For Quick Alerts
  ALLOW NOTIFICATIONS  
  For Daily Alerts

  ಕಿಡ್ನಾಪ್ ಕೇಸ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿ ಸುನಾಮಿ ಕಿಟ್ಟಿ ಅರೆಸ್ಟ್ !

  By Naveen
  |
  ಕಿಡ್ನಾಪ್ ಕೇಸ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿ ಸುನಾಮಿ ಕಿಟ್ಟಿ ಅರೆಸ್ಟ್ ! | Filmibeat Kannada

  ಕನ್ನಡದ ಕೆಲವು ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಹಾಗೂ 'ಬಿಗ್ ಬಾಸ್' ಕಾರ್ಯಕ್ರಮ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ. ಕಿಡ್ನಾಪ್ ಮತ್ತು ಅರ್ಮಸ್ ಆಕ್ಟ್ ಅಡಿಯಲ್ಲಿ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

  ಬಾರ್ ಸಪ್ಲೇಯರ್ ಗಿರೀಶ್ ಎಂಬಾತ ನನ್ನು ಕಿಡ್ನಾಪ್ ಮಾಡಿ ಸುನಾಮಿ ಕಿಟ್ಟಿ ಅಂಡ್ ಗ್ಯಾಂಗ್ ಚಿತ್ರ ಹಿಂಸೆ ಕೊಟ್ಟಿದ್ದರು. ಅಲ್ಲದೆ ಪಾಯಿಂಟ್ ಬ್ಲಾಕ್ ನಲ್ಲಿ ಗನ್ ಇಟ್ಟು ಗಿರೀಶ್ ಗೆ ಜೀವ ಬೆದರಿಕೆ ಹಾಕಿದ್ದರು. ಸುನಾಮಿ ಕಿಟ್ಟಿ ಸ್ನೇಹಿತ ಸುನಿಲ್ ಪತ್ನಿ ತೌಶೀಕ್ ಎಂಬಾತ ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದು ಯಾರು ಸುನಿಲ್ ಪತ್ನಿಯ ಪ್ರಿಯಕರ ಎಂದು ತಿಳಿದು ಕೊಳ್ಳಲು ಮತ್ತು ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಲು ಪ್ಲಾನ್ ಮಾಡಿದ್ದರು.

  ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

  ಫೆಬ್ರವರಿ 28ಕ್ಕೆ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಅಂಡ್ ರೆಸ್ಟೋರೆಂಟ್ ಗೆ ಸುನಿಲ್ ಪತ್ನಿ ಮತ್ತು ಪ್ರಿಯಕರ ತೌಶೀಕ್ ಊಟಕ್ಕೆ ಬರುತಿದ್ದರು. ಈ ವೇಳೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ನನ್ನೆ ಸುನಿಲ್ ಪತ್ನಿಯ ಪ್ರಿಯಕರ ಎಂದು ಕಿಡ್ನಾಪ್ ಮಾಡಿದ್ದರು. ಈ ವೇಳೆ ಬಾರ್ ನಿಂದ ಬಿಲ್ ಕೊಡದೆ ಗಡಿಬಿಡಿಯಾಗಿ ತೌಶೀಕ್ ಪರಾರಿಯಾಗಿದ್ದ. ನಂತರ ಗಿರೀಶನನ್ನು ಹೊರಮಾವು ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು. ಫೋನ್ ಮಾಡಿ ತೌಶೀಕ್ ನನ್ನು ಕರೆಸಿ ಬಿಲ್ ಕೊಡುವಂತೆ ಕೇಳಿದ್ದರು.

  ಬಳಿಕ ಗಿರೀಶ್ ಗೊರಗುಂಟೆ ಪಾಳ್ಯ ಸಿಗ್ನಲ್ ಬಳಿಗೆ ಬರುವುದಾಗಿ ತೌಶೀಕ್ ಗೆ ತಿಳಿಸಿದ್ದ. ತೌಶೀಕ್ ನನ್ನು ಗೊರಗುಂಟೆ ಪಾಳ್ಯ ಸರ್ಕಲ್ ನಿಂದ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ತೋಟದ ಮನೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಾಕುವಿನಿಂದ ತೌಶೀಕ್ ಎದೆ ಮತ್ತು ತೊಡೆ ಭಾಗಕ್ಕೆ ಸುನಾಮಿ ಕಿಟ್ಟಿ ಮತ್ತು ಸುನೀಲ್ ಟೀಮ್ ಇರಿದಿದ್ದರು. ಅಂದಹಾಗೆ, ಜ್ಞಾನ ಭಾರತಿ ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಸುನಾಮಿ ಕಿಟ್ಟಿ ಯೋಗೇಂದ್ರ ಮತ್ತು ಅರ್ಜುನ್ ನನ್ನು ಬಂದಿಸಿದ್ದಾರೆ. ಸುನಿಲ್ ಗಾಗಿ ಶೋಧ ನಡೆಸಿದ್ದಾರೆ.

   ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕ ಬಂಧನ! ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕ ಬಂಧನ!

  English summary
  Bigg boss reality show famous artist Tsunami kitty has been arrested in Kidnap case by Jnana bharati police. He was allegedly kidnapped and tortured named girish, a bar supplier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X