For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಕ್ಟಿಂಗ್ ಕೋರ್ಸ್ ಶುರು ಮಾಡಿದ ಅಕ್ಷತಾ.!

  |
  Bigg Boss Kannada Season 6: ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಕ್ಟಿಂಗ್ ಕೋರ್ಸ್ ಶುರು ಮಾಡಿದ ಅಕ್ಷತಾ.!

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು-ಸುದ್ದಿ ಮಾಡಿದ್ದು ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್. ಇವರಿಬ್ಬರ Intense ಫ್ರೆಂಡ್ ಶಿಪ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈ ನಡುವೆ ಅಕ್ಷತಾ ಪಾಂಡವಪುರ ರವರಲ್ಲಿನ ನಟನೆಯ ಪ್ರತಿಭೆಯನ್ನೂ ಜನ ಗುರುತಿಸಿದ್ದರು.

  ಅದಾಗಲೇ, ಅಭಿನಯದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದ ಅಕ್ಷತಾ ಪಾಂಡವಪುರ, 'ಬಿಗ್ ಬಾಸ್' ಮನೆಯೊಳಗೂ 'ಉತ್ತಮ ನಟಿ' ಪ್ರಶಸ್ತಿ ಪಡೆದಿದ್ದರು. ಇದೀಗ 'ಬಿಗ್ ಬಾಸ್' ಮುಗಿದ್ಮೇಲೆ, ನಟಿ ಅಕ್ಷತಾ ಆಕ್ಟಿಂಗ್ ಕೋರ್ಸ್ ಆರಂಭಿಸಿದ್ದಾರೆ.

  ರಿಯಾಲಿಟಿ ಶೋಗೆ ಹೋಗಿ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟ ಅಕ್ಷತಾ.!

  'ಐ ಆಮ್ ಆನ್ ಆಕ್ಟರ್' ಹೆಸರಿನಲ್ಲಿ ಅಕ್ಷತಾ ಪಾಂಡವಪುರ ಅಭಿನಯ ತರಬೇತಿ ಶುರು ಮಾಡಿದ್ದಾರೆ. ಇದು ಮೂರು ತಿಂಗಳ ತರಬೇತಿ ಆಗಿದ್ದು, ವಾರ-ವಾರಾಂತ್ಯದಲ್ಲಿ ಬ್ಯಾಚ್ ಪ್ರಕಾರ ಟ್ರೇನಿಂಗ್ ಕೊಡಲಿದ್ದಾರೆ. ಬ್ಯಾಚ್ ನಲ್ಲಿ ಹತ್ತು ಜನರಿಗೆ ಮಾತ್ರ ಅವಕಾಶ ಇದ್ದು, ಅಕ್ಷತಾ ಪಾಂಡವಪುರ ಸೇರಿದಂತೆ ರಂಗಭೂಮಿ ಕಲಾವಿದರು ಅಭಿನಯ ತರಬೇತಿ ಹೇಳಿಕೊಡಲಿದ್ದಾರೆ.

  ಕವಿತಾ ಹೊರಗೆ ಬಂದ್ಮೇಲೆ ಕಪಾಳಕ್ಕೆ ಹೊಡೆಯುವೆ ಎಂದು ಗುಡುಗಿದ ಅಕ್ಷತಾ.! ಯಾಕೆ.?

  ಅಂದ್ಹಾಗೆ, 'ಬಿಗ್ ಬಾಸ್' ಮುಗಿದ್ಮೇಲೆ ಅಕ್ಷತಾ ಪಾಂಡವಪುರಗೆ ಸಿನಿಮಾ ಮತ್ತು ಸೀರಿಯಲ್ ಗಳಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದ್ರೆ, ಯಾವುದಕ್ಕೂ ಅಕ್ಷತಾ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

  English summary
  Bigg Boss Kannada 6 fame Akshata Pandavapura starts acting course.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X