''ಆಡಿದ ಮಾತನ್ನು ಉಳಿಸಿಕೊಳ್ಳುವೆ'' ಎಂದ ನವೀನ್ ಸಜ್ಜು: ಯಾವ ವಿಚಾರಕ್ಕೆ.?
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ವೀಕ್ಷಕರ ಪಾಲಿಗೆ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದವರು ಗಾಯಕ ನವೀನ್ ಸಜ್ಜು. ಟಾಪ್ 2 ಹಂತದವರೆಗೂ ಸಲೀಸಾಗಿ ಬಂದ ನವೀನ್ ಸಜ್ಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಗೆಲ್ಲುವ ವಿಶ್ವಾಸ ಹೊಂದಿದ್ದ ನವೀನ್ ಸಜ್ಜು ಕೊನೆಯ ಕ್ಷಣದಲ್ಲಿ ಎಡವಿ ಬಿದ್ದರು.
ಒಂದು ವೇಳೆ 'ಬಿಗ್ ಬಾಸ್' ಗೆದ್ದರೆ, ಬಂದ ಬಹುಮಾನ ಹಣದಲ್ಲಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವೆ ಎಂದು ಈ ಹಿಂದೆ ನವೀನ್ ಸಜ್ಜು ಹೇಳಿಕೊಂಡಿದ್ದರು. ಹಾಗೆಯೇ ತಮಗಾಗಿ ಒಂದು ಸ್ಟುಡಿಯೋ ಕೂಡ ಮಾಡಿಕೊಳ್ಳುವುದು ಅವರ ಬಯಕೆಯಾಗಿತ್ತು.
ಆದರೆ ನವೀನ್ ಸಜ್ಜು 'ಬಿಗ್ ಬಾಸ್' ಗೆಲ್ಲಲಿಲ್ಲ. ಸ್ಟುಡಿಯೋ ಮಾಡೋದಕ್ಕೆ ಕಿಚ್ಚ ಸುದೀಪ್ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ದಾರೆ. ಅಲ್ಲಿಗೆ ನವೀನ್ ರವರ ಒಂದು ಬಯಕೆ ಈಡೇರಿತು. ಮತ್ತೊಂದು..?
'ಬಿಗ್ ಬಾಸ್' ಗೆಲ್ಲದಿದ್ದರೂ, ಒಂದಲ್ಲ ಒಂದು ದಿನ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವೆ ಎಂದಿದ್ದಾರೆ ಗಾಯಕ ನವೀನ್ ಸಜ್ಜು.

''ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ವಿಷಯದಲ್ಲಿ ನನಗೆ ಸತೀಶ್ ನೀನಾಸಂ ಸ್ಫೂರ್ತಿ. 'ಬಿಗ್ ಬಾಸ್' ಗೆದ್ದರೆ ಬಂದ ಬಹುಮಾನ ಹಣದಿಂದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆ. ಆದ್ರೆ ನಾನು 'ಬಿಗ್ ಬಾಸ್' ಗೆಲ್ಲಲಿಲ್ಲ. ಆದ್ರೂ ಪರವಾಗಿಲ್ಲ. ನಾನು ಆಡಿದ ಮಾತನ್ನು ಉಳಿಸಿಕೊಳ್ಳುವೆ. ಮುಂದೊಂದು ದಿನ ಹಳ್ಳಿಗಳನ್ನು ದತ್ತು ಪಡೆಯುವೆ'' ಎಂದು ಸಂದರ್ಶನವೊಂದರಲ್ಲಿ ನವೀನ್ ಸಜ್ಜು ಹೇಳಿದ್ದಾರೆ.
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಮೇಲೆ ಹೊಸ ಹುರುಪಿನಲ್ಲಿರುವ ನವೀನ್ ಸಜ್ಜು ಆಸೆಗಳು ಈಡೇರಲಿ ಎಂಬುದು ಅಭಿಮಾನಿಗಳ ಆಶಯ.


Click it and Unblock the Notifications











