ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು; ದಯಾಮರಣ ನೀಡಿ ಎಂದಿದ್ದ ಜಯಶ್ರೀ

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಗತಿ ಲೇ ಔಟ್ ನಲ್ಲಿರುವ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಯಶ್ರೀ ರಾಮಯ್ಯ ಶವ ಪತ್ತೆಯಾಗಿದೆ.

Recommended Video

Jayashree ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ Rekha Rani | Filmibeat Kannada

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಜಯಶ್ರೀ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜಯಶ್ರೀ ಕಳೆದ ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಜಯಶ್ರೀ ಈಗಾಗಲೇ ಅನೇಕ ಭಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಕಳೆದ ಕೆಲವು ತಿಂಗಳ ಹಿಂದೆಯಷ್ಟೆ 'ಈ ಜಗತ್ತಿಗೆ ಗುಡ್ ಬೈ ಹೇಳುತ್ತಿದ್ದೀನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಆತಂಕ ಪಡುವಂತೆ ಮಾಡಿದ್ದರು.

ಜಯಶ್ರೀ ಪೋಸ್ಟ್ ನೋಡಿ ಗಾಬರಿಯಾಗಿದ್ದ ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮತ್ತೆ ಫೇಸ್ ಬುಕ್ ಲೈವ್ ಬಂದು 'ನಾನು ಕ್ಷೇಮವಾಗಿದ್ದೀನಿ' ಎಂದು ಹೇಳಿದ್ದರು. ಜಯಶ್ರೀ ಮಾತು ಕೇಳಿ ಎಲ್ಲರೂ ಸ್ನೇಹಿತರು ನಿಟ್ಟುಸಿರುಬಿಟ್ಟಿದ್ದರು.

ತೀವ್ರ ಖಿನ್ನತೆ ಕಾಡುತ್ತಿದೆ ಎಂದಿದ್ದ ಜಯಶ್ರೀ

ತೀವ್ರ ಖಿನ್ನತೆ ಕಾಡುತ್ತಿದೆ ಎಂದಿದ್ದ ಜಯಶ್ರೀ

ಎಲ್ಲವೂ ಸರಿಹೋಯಿತು ಎನ್ನುವಷ್ಟೊತ್ತಿಗೆ ಜಯಶ್ರೀ, ಮತ್ತೆ ಫೇಸ್‌ಬುಕ್‌ನಲ್ಲಿ ಕೆಲವು ನಿಮಿಷ ಲೈವ್ ಬಂದು, ತನಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ಆದರೆ ತೀವ್ರ ಖಿನ್ನತೆ ಕಾಡುತ್ತಿದೆ. ತಮ್ಮ ಬದುಕಿನಲ್ಲಿ ಕೆಟ್ಟ ಅನುಭವ ಆಗಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ತಮಗೆ ದಯಾಮರಣ ನೀಡಿ ಎಂದು ಕೇಳಿಕೊಂಡಿದ್ದರು. ಈ ವಿಡಿಯೋ ಬಳಿಕ ಮತ್ತೊಂದು ಪೋಸ್ಟ್ ಕೂಡ ಹಾಕಿದ್ದರು.

ನನಗೆ ಮೋಸ ಆಗಿದೆ, ಸಾವು ಬೇಕು ಎಂದಿದ್ದ ಜಯಶ್ರೀ

ನನಗೆ ಮೋಸ ಆಗಿದೆ, ಸಾವು ಬೇಕು ಎಂದಿದ್ದ ಜಯಶ್ರೀ

'ನಾನು ಇದನ್ನು ಪಬ್ಲಿಸಿಟಿಗಾಗಿ ಮಾಡುತ್ತಿಲ್ಲ. ನನಗೆ ಆರ್ಥಿಕ ಸಹಾಯದ ಅಗತ್ಯವಿಲ್ಲ. ಸುದೀಪ್ ಸರ್ ಅವರಿಂದ ಒಂದು ರೂಪಾಯಿಯನ್ನೂ ನಿರೀಕ್ಷಿಸುತ್ತಿಲ್ಲ. ನನಗೆ ಬೇಕಾಗಿರುವುದು ಒಂದೇ ನನ್ನ ಸಾವು. ತುಂಬಾ ಖಿನ್ನತೆಯಲ್ಲಿದ್ದೇನೆ, ಕುಟುಂಬದ ಸಮಸ್ಯೆಗಳನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಆರ್ಥಿಕವಾಗಿ ಚೆನ್ನಾಗಿಯೇ ಇದ್ದೇನೆ. ಆದರೆ ನನಗೆಲ್ಲ ಮೋಸ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆಗಬಾರದ ಘಟನೆ ಆಗಿದೆ. ಅದನ್ನು ಮರೆಯಲು ಆಗುತ್ತಿಲ್ಲ' ಎಂದಿದ್ದರು.

ನಾನೊಬ್ಬಳು ಲೂಸರ್, ನಾನು ಹುಚ್ಚಿ ಎಂದಿದ್ದ ನಟಿ

ನಾನೊಬ್ಬಳು ಲೂಸರ್, ನಾನು ಹುಚ್ಚಿ ಎಂದಿದ್ದ ನಟಿ

'ನಾನೊಬ್ಬಳು ಲೂಸರ್. ನಾನು ಹುಚ್ಚಿ, ನಾನು ಸಾಯಬೇಕು ಎಂದುಕೊಂಡಿದ್ದೇನೆ. ನಾನು ಬಯಸುತ್ತಿರುವುದು ಒಂದೇ, ನನಗೆ ದಯಾಮರಣ ನೀಡಿದರೆ ಸಾಕು. ನಾನು ಆರಾಮಾಗಿ ಇರುತ್ತೇನೆ. ನನಗೆ ದಯಾಮರಣ ನೀಡಿ. ನಾನು ಒಳ್ಳೆಯ ಹುಡುಗಿ ಅಲ್ಲ. ಪ್ಲೀಸ್ ಪ್ಲೀಸ್ ಎಂದು ಅವರು ಕಣ್ಣೀರಿಟ್ಟಿದ್ದರು'

ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ

ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ

ಜಯಶ್ರೀ ಅನೇಕ ಬಾರಿ ಆತ್ಮಹತ್ಯೆ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಜಯಶ್ರೀ ಅವರಿಗೆ ಸ್ನೇಹಿತರು ಧೈರ್ಯ ತುಂಬಿದ್ದರು. ಆದರೆ ಕುಟುಂಬದ ಸಮಸ್ಯೆಯಿಂದ ಬಳಲುತ್ತಿದ್ದ ಜಯಶ್ರೀ ಆ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಜಯಶ್ರೀ ಸುಮಾರು ಒಂದು ವರ್ಷದಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವ ಮಾಹಿತಿ ಕೇಳಿಬಂದಿದೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

More from Filmibeat

English summary
Actress And Bigg Boss Fame Jayashree Ramaiah Requested for Mercy killing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X