಕೊಟ್ಟಾಗಿದೆ. ಇದೀಗ ಮನೆಗೆ ಮತ್ತೊಬ್ಬರ ಎಂಟ್ರಿ ಆಗಿದೆ.
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧಿಗಳು ಬರುವುದು ಹೊಸದೇನು ಅಲ್ಲ. ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಮತ್ತೊಬ್ಬ ಸ್ಪರ್ಧಿ ಸೇರ್ಪಡೆ ಆಗಿದ್ದಾರೆ. 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್‌ನಲ್ಲಿ ಜಗದೀಶ್, ರಂಜಿತ್ ಸೇರಿ ಮನೆ ಮಂದಿಗೆಲ್ಲಾ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಅವರಿಬ್ಬರದ್ದು ಮಾತ್ರ ತಪ್ಪಲ್ಲ, ಅವರು ಹಾಗೆ ನಡೆದುಕೊಳ್ಳಲು ಉಳಿದವರು ಕಾರಣ ಎಂದು ಕಿಚ್ಚ ಚಾಟಿ ಬೀಸಿದ್ದರು.

ಬಿಗ್‌ಬಾಸ್ ಮನೆಗೆ ಮತ್ತೆ ಜಗದೀಶ್ ಹಾಗೂ ರಂಜಿತ್ ಬರಬೇಕು ಎನ್ನುವುದು ಸಾಕಷ್ಟು ಜನರ ಆಸೆಯಾಗಿದೆ. ಬಿಗ್‌ಬಾಸ್ ಆಯೋಜಕರು ಇದೇ ಲೆಕ್ಕಾಚಾರದಲ್ಲಿ ಇರುವಂತೆ ಇದ್ದಾರೆ. ಜಗದೀಶ್ ಮತ್ತೆ ಬರುವ ಬಗ್ಗೆಯೂ ಸುಳಿವು ಸಿಕ್ಕಿದೆ. ವೇದಿಕೆಯಲ್ಲೇ ಜಗದೀಶ್ ಪ್ರತಿಕ್ರಿಯೆ ನೀಡಿರುವ ವೀಡಿಯೋವನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ಜಗದೀಶ್ ಮತ್ತೆ ಬರುವ ಆಸೆ ವ್ಯಕ್ತಪಡಿಸಿದ್ದಾರೆ.
ಇವತ್ತು(ಅಕ್ಟೋಬರ್ 20) ಸಂಜೆ ಸುದ್ದಿ ಮಾಧ್ಯಮಗಳ ಜೊತೆ ಲಾಯರ್ ಜಗದೀಶ್ ಮಾತನಾಡುವುದಾಗಿ ಹೇಳಿದ್ದಾರೆ. ಬಿಗ್‌ಬಾಸ್ ಮನೆಯ ಸಣ್ಣ ಜರ್ನಿ, ಅನುಭವದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವುದಾಗಿ ವೀಡಿಯೋ ಬೈಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದ ತಿಳಿಸುವುದಾಗಿಯೂ ತಿಳಿಸಿದ್ದಾರೆ. ಇದೆಲ್ಲದರ ನಡುವೆ 'ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ' ಪ್ರೋಮೊ ರಿಲೀಸ್ ಆಗಿದೆ.
ಗಾಯಕ ಹನುಮಂತ ಲಮಾಣಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ. ಹೋಗುತ್ತಿದ್ದಂತೆ ಈ ವಾರದ ಕ್ಯಾಪ್ಟನ್ ಆಗಿಯೂ ಆಯ್ಕೆ ಆಗಿದ್ದಾರೆ. ಎಂದಿನ ತನ್ನ ಹಾಸ್ಯದ ದಾಟಿಯಲ್ಲಿ ಮನೆಮಂದಿಯ ಜೊತೆ ಪರಿಚಯ ಮಾಡಿಕೊಂಡಿದ್ದಾರೆ. ಕುರಿಗಾಯಿ ಆಗಿದ್ದ ಹನುಮಂತ ಲಮಾಣಿ ತನ್ನ ಗಾಯನದ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆದಿದ್ದರು. 'ಸರಿಗಮಪ ಸೀಸನ್ 15'ರ ಮೊದಲ ರನ್ನರ್ ಅಪ್ ಆಗಿದ್ದರು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಲಮಾಣಿ ತನ್ನ ಗಾಯನದಿಂದ ಮೋಡಿ ಮಾಡಿದ್ದರು. ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. 'ಸರಿಗಮಪ ಸೀಸನ್ 15'ಕ್ಕೆ ಆಯ್ಕೆಯಾದ ಮೆಂಟರ್‌ಗಳ ಮಾರ್ಗದರ್ಶನದಿಂದ ಹನುಮಂತ ಲಮಾಣಿ ಗಾಯನದಲ್ಲಿ ಮತ್ತಷ್ಟು ಪಕ್ವತೆ ಬಂದಿತ್ತು.
'ಸರಿಗಮಪ ಸೀಸನ್ 15' ಬಳಿಕ ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಸೆಮಿಫೈನಲ್‌ವರೆಗೂ ಹನುಮಂತ ಹೋಗಿ ವೀಕ್ಷಕರನ್ನು ರಂಜಿಸಿದ್ದರು. ಬಿಗ್‌ಬಾಸ್ ಸೀಸನ್ 7ಕ್ಕೆ ಸ್ಪರ್ಧಿಯಾಗಿ ಹನುಮಂತ ಲಮಾಣಿ ಹೋಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆತನ ಸಾಕಷ್ಟು ಅಭಿಮಾನಿಗಳು ಆತನನ್ನು ದೊಡ್ಮನೆ ಒಳಗೆ ನೋಡಲು ಬಯಸಿದ್ದರು. ಅವರ ಆಸೆ ಈಗ ಈಡೇರಿದಂತಾಗಿದೆ.ಲುಂಗಿ ಉಟ್ಟು ಹೆಗಲ ಮೇಲೆ ಟವೆಲ್ ಹಾಕ್ಕೊಂಡು ಹನುಮಂತ ಲಮಾಣಿ ಸರಿಗಮಪ ವೇದಿಕೆ ಏರಿದ್ದರು. ಅದೇ ಲುಕ್‌ನಲ್ಲಿ ಕೊನೆಯವರೆಗೂ ಕಾಣಿಸಿಕೊಂಡಿದ್ದರು. ಇದೇ ಗೆಟಪ್‌ನಲ್ಲೇ ಸಾಕಷ್ಟು ವೇದಿಕೆಗಳಲ್ಲಿ ಹಾಡು ಹಾಡಿ ಸಂಗೀತ ಪ್ರೇಮಿಗಳನ್ನು ಹನುಮಂತ ರಂಜಿಸಿದ್ದರು. ತನ್ನ ಮುಗ್ಧ ಸ್ವಭಾವ ಹಾಗೂ ಉತ್ತರ ಕರ್ನಾಟಕ ಭಾಗದ ಹಳ್ಳಿ ಸೊಗಡಿನ ಮಾತಿನಿಂದಲೇ ಹನುಮಂತ ಜನಪ್ರಿಯರಾಗಿದ್ದರು. ಬಿಗ್‌ಬಾಸ್ ಮನೆಗೂ ಲುಂಗಿ ಉಟ್ಟು ಪ್ರವೇಶಿಸಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಂತೆ ಹನುಮಂತ ಹೇಳಿದ್ದೀಯಾ ಎಂದು ಮಾನಸ ಹೇಳಿದ್ದಾರೆ. ಕೂಡಲೇ ಹುಚ್ಚ್ ಬಂದೈತಿ ಎಂದು ತಮಾಷೆ ಮಾಡಿದ್ದಾರೆ. ಧನರಾಜ್ ಜೊತೆ ಮಾತನಾಡುತ್ತಾ 'ನಿಮ್ಮದು ಇಂಡಿಯನ್ ಟಾಯ್ಲೆಟ್ಟಾ, ವೆಸ್ಟರ್ನ್ ಟಾಯ್ಲೆಟ್ಟಾ' ಎಂದು ಚರ್ಚೆ ಆರಂಭವಾಗಿದೆ. 'ಹೊರಗಡೆ ಗಾರ್ಡನ್ ಇದೆ ಅಲ್ಲೇ ಕೂತಿಬಿಡ್ತೀನಿ ಬಾ' ನಗೆ ಚಟಾಕಿ ಹಾರಿಸಿದ್ದಾರೆ.


Click it and Unblock the Notifications











