#BBK4 FB POLL : ಗೊಂದಲಕ್ಕೆ ನಮ್ಮ ಸ್ಪಷ್ಟನೆ
ಒನ್ಇಂಡಿಯಾ ಕನ್ನಡ ನಡೆಸಿದ ಬಿಗ್ ಬಾಸ್ ಕನ್ನಡ 4 ವಿನ್ನರ್ ಯಾರಾಗಬೇಕು? ಎಂಬ ಲೈವ್ ಫೇಸ್ ಬುಕ್ ಪೋಲ್ ಗೆ ನೀವು ನೀಡಿದ ಅಭೂತ ಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು. ಫೇಸ್ ಬುಕ್ ಪೋಲ್ ಗೊಂದಲಕ್ಕೆ ಸ್ಪಷ್ಟನೆ ಇಲ್ಲಿದೆ.
ಒನ್ಇಂಡಿಯಾ ಕನ್ನಡ ನಡೆಸಿದ ಬಿಗ್ ಬಾಸ್ ಕನ್ನಡ 4 ವಿನ್ನರ್ ಯಾರಾಗಬೇಕು? ಎಂಬ ಲೈವ್ ಫೇಸ್ ಬುಕ್ ಪೋಲ್ ಗೆ ನೀವು ನೀಡಿದ ಅಭೂತ ಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು.
ತಾಂತ್ರಿಕ ತೊಂದರೆಯಿಂದ ವೋಟಿಂಗ್ ಸಂಖ್ಯೆಯಲ್ಲಿ ಕೆಲವು ವ್ಯತ್ಯಾಸವಾಗಿದ್ದರಿಂದ ಕ್ಷಮೆಕೋರುತ್ತೇವೆ. ಸಾರ್ವಜನಿಕರ ಅಭಿಮತಕ್ಕೆ ಮನ್ನಣೆ ನೀಡುತ್ತೇವೆ. ಇದು ಪೂರ್ವ ನಿಯೋಜಿತ ವೋಟಿಂಗ್ ಅಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಒಳ್ಳೆಹುಡ್ಗ ಪ್ರಥಮ್ ಆಗಲಿ, ಕಿರಿಕ್ ಕೀರ್ತಿ ಪರ ಆಗಲಿ ಒನ್ ಇಂಡಿಯಾ ಈ ಮತದಾನ ನಡೆಸಿಲ್ಲ. ಇದು ಜನರ ಅಭಿಮತ ತಿಳಿಯಲು ನಡೆಸಿದ ಒಂದು ಮೊದಲ ಪ್ರಯತ್ನ.

ಲೈವ್ ಸ್ಟ್ರೀಮಿಂಗ್ ಗೆ ಬಳಸುವ ಸಾಫ್ಟ್ ವೇರ್ ರೀಸೆಟ್ ಆಗಿದ್ದರಿಂದ ಲೈವ್ ಪೋಲ್ ಮಧ್ಯದಲ್ಲಿ ಮುಂಚೂಣಿಯಲ್ಲಿದ್ದ ಕೀರ್ತಿ ಹಾಗೂ ಪ್ರಥಮ್ ನಡುವಿನ ಸಂಖ್ಯೆಗಳು ಕ್ಷಣಕಾಲ ಅದಲು ಬದಲಾಗಿ ಎಲ್ಲರಿಗೂ ಗೊಂದಲ ಮೂಡಿಸಿದ್ದು ನಿಜ. [ಇವರೆಲ್ಲ 'ಬಿಗ್ ಬಾಸ್' ಯಾಕೆ ಗೆಲ್ಲಬೇಕು.? ಅರ್ಹತೆ ಏನಿದೆ.? ]
ಇದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ. ಇದು ತಾಂತ್ರಿಕ ತೊಂದರೆಯಿಂದಾದ ಸಮಸ್ಯೆಯೇ ಹೊರತು ನಾವು ಯಾವುದೇ ರೀತಿಯಲ್ಲಿ ಯಾರನ್ನೇ ಆಗಲಿ ಮೆಚ್ಚಿಸಲು ಅಥವಾ ಗೆಲ್ಲಿಸಲು ಮಾಡಿದ ತಂತ್ರವಲ್ಲ ಎಂದು ಇನ್ನೊಮ್ಮೆ ಸ್ಪಷ್ಟಪಡಿಸುತ್ತೇವೆ.

ಸುಮಾರು ಐದೂವರೆ ಲಕ್ಷ ವೀಕ್ಷಣೆ ಪಡೆದ ಈ ವಿಡಿಯೋ ಪೋಲ್ ನ ಅಂತಿಮ ಫಲಿತಾಂಶದಂತೆ
ಕೀರ್ತಿ : 44264
ರೇಖಾ : 15510
ಪ್ರಥಮ್ : 35302
ಮೋಹನ್ : 1282
ಮಾಳವಿಕಾ: 920
'ಲೈಕ್ ಬಟನ್ ಕೀರ್ತಿಗೆ ನೀಡಿದ್ದರಿಂದ ಜನರಲ್ಲಿ ಗೊಂದಲ ಮೂಡಿದ್ದು, ಎಲ್ಲರೂ ಸಹಜವಾಗಿ ಲೈಕ್ ಬಟನ್ ಒತ್ತುತ್ತಿದ್ದಾರೆ' ಎಂದು ಓದುಗರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರತಿಕ್ರಿಯಿಸಿ, 'ನಾವು ಪ್ರಥಮ್ ಗೆ ವೋಟ್ ಮಾಡಿದರೆ ವೋಟ್ ಎಲ್ಲಾ ಕೀರ್ತಿಗೆ ಬರುತ್ತಿದೆ' ಎಂದು ಆಕ್ಷೇಪಿಸಿದ್ದಾರೆ.
ನಿಮ್ಮ ಎಲ್ಲಾ ಪ್ರತಿಕ್ರಿಯೆ, ಆಕ್ರೋಶ, ಕಾಮೆಂಟ್ ಗಳಿಗೆ ಧನ್ಯವಾದಗಳು. ಈ ಬಗ್ಗೆ ಮುಂದಿನ ಪೋಲ್ ನಲ್ಲಿ ಎಚ್ಚರಿಕೆಯಿಂದ ಗಮನ ಹರಿಸುತ್ತೇವೆ. ಪ್ರತಿಕ್ಷಣ ಹೆಚ್ಚಿನ ಅಪ್ಡೇಟ್ಸ್ ಗಾಗಿ ನೋಡುತ್ತಿರಿ ಒನ್ ಇಂಡಿಯಾ ಫೇಸ್ ಬುಕ್ ಪುಟ


Click it and Unblock the Notifications











