For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ: ವಿದೇಶಿ ಯುವಕನ ಜೊತೆ ಕನ್ನಡ ನಟಿ ಸ್ನೇಹಾ ಮದುವೆ

  |

  'ಜೋಶ್', 'ಕೃಷ್ಣ ಲೀಲಾ', 'ಆಕೆ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಸ್ನೇಹಾ ಆಚಾರ್ಯ ಮದುವೆ ನಡೆದಿದೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಸ್ನೇಹಾ ಆಚಾರ್ಯ, ಮೂರನೇ ವಾರ ಔಟ್ ಆಗಿದ್ದರು. ಇದೀಗ ವಿದೇಶಿ ಹುಡುಗನ ಜೊತೆಗೆ ಸ್ನೇಹಾ ಆಚಾರ್ಯ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದೆ.

  ನವೆಂಬರ್ 25 ರಂದು ಬೆಂಗಳೂರಿನ ಸಿರಿ ಕನ್ವೆನ್ಷನ್ ಹಾಲ್ ನಲ್ಲಿ ಸ್ನೇಹಾ ಆಚಾರ್ಯ-ರಾಯನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನವೆಂಬರ್ 24 ರಂದು ಸಂಜೆ ಆರತಕ್ಷತೆ ನಡೆದಿದ್ದು, ನವೆಂಬರ್ 25 ರಂದು ಮುಂಜಾನೆ 5:25ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನಡೆದಿದೆ.

  ಅಂದ್ಹಾಗೆ, ಸ್ನೇಹಾ ಆಚಾರ್ಯ ಮತ್ತು ರಾಯನ್ ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸಪ್ತ ಸಾಗರಗಳನ್ನು ದಾಟಿರುವ ಇವರಿಬ್ಬರ ಪ್ರೇಮ್ ಕಹಾನಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ. ಮುಂದೆ ಓದಿರಿ...

  ಯಾರು ಈ ರಾಯನ್.?

  ಯಾರು ಈ ರಾಯನ್.?

  ನ್ಯೂಯಾರ್ಕ್ ಮೂಲದವರಾದರೂ ರಾಯನ್ ಕೆಲಸ ಮಾಡುತ್ತಿರುವುದು ಬೆಂಗಳೂರಿನಲ್ಲಿ. ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ರಾಯನ್ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅವರಿಗೆ ಸ್ನೇಹಾ ಆಚಾರ್ಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಇದೀಗ ಇಬ್ಬರೂ ಹಸೆಮಣೆ ಏರಿದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ಸ್ನೇಹ ಆಚಾರ್ಯ ಹೆಚ್ಚು ದಿನ ಇರೋದು ಡೌಟು.?'ಬಿಗ್ ಬಾಸ್' ಮನೆಯೊಳಗೆ ಸ್ನೇಹ ಆಚಾರ್ಯ ಹೆಚ್ಚು ದಿನ ಇರೋದು ಡೌಟು.?

  ಇಬ್ಬರ ನಡುವೆ ಪ್ರೀತಿ ಮೂಡಿದ್ದು ಹೇಗೆ.?

  ಇಬ್ಬರ ನಡುವೆ ಪ್ರೀತಿ ಮೂಡಿದ್ದು ಹೇಗೆ.?

  ವೃತ್ತಿಯಲ್ಲಿ ಸ್ನೇಹಾ ಆಚಾರ್ಯ ಡ್ಯಾನ್ಸರ್. ಮುಂಬೈನಲ್ಲಿ ನೃತ್ಯ ಸಂಯೋಜಕಿ ಆಗಿರುವ ಸ್ನೇಹಾ ಆಚಾರ್ಯ, ಗೋವಿಂದಾ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾಗೆ ಕೊರಿಯೋಗ್ರಫಿ ಮಾಡುವ ತಂಡದಲ್ಲಿ ಇದ್ದಾರೆ. ಸ್ನೇಹಾ ಆಚಾರ್ಯ ಅವರ ನೃತ್ಯ ನೋಡಿ ರಾಯನ್ ಕ್ಲೀನ್ ಬೌಲ್ಡ್ ಆಗಿದ್ದರಂತೆ.

  'ಬಿಗ್ ಬಾಸ್' ಮನೆಯಲ್ಲಿ ಮೂರು ವಾರ ಇರಲು ಮಾತ್ರ ಬಂದಿದ್ರಾ ಸ್ನೇಹಾ ಆಚಾರ್ಯ.?'ಬಿಗ್ ಬಾಸ್' ಮನೆಯಲ್ಲಿ ಮೂರು ವಾರ ಇರಲು ಮಾತ್ರ ಬಂದಿದ್ರಾ ಸ್ನೇಹಾ ಆಚಾರ್ಯ.?

  ಪ್ರಪೋಸ್ ಮಾಡಿದ ರಾಯನ್

  ಪ್ರಪೋಸ್ ಮಾಡಿದ ರಾಯನ್

  ಸ್ನೇಹಾ ಆಚಾರ್ಯಗಾಗಿ ನಿಗದಿಗಿಂತ ಹೆಚ್ಚು ಸಮಯ ಬೆಂಗಳೂರಿನಲ್ಲೇ ಕಳೆದಿದ್ದಾರೆ ರಾಯನ್. ಅಲ್ಲದೇ, ಸ್ನೇಹಾಗೆ ಪ್ರಪೋಸ್ ಮಾಡಿದ್ದು ಕೂಡ ರಾಯನ್. ಹೀಗಾಗಿ, ರಾಯನ್ ಪ್ರೀತಿಗೆ ಸಮ್ಮತಿ ನೀಡಿ ಸ್ನೇಹಾ ಆಚಾರ್ಯ ಮದುವೆ ಆಗಿದ್ದಾರೆ.

  ಫಾರೀನ್ ಹುಡುಗ ರಾಯನ್ ಜೊತೆ ಬಿಗ್ ಬಾಸ್ ಸ್ನೇಹಾಗೆ ಲವ್ ಆಗಿದ್ದೇಗೆ.?ಫಾರೀನ್ ಹುಡುಗ ರಾಯನ್ ಜೊತೆ ಬಿಗ್ ಬಾಸ್ ಸ್ನೇಹಾಗೆ ಲವ್ ಆಗಿದ್ದೇಗೆ.?

  ಮರಳಿ 'ಬಿಗ್ ಬಾಸ್'ಗೆ ಬರ್ತಾರಾ ಸ್ನೇಹಾ.?

  ಮರಳಿ 'ಬಿಗ್ ಬಾಸ್'ಗೆ ಬರ್ತಾರಾ ಸ್ನೇಹಾ.?

  ಮದುವೆ ಮೊದಲೇ ಫಿಕ್ಸ್ ಆಗಿದ್ದಕ್ಕೋ ಏನೋ.. ಮೂರು ವಾರಗಳಲ್ಲೇ ಸ್ನೇಹಾ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದುಬಿಟ್ಟರು. ಇದೀಗ ಮದುವೆ ಮುಗಿದಿದೆ. ವೈಲ್ಡ್ ಕಾರ್ಡ್ ಎಂಟ್ರಿ ಸ್ನೇಹಾಗೆ ಸಿಗುತ್ತಾ.? ನೋಡಬೇಕು.

  English summary
  Bigg Boss Kannada 6 Contestant Sneha Acharya marries Rayan. Have a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X