BBK12 Grand Finale: ಗಿಲ್ಲಿ ಆಸೆ ಈಡೇರಲೇ ಇಲ್ಲ; 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಾವ್ಯಾ ಶೈವ

ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಗಿಲ್ಲಿ ಜೊತೆಗೆ ಗಮನ ಸೆಳೆದಿದ್ದು ಕಾವ್ಯಾ ಶೈವ. ಗಿಲ್ಲಿ ಕಾರಣಕ್ಕೆ ಕಾವು ಹೆಚ್ಚು ದಿನ ಮನೆಯಲ್ಲಿ ಉಳಿದುಕೊಂಡಿದ್ದು ಸುಳ್ಳಲ್ಲ. ಟಾಪ್‌ 4 ಹಂತಕ್ಕೆ ಕಾವ್ಯಾ ಬಂದಿದ್ದೇ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ ಗಿಲ್ಲಿ ಆಸೆ ಕೈಗೂಡಲಿಲ್ಲ. ಕಾವ್ಯಾ 4ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ.

ಗಿಲ್ಲಿ ಹಾಗೂ ಕಾವ್ಯಾ ಬಿಗ್‌ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಇಬ್ಬರ ನಡುವೆ ಒಳ್ಳೆ ಒಡನಾಟ ಇತ್ತು. ಸದಾ ಟಾಮ್ ಅಂಡ್ ಜೆರ್ರಿ ತಡ ಕಿತ್ತಾಡುತ್ತಿದ್ದರು. ಕಾವು ಕಾವು ಎಂದು ಆಕೆಯ ಹಿಂದೆ ಗಿಲ್ಲಿ ಓಡಾಡುತ್ತಿದ್ದರು. ಜಂಟಿಯಾಗಿ ಇಬ್ಬರೂ ಕೈಗೆ ದಾರ ಕಟ್ಟಿಕೊಂಡು ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಬಳಿಕ ದರ ಕತ್ತರಿಸಿದ ಬಳಿಕ ಕೂಡ ಆಕೆಯ ಸ್ನೇಹವನ್ನು ಗಿಲ್ಲಿ ಬಿಟ್ಟುಕೊಡದೇ ಇಲ್ಲ. ಒಂದು ಹಂತದಲ್ಲಿ ಗಿಲ್ಲಿಯಿಂದಲೇ ಕಾವ್ಯಾ ಎನ್ನುವ ಮಾತು ಬಂದಾಗ ಆತನಿಂದ ದೂರಾಗಲು ಕಾವ್ಯಾ ಬಯಸಿದ್ದರು. ಗಿಲ್ಲಿನ ನಾಮಿನೇಟ್ ಮಾಡುವ ಸಾಹಸ ಮಾಡಿದ್ದರು ಕಾವ್ಯಾ.

Bigg Boss Kannada 12 Kavya Finishes 4th as Gilli Kavya Finale Dream Falls Short

ಧ್ರುವಂತ್ ಎಲಿಮಿನೇಟ್ ಆಗಿ ಕಾವ್ಯಾ ಫಿನಾಲೆಗೆ ಬಂದಿದ್ದು ವೀಕ್ಷಕರಿಗೂ ಅಚ್ಚರಿ ಮೂಡಿಸಿತ್ತು. ಫಿನಾಲೆ ದಿನ ಸುದೀಪ್ ಅವರ ಎಡ, ಬಲದಲ್ಲಿ ನಾನು ಹಾಗೂ ಕಾವ್ಯಾ ನಿಲ್ಲಬೇಕು ಎಂದು ಗಿಲ್ಲಿ ಹೇಳುತ್ತಾ ಬಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಟಾಪ್ 4ವರೆಗೆ ಬಂದರು. ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ವೀಕ್ಷಕರ ಮತಗಳ ಆಧಾರದಲ್ಲಿ ಕಾವ್ಯಾ ಹಿನ್ನಡೆ ಅನುಭವಿಸಿದರು.

'ಕೆಂಡಸಂಪಿಗೆ' ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದ ಕಾವ್ಯಾ ಕಳೆದ ವರ್ಷ ತೆರೆಗೆ ಬಂದಿದ್ದ 'ಕೊತ್ತಲವಾಡಿ' ಚಿತ್ರದ ನಾಯಕಿ ಆಗಿ ಬಣ್ಣ ಹಚ್ಚಿದ್ದರು. 2ನೇ ಸ್ಪರ್ಧಿಯಾಗಿ ಕಾವ್ಯಾ ಮನೆ ಒಳಗೆ ಹೋಗಿದ್ದರು. ಗಿಲ್ಲಿ ಬೆಂಬಲದಿಂದಲೇ 112 ದಿನಗಳ ಕಾಲ ಕಾವ್ಯಾ ಮನೆ ಒಳಗೆ ಇದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀ ಫಿನಾಲೆ ವೇಳೆ ಕೂಡ ಆಕೆಯನ್ನು ಗಿಲ್ಲಿ ಬಿಟ್ಟುಕೊಡಲಿಲ್ಲ. ತಮಗೆ ಮೇಲೆ ಆಕೆಗೆ ಸ್ಥಾನ ಕೊಟ್ಟು ಅಚ್ಚರಿ ಮೂಡಿಸಿದ್ದರು.

ಗಿಲ್ಲಿಯನ್ನು ಕಾವ್ಯಾ ಸ್ನೇಹಿತನಂತೆ ಭಾವಿಸಿದ್ದಾರೆ. ಆದರೆ ಗಿಲ್ಲಿ ಮಾತ್ರ ಲವ್ ಎನ್ನುವಂತೆ ಹಿಂದೆ ಸುತ್ತಾಡಿದರು. ಆಕೆ ರಾಕಿ ಕಟ್ಟಿದ್ರು ಬಿಡಲಿಲ್ಲ. ರೇಗಿಸಬೇಡ ಎಂದು ಎಷ್ಟು ಹೇಳಿದ್ರು ಕೇಳಲಿಲ್ಲ. ಆಕೆ ರಾಕಿ ಕಟ್ಟಿದ್ರು, ಅಣ್ಣ ಅಂದ್ರು ಸುಮ್ಮನಾಗಲಿಲ್ಲ. ರೇಗಿಸಬೇಡ ಎಂದು ಎಷ್ಟು ಹೇಳಿದ್ರು ಕೇಳಲಿಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಮನೆ ಒಳಗೆ ಹೋಗಿ ಕಾವ್ಯಾ ಅವರನ್ನು ಹೊರಗಡೆ ಕರೆದುಕೊಂಡು ಬಂದರು. ಮೊದಲಿಗೆ 15 ಲಕ್ಷ ರೂ. ಹಣ ಇರುವ ಸೂಟ್‌ಕೇಸ್ ತೆಗೆದುಕೊಂಡು ರವಿಚಂದ್ರನ್ ಮನೆ ಒಳಗೆ ಹೋಗಿದ್ದರು.

ಈ ಸೂಟ್‌ಕೇಸ್‌ನಲ್ಲಿ 15 ಲಕ್ಷ ರೂ. ಹಣ ಇದೆ. ಯಾರಾದರೂ ಆಟ ಇಲ್ಲಿಗೆ ಬಿಟ್ಟು ಬಂದರೆ ಈ ಹಣ ಸಿಗುತ್ತದೆ ಎಂದು ಕ್ರೇಜಿಸ್ಟಾರ್ ಆಫರ್ ಕೊಟ್ಟರು. ಆದರೆ ಕಾವ್ಯಾ, ಗಿಲ್ಲಿ, ರಕ್ಷಿತಾ ಹಾಗೂ ಕಾವ್ಯಾ ಯಾರೊಬ್ಬರೂ ಒಪ್ಪಲಿಲ್ಲ. ಅಂತಿಮ ಫಲಿತಾಂಶದವರೆಗೆ ಕಾಯುವುದಾಗಿ ಹೇಳಿದ್ರು. ಕೊನೆಗೆ ವೋಟ್‌ಗಳನ್ನು ಆಧರಿಸಿ ಯಾರಿಗೆ 4ನೇ ಸ್ಥಾನ ಎನ್ನುವುದು ಗೊತ್ತಾಯಿತು. ಆದರೆ ಮನೆಗೆ ಒಳಗೆ ಕಾವ್ಯಾ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿತ್ತು.

More from Filmibeat

Read more about: bigg boss bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X