ಸದ್ಯದಲ್ಲೇ 'ಬಿಗ್ ಬಾಸ್' ವಿನ್ನರ್ ಶಶಿ ಹೀರೋ ಆದರೆ ಅಚ್ಚರಿ ಪಡಬೇಡಿ.!
ನೋಡಲು ಸ್ಮಾರ್ಟ್ ಅನ್ ಹ್ಯಾಂಡ್ಸಮ್ ಆಗಿ ಕಾಣುವ ಶಶಿಕುಮಾರ್ ರೈತ ಅಂದ್ರೆ ಮೊದಮೊದಲು ಯಾರೂ ನಂಬಲೇ ಇಲ್ಲ. ತಮ್ಮ ವೃತ್ತಿ ಬಗ್ಗೆ ಶಶಿ ಹೇಳಿಕೊಂಡ ಮೇಲೆ ಎಲ್ಲರೂ ಹಾಟ್ ಫಾರ್ಮರ್, ಆಧುನಿಕ ರೈತ ಅಂತಲೇ ಕರೆಯಲು ಶುರುಮಾಡಿದರು.
ಕೃಷಿ ವಿಭಾಗದಲ್ಲಿ ಎಂಎಸ್ಸಿ ಮಾಡಿರುವ ಶಶಿಕುಮಾರ್ ಅದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಪಾರ್ಟ್ ಟೈಮ್ ನಲ್ಲಿ ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದಾರೆ.
ನಟನೆಯಲ್ಲಿ ಆಸಕ್ತಿ ಹೊಂದಿರುವ ಶಶಿಕುಮಾರ್ 'ಬಿಗ್ ಬಾಸ್ ಕನ್ನಡ 6' ವಿನ್ನರ್ ಆದ್ಮೇಲೆ ಗಾಂಧಿನಗರದಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಶಶಿ ರವರನ್ನು ಹೀರೋ ಮಾಡಲು ಕೆಲವು ನಿರ್ಮಾಪಕರು ಮುಂದೆ ಬಂದಿದ್ದಾರಂತೆ. ಶಶಿ ಮತ್ತು ಕವಿತ ಗೌಡ ಕಾಂಬಿನೇಷನ್ ನಲ್ಲಿ ಚಿತ್ರ ಮಾಡುವ ಬಗ್ಗೆಯೂ ಕೆಲವರು ಮಾತುಕತೆ ನಡೆಸಿದ್ದಾರಂತೆ. ಆದರೆ ಯಾವುದಕ್ಕೂ ಇನ್ನೂ ಶಶಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಕೃಷಿ ಮತ್ತು ನಟನೆ ಎರಡನ್ನು ಬ್ಯಾಲೆನ್ಸ್ ಮಾಡುವೆ ಎಂದಿರುವ ಶಶಿ ಸದ್ಯ ಉತ್ತಮ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದಾರೆ. ತಮಗೆ ಸರಿಹೊಂದುವ ಕಥೆ ಸಿಕ್ಕರೆ ಖಂಡಿತ ಆಕ್ಟ್ ಮಾಡುವುದಾಗಿ ಶಶಿ ತಿಳಿಸಿದ್ದಾರೆ.
ಒಟ್ನಲ್ಲಿ, ಸದ್ಯದಲ್ಲೇ 'ಬಿಗ್ ಬಾಸ್ ಕನ್ನಡ 6' ವಿನ್ನರ್ ಶಶಿ ಹೀರೋ ಆಗಿರುವ ಸುದ್ದಿ ನಿಮ್ಮ ಕಿವಿಗೆ ಬಿದ್ದರೆ ಅಚ್ಚರಿ ಪಡಬೇಡಿ.


Click it and Unblock the Notifications











