ಹಣದ ವಿಚಾರಕ್ಕೆ ಗರ್ಲ್‌ಫ್ರೆಂಡ್ ಜೊತೆ ನನ್ನ ಬ್ರೇಕಪ್‌ ಆಯ್ತು - ಬಿಗ್ ಬಾಸ್ ತ್ರಿವಿಕ್ರಮ್...!

ಯಾರೇ ಆಗಲಿ ಮದುವೆಯಾಗುವ ಮುನ್ನ ತನ್ನ ಕೈ ಹಿಡಿಯುವ ಹುಡುಗನ ಆಸ್ತಿ, ಅಂತಸ್ತು, ಸ್ಥಾನಮಾನ ನೋಡುತ್ತಾರೆ. ಅದು ಜನಸಾಮಾನ್ಯರೇ ಇರಲಿ. ಚಿತ್ರರಂಗದಲ್ಲಿ ಕನಸೆಂಬ ಕುದರೆಯನ್ನೇರಿದ ಕಲಾವಿದರೇ ಇರಲಿ. . ಹಣ ಇದ್ದರೆ ಮಾತ್ರ ಇಲ್ಲಿ ಸಂಬಂಧ-ಅನುಬಂಧ ಎಲ್ಲವೂ. ಇದಕ್ಕೆ ತ್ರಿವಿಕ್ರಮ್ ಅವರ ವ್ಯೆಯಕ್ತಿಕ ಬದುಕು ಮತ್ತೊಂದು ಉದಾಹರಣೆ.

ಹೌದು. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೂಲಕ ಹೊಸ ಬದುಕು ಶುರು ಮಾಡಿರುವ ತ್ರಿವಿಕ್ರಮ್ ತಮ್ಮ ಲವ್ & ಬ್ರೇಕಪ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ರ್ಯಾಪಿಡ್ ರಶ್ಮಿ ಅವರಿಗೆ ನೀಡಿರುವ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ತ್ರಿವಿಕ್ರಮ್ ನನ್ನ ತಂದೆ ತೀರಿಕೊಂಡು ಆರು ತಿಂಗಳು ಆಗಿತ್ತು ಆಗ ನನ್ನ ಬ್ರೇಕಪ್ ಆಯ್ತು ಎಂದಿದ್ದಾರೆ.

Bigg Boss Kannada 11 Trivikram Opens Up About Love and Breakup

ನಾನು ಇನ್ನೂ ಬದುಕಿನಲ್ಲಿ ನೆಲೆ ಕಾಣಲು ಒದ್ದಾಡುತ್ತಿದ್ದ ದಿನಗಳವು ಆ ಸಮಯದಲ್ಲಿ ಪ್ರೇಮಾಂಕುರವಾಗಿತ್ತು ಎಂದಿರುವ ತ್ರಿವಿಕ್ರಮ್, ನಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಕೆಲಸ ಮಾಡುತ್ತಿದ್ದಳು, ಅವಳು ನಾನು ಸೆಟಲ್ ಆಗಬೇಕು ಎಂದು ಯಾವತ್ತು ಕೇಳಿರಲಿಲ್ಲ , ಒತ್ತಡ ಹೇರಿರಲಿಲ್ಲ, ಅವರ ಮನೆ ಕಡೆ ತುಂಬಾ ಚೆನ್ನಾಗಿ ಇದ್ದರು,ಅನ್ನೋದು ಬೇರೆ ವಿಷಯವಾದರೂ ಈ ಸಮಯದಲ್ಲಿ ಅವರ ತಂದೆ ಮದುವೆಯ ವಿಚಾರದಲ್ಲಿ ತುಂಬಾ ಗಂಭೀರವಾದರು ಎಂದು ಹೇಳಿದ್ದಾರೆ.

ಹೀಗಾಗಿ ಆರ್ಥಿಕ ಪರಿಸ್ಥಿತಿ ಇಂದಲ್ಲ ನಾಳೆ ನಮ್ಮ ನಡುವೆ ಅಂತರ ಸೃಷ್ಟಿ ಮಾಡುತ್ತೆ ಎಂಬ ಭಾವನೆ ನಮಗೆ ಬಂತು ಈ ಹಿನ್ನೆಲೆ ಇಬ್ಬರು ಮಾತನಾಡಿಕೊಂಡು ದೂರ ಆದೆವು ಎಂದ ತ್ರಿವಿಕ್ರಮ್ ಈಗ ಯಾರೂ ಬೇಡ ಮೊದಲು ಬದುಕನ್ನು ಭದ್ರವಾಗಿ ಮಾಡಿಕೊಳ್ಳೋಣ ಆಮೇಲೆ ಹುಡುಗಿ ಸಿಗ್ತಾಳೆ ಎಂದು ಅಂದುಕೊಂಡು ಅಂದಿನಿಂದ ಎಲ್ಲದರಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ನಾನು ಸಿಂಗಲ್ ಆಗಿದ್ದು ಫ್ರೆಂಡ್ ನಮ್ಮ ಬದುಕಿನ ಪಾರ್ಟನರ್ ಆದರೆ ಆಗ ಬದುಕು ಸ್ವರ್ಗವಾದಂತೆ ಎಂದು ಹೇಳಿದ್ದಾರೆ. ಆ ಹುಡುಗಿಗೆ ಬೇರೆ ಮದುವೆಯಾಗಿದೆ. ಆ ಹುಡುಗಿ ಇನ್ನೂ ನನ್ನ ಜೊತೆ ಸಂಪರ್ಕದಲ್ಲಿದ್ದಾಳೆ, ಅವಳ ಗಂಡ ಕೂಡ ಟಚ್‌ನಲ್ಲಿದ್ದಾರೆ ಆಗಾಗ ನಾವೆಲ್ಲ ಸಿಕ್ತಾ ಇರ್ತಿವಿ ಎಂದು ಕೂಡ ತ್ರಿವಿಕ್ರಮ್ ಹೇಳಿದ್ದಾರೆ.

ಕೇವಲ ಬ್ರೇಕಪ್ ವಿಚಾರ ಮಾತ್ರ ಅಲ್ಲ ತಮ್ಮ ಬದುಕಿನ ಹತ್ತು ಹಲವು ವಿಚಾರಗಳ ಕುರಿತು ತ್ರಿವಿಕ್ರಮ್ ಈ ಸಂದರ್ಶನದಲ್ಲಿ ರ್ಯಾಪಿಡ್ ರಶ್ಮಿ ಅವರ ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್‌ ಕಾರ್ಯಕ್ರಮದ ಅನುಭವ ಅಲ್ಲಿ ಕಲಿತ ಪಾಠಗಳ ಬಗ್ಗೆ ಮಾತನಾಡಿರುವ ತ್ರಿವಿಕ್ರಮ್ ಕೊರೊನಾದ ದಿನಗಳಲ್ಲಿ ತಾವು ಅನುಭವಿಸಿದ ಕಷ್ಟದ ಕಥೆಯನ್ನು ಕೂಡ ಹಂಚಿಕೊಂಡಿದ್ದಾರೆ. ಹೇಗೆ ಕೊರೊನಾದಿಂದ ತಮ್ಮ ಕನಸು ಕಮರಿ ಹೋದವು ಎನ್ನುವುದನ್ನು ವಿವರಿಸಿದ್ದಾರೆ. ಇನ್ನು, ಅವಕಾಶಕ್ಕಾಗಿ 02 ವರ್ಷ 08 ಪ್ಯಾಕ್‌ನಲ್ಲಿ ತಿರುಗಾಡಿರುವುದನ್ನು ಕೂಡ ನೆನಪು ಮಾಡಿಕೊಂಡಿರುವ ತ್ರಿವಿಕ್ರಮ್ ಕೊನೆ ಕೊನೆಗೆ ಬೇಸತ್ತು ಅಯ್ಯೋ ನನ್ನ ಬದುಕು, ಈ ತರ ನಾನು ಬದುಕಲಾರೆ, ನಾನು ಇರುವಂತೆ ಒಪ್ಪಿಕೊಂಡು ಕರೆದು ಅವಕಾಶ ಕೊಟ್ಟರೆ ಕೊಡಲಿ ಎಂದು ವರ್ಕೌಟ್ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಹೊರತು ಪಡಿಸಿದರೆ ಸಿಸಿಎಲ್‌ನಲ್ಲಿ ಸಿಕ್ಕ ಅವಕಾಶದಿಂದ ಕೂಡ ನನಗೆ ಭಾಗ್ಯದ ಬಾಗಿಲು ತೆರೆಯಿತು ಎಂದಿರುವ ತ್ರಿವಿಕ್ರಮ್, ಸಿಸಿಎಲ್‌ದಿಂದಾಗಿ ನನಗೆ ಚಿತ್ರರಂಗದಲ್ಲಿ ಅನೇಕರ ಪರಿಚಯವಾಯ್ತು, ನೆಟವರ್ಕಿಂಗ್ ಬೆಳೆಯಿತು ಎಂದು ಹೇಳಿದ್ದಾರೆ. ಸಿಸಿಎಲ್‌ ನನಗೊಂದು ಗುರುತನ್ನು ಕೂಡ ತಂದು ಕೊಡ್ತು ಎಂದು ಹೇಳಿದ್ದಾರೆ.

More from Filmibeat

Read more about: biggboss bigg boss breakup
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X