ದಾಂಪತ್ಯ ಜೀವನಕ್ಕೆ ಸಜ್ಜಾದ ಬಿಗ್ ಬಾಸ್ ಆಂಡ್ರ್ಯೂ: ಹುಡುಗಿ ಯಾರು?
ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಹೆಚ್ಚು ಸದ್ದು ಮಾಡಿದ ಆಂಡ್ರ್ಯೂ ಈಗ ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದಾರೆ. ಬಹುಕಾಲದ ಗೆಳೆತಿ ಜನನಿ ಗಣೇಶ್ ಎಂಬುವವರ ಜೊತೆ ಮದುವೆಯಾಗಲು ತಯಾರಾಗಿದ್ದಾರೆ.
ಜನನಿ ಅವರು ಬೆಂಗಳೂರಿನ ಪ್ರತಿಷ್ಠಿತ ಕಾರ್ಪೋರೆಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಆಂಡ್ರ್ಯೂ ಮನೆಯವರಿಗೆ ಕೂಡ ಜನನಿ ಪರಿಚಯವಿದ್ದು, ಬಹಳ ಸಮಯದಿಂದ ಫ್ಯಾಮಿಲಿ ಫ್ರೆಂಡ್ ಆಗಿದ್ದಾರಂತೆ.
ಲವ್ ಕಮ್ ಅರೇಂಜ್ ಮ್ಯಾರೇಜ್ ಇದಾಗಿದ್ದು, ಈ ವರ್ಷ ಅಂತ್ಯಕ್ಕೆ ಅಥವಾ ಮುಂದಿನ ವರ್ಷ ಆರಂಭದಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಮುಂದಿನ ವರ್ಷವೇ ಮದುವೆ ದಿನಾಂಕವೂ ನಿಗದಿಯಾಗಲಿದೆಯಂತೆ.

ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಆಂಡ್ರ್ಯೂ ಅವರು ಕೆಲವು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೋ ಒಂದಕ್ಕೆ ನಿರೂಪಕರಾಗಿಯೂ ಕೆಲಸ ಮಾಡಿದರು. ಜೊತೆಗೆ ಸಿನಿಮಾ ಆಫರ್ ಗಳು ಬಂದಿದೆ. ಆದರೆ, ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಅವುಗಳನ್ನ ಒಪ್ಪುಕೊಳ್ಳುವುದಕ್ಕೆ ಕಷ್ಟವಾಗಿದೆಯಂತೆ.
ಇನ್ನುಳಿದಂತೆ ಬಿಗ್ ಬಾಸ್ ಮನೆಯಲ್ಲಿ ನೇರ ನುಡಿ, ನಡವಳಿಕೆಯಿಂದ ಸಖತ್ ಸದ್ದು ಮಾಡಿದ್ದರು. ಕವಿತಾ ಗೌಡ ಅವರನ್ನ ಪ್ರೀತಿಸುತ್ತೇನೆ ಎಂದು ದೊಡ್ಡ ಸಂಚಲನ ಸೃಷ್ಟಿಸಿದ್ದರು. ಬಳಿಕ ಕವಿತಾ ಜೊತೆಯಲ್ಲೂ ಗಲಾಟೆ ಮಾಡಿಕೊಂಡಿದ್ದರು.


Click it and Unblock the Notifications











