ಸೋಶಿಯಲ್ ಮೀಡಿಯಾದ ಕಾಂಟ್ರವರ್ಸಿಯಲ್ ಸ್ಟಾರ್ ಆಸ್ಪತ್ರೆಗೆ ದಾಖಲು? ಸೋನು ಗೌಡಗೆ ಏನಾಯ್ತು?
ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದಿಷ್ಟು ವಿವಾದಗಳಿಂದ ಜನಪ್ರಿಯರಾಗಿದ್ದ ಸೋನು ಗೌಡ, ಕಳೆದ ಬಾರಿಯ ಬಿಗ್‌ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟು ಮತ್ತಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.
ಟಿಕ್‌ಟಾಕ್ ರೀಲ್ಸ್ ಮಾಡಿಯೇ ಫೇಮಸ್ ಆಗಿದ್ದ ನಟಿ ಈಗ ಇನ್‌ಸ್ಟಾಗ್ರಾಂನಲ್ಲೂ ತಮ್ಮ ಫೋಟೊಶೂಟ್ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕಾರು ಅಪಘಾತದಲ್ಲಿ ಸೋನುಗೌಡ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ಸೋನುಗೌಡ ಚಲಾಯಿಸುತ್ತಿದ್ದ ಕಾರು ಅಪಾರ್ಟ್‌ಮೆಂಟ್ ಒಂದರ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಸೋನುಗೌಡಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಘಟನೆ ಹೇಗೆ ನಡೀತು ಅನ್ನುವ ಬಗ್ಗೆ ಸದ್ಯ ಸ್ಪಷ್ಟ ಮಾಹಿತಿ ಇಲ್ಲ. ಈಗಾಗಲೇ ವರದಿಯಾಗಿರುವ ಪ್ರಕಾರ, ಸೋನು ಗೌಡ ಕಾರು ಬೆಂಗಳೂರಿನ ಗೊಲ್ಲರ ಪಾಳ್ಯ ಹೊಸಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಪಿಲ್ಲರ್‌ಗೆ ಗುದ್ದಿದ್ದಾರೆ. ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.
ಇನ್ನೊಂದು ವರದಿ ಪ್ರಕಾರ, ಸೋನು ಗೌಡ ಹೊಸದಾಗಿ ಕಾರು ಕಲಿಯುತ್ತಿದ್ದರು. ಹೀಗಾಗಿ ಸೋದರನ ಶಿಫ್ಟ್ ಕಾರನ್ನು ತಾವೇ ಚಲಾಯಿಸುವಾಗ ಗಾಬರಿಯಲ್ಲಿ ಬ್ರೇಕ್ ತುಳಿಯುವ ಬದಲು ಎಕ್ಸಿಲೇಟರ್ ತುಳಿದಿದ್ದಾರೆ. ಇದರ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಎನ್ನಲಾಗಿದೆ. ಸದ್ಯ ಸೋನು ಗೌಡ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಹಿಂಬಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಸೋನು ಗೌಡ ಬೇಗ ಹುಷಾರಾಗಿ ಬರಲಿ ಅಂತ ಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ಇತ್ತೀಚೆಗೆ ತಮ್ಮದೊಂದು ಪ್ರಮೋಷನಲ್ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಆ ಬಳಿಕ ಮತ್ತೆ ಆಕ್ಟಿವ್ ಆಗಿಲ್ಲ. ಹೀಗಾಗಿ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿದ್ದಾರೆ.
ಸೋನು ಗೌಡ ಬಿಗ್‌ಬಾಸ್ ಕನ್ನಡ ಓಟಿಟಿಗೆ ಎಂಟ್ರಿ ಕೊಟ್ಟಾಗ ನೆಟ್ಟಿಗರ ಟೀಕೆಗೆ ಒಳಗಾಗಿದ್ದರು. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸೋನುಗೌಡ ತಮ್ಮ ಆಟವನ್ನು ಮುಂದುವರೆಸಿದ್ದರು. ಆದರೆ, ಬಿಗ್‌ಬಾಸ್ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಡುವಲ್ಲಿ ವಿಫಲರಾಗಿದ್ದರು. ಬಿಗ್‌ಬಾಸ್ ಓಟಿಟಿಯಿಂದ ಹೊರಬರುತ್ತಿದ್ದಂತೆ ಸೋನುಗೌಡ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆಕ್ಟಿವ್ ಆಗಿದ್ದರು.
ಆಗಾಗ ಸೋಶಿಯಲ್ ಮೀಡಿಯಾ ಹಾಟ್ ಆಗಿ ಕಾಣಿಸಿಕೊಂಡು ಕೆಲವರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಒಟ್ನಲ್ಲಿ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದ್ದ ಸೋನುಗೌಡ ಕಾರು ಅಪಘಾತದಿಂದ ಸುದ್ದಿಯಲ್ಲಿದ್ದಾರೆ.


Click it and Unblock the Notifications











