ನಿವೇದಿತಾ ಗೌಡ ಮತ್ತೊಂದು ರೀಲ್ ಔಟ್; "ಈ ಬಾರಿ ತುಂಬಾ ಉದ್ದ ಆಯ್ತು ಡ್ರೆಸ್" ಎಂದ ನೆಟ್ಟಿಗರು!
ನಿವೇದಿತಾ ಗೌಡ ವಿಚ್ಚೇದನ ಬಳಿಕ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಪ್ರತಿ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ತನ್ನ ಪೋಸ್‌ಗೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿವೆ ಅಂತ ಗೊತ್ತಿದ್ದರೂ ಅದ್ಯಾವುದಕ್ಕೂ ನಿವೇದಿತಾ ಗೌಡ ತಲೆಕೆಡಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಬಿಟ್ಟಿದ್ದಾರೆ.,
ಸಾಂಸಾರಿಕ ಜೀವನದಿಂದ ಮುಕ್ತಿ ಪಡೆದ ಬಳಿಕ ಸಿನಿಮಾ, ರಿಯಾಲಿಟಿ ಶೋ, ಮಾಡಲಿಂಗ್ ಅಂತ ಬ್ಯುಸಿಯಾಗಿದ್ದಾರೆ. ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಬಾಯ್ಸ್ Vs ಗರ್ಲ್ಸ್' ರಿಯಾಲಿಟಿ ಶೋನಲ್ಲಿಯೂ ನಿವೇದಿತಾ ಗೌಡ ಭಾಗವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಸಿನಿಮಾದಲ್ಲಿ ನಟಿಸಿ ಸುದ್ದಿಯಾಗಿದ್ದರು.

ಡಿವೋರ್ಸ್ ಬಳಿಕ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಕೆಲವರು ನಿವೇದಿತಾ ಗೌಡರಿಂದಲ್ಲೇ ಚಂದನ್ ಶೆಟ್ಟಿ ವಿಚ್ಚೇದನ ಪಡೆಯುವುದಕ್ಕೆ ಮುಂದಾಗಿದ್ದರು ಎಂದು ಟೀಕೆಗಳನ್ನು ಮಾಡಿದ್ದರು. ಆದರೆ, ನಿವೇದಿತಾ ಇದ್ಯಾವುದರ ಬಗ್ಗೆನೂ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ಲಾಮರ್ ಬೊಂಬೆಯ ಅವತಾರವೆತ್ತಿ ನೆಟ್ಟಿಗರ ಕಣ್ಣು ಕುಕ್ಕುವಂತೆ ರೀಲ್ಸ್ ಮಾಡಿ ಅದನ್ನು ಪೋಸ್ಟ್ ಮಾಡುತ್ತಿದ್ದಾರೆ. ಈಗ ಮಿನಿ ಸ್ಕರ್ಟ್‌ನಲ್ಲಿ ಮತ್ತೊಂದು ರೀಲ್ಸ್ ಹಾಕಿದ್ದಾರೆ. ಅದಕ್ಕೆ ನೆಟ್ಟಿಗರು ಏನೆಲ್ಲ ಕಾಮೆಂಟ್ ಮಾಡಿದ್ದಾರೆ ನೋಡಿ.
ನಿವೇದಿತಾ ಗೌಡಗೆ ಸೋಶಿಯಲ್ ಮೀಡಿಯಾ ಕ್ರೇಜ್ ತುಂಬಾನೇ ಇದೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ದಿನಕ್ಕೊಂದು ರೀಲ್ಸ್ ಮಾಡಿ ಹಾಕುತ್ತಾರೆ. ಇಲ್ಲ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ರೀಲ್ಸ್ ಹಾಗೂ ಫೋಟೊಗಳನ್ನು ನೋಡುವುದಕ್ಕೆ ಅಂತಾನೇ ಒಂದಿಷ್ಟು ಅಭಿಮಾನಿ ಬಳಗವಿದೆ. ಇನ್ನು ಕೆಲವರು ಟೀಕೆ ಮಾಡುವುದಕ್ಕೆ ಅಂತಾನೇ ರೀಲ್ಸ್ ನೋಡುತ್ತಾರೆ. ಅದರಲ್ಲೂ ಮಿನಿ ಫ್ರಾಕ್ಸ್ ತೊಟ್ಟು ಕ್ಯಾಮರಾ ಮುಂದೆ ಬಂದರಂತೂ ಮುಗಿದೇ ಹೋಯ್ತು.
ಇಂದು (ಮಾರ್ಚ್ 25) ನಿವೇದಿತಾ ಹಳದಿ, ನೀಲಿ ಮಿಶ್ರಿತ ಮಿನಿ ಫ್ರಾಕ್ ಅನ್ನು ಧರಿಸಿ ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ್ದರು. ಸ್ಲೋ ಮೋಷನ್‌ನಲ್ಲಿ, ನಾನಾ ಭಂಗಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಭರಪೂರ ಲೈಕ್ಸ್ ಹರಿದು ಬರುತ್ತಿವೆ. ನಿವೇದಿತಾ ಗೌಡ ವಿಡಿಯೋವನ್ನು ಟೀಕಿಸುತ್ತಲೇ ಕೇವಲ ಮೂರು ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದಾರೆ.
ಇನ್ನು ನಿವೇದಿತಾ ಗೌಡ ರೀಲ್ಸ್‌ಗಿಂತ ಅದಕ್ಕೆ ಮಾಡಿರುವ ಕಾಮೆಂಟ್‌ಗಳು ಓದುವುದಕ್ಕೆ ಸಾಕಷ್ಟು ಮಂದಿ ಆಸಕ್ತಿ ತೋರುವುದು ಇದೆ. ಕೆಲವರು ನಿವೇದಿತಾ ಗೌಡ ಸೌಂದರ್ಯವನ್ನು ಹಾಡಿ ಹೊಗಳುತ್ತಾರೆ. ಮೆಚ್ಚುಗೆಯನ್ನು ಸೂಚಿಸುತ್ತಾರೆ. ಮತ್ತೆ ಕೆಲವರು ಕೆಟ್ಟ ಪದಗಳನ್ನು ಬಳಸಿ ಟೀಕೆಗಳನ್ನು ಮಾಡುತ್ತಾರೆ. ಅದರಲ್ಲೂ ಹೀಗೆ ಮಿನಿ ಸ್ಕರ್ಟ್ ಧರಿಸಿ ರೀಲ್ಸ್ ಮಾಡಿದರಂತೂ ಮುಗಿದೇ ಹೋಯ್ತು. ಕಾಮೆಂಟ್‌ಗಳು ಓದುವುದಕ್ಕೂ ಕಷ್ಟ. ಆದರೂ ಇದ್ಯಾವುದಕ್ಕೂ ಬಗ್ಗದ ನಿವೇದಿತಾ ತನ್ನಿಷ್ಟದಂತೆ ರೀಲ್ಸ್ ಮಾಡುತ್ತಿದ್ದಾರೆ.
ಹಾಗಂತ ನಿವೇದಿತಾ ಕೇವಲ ಮಿನಿ ಸ್ಕರ್ಟ್‌ನಲ್ಲಿ, ಮಾಡರ್ನ್ ಲುಕ್‌ನಲ್ಲಷ್ಟೇ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಸೀರೆಯುಟ್ಟು ರೀಲ್ಸ್ ಮಾಡುತ್ತಾರೆ. ಆಗ ಅತೀ ಹೆಚ್ಚು ಪಾಸಿಟಿವ್ ಕಾಮೆಂಟ್‌ಗಳು ಬರುತ್ತವೆ. ಅದೇ ಬೋಲ್ಡ್ ಲುಕ್ ಕೊಟ್ಟರೆ ಮಾತ್ರ ನೆಟ್ಟಿಗರ ಕಣ್ಣುಗಳು ಕೆಂಪಾಗುತ್ತವೆ. ವಿಚ್ಚೇದನದ ಬಳಿಕ ನಿವೇದಿತಾ ವಿದೇಶಿ ಪ್ರವಾಸ ಮಾಡಿದ್ದರು. ಅಲ್ಲಿಂದ ಇವರ ರೀಲ್ಸ್‌ಗೆ ಅತೀ ಹೆಚ್ಚು ಬೇಡಿಕೆ ಬಂದಿದೆ. ಅದೆಷ್ಟೇ ಮಂದಿ ನೆಗೆಟಿವ್ ಕಾಮೆಂಟ್ ಮಾಡಿದ್ದರೂ, ಇವರನ್ನು ಇಷ್ಟ ಪಟ್ಟು ಹೊಗಳಿ ಕಾಮೆಂಟ್ ಮಾಡುವವರಿಗೇನು ಕಮ್ಮಿಯಿಲ್ಲ.


Click it and Unblock the Notifications











