ಜೀವನೋಪಾಯಕ್ಕೆ 'ಕ್ಯಾಂಟೀನ್' ಶುರು ಮಾಡಿದ್ದ ಪ್ರಿಯಾಗೆ 'ಭೀಮ ಗೆಲುವು' ತುಂಬಾನೇ ಅವಶ್ಯಕವಾಗಿತ್ತು- ಅಕ್ಷತಾ ಪಾಂಡವಪುರ...!
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಇದಕ್ಕೆ ಪ್ರಿಯಾ ಶಠಮರ್ಷಣ ಸದ್ಯದ ಅತ್ಯುತ್ತಮ ಉದಾಹರಣೆ.
ಹೌದು, ಪ್ರಿಯಾ ಶಠಮರ್ಷಣ .. ಸಲಗ ವಿಜಯ್ ಕುಮಾರ್ ನಿರ್ದೇಶನದ ಭೀಮ ಚಿತ್ರದ ಇನ್ಸ್‌ಪೆಕ್ಟರ್ ಗಿರಿಜಾ. ಭೀಮ ಚಿತ್ರವನ್ನು ನೋಡಿದವರು ಇವರ ಅಭಿನಯಕ್ಕೆ ಮನ ಸೋಲದೇ ಇರಲಾರರು. ಇವತ್ತು ಪ್ರಿಯಾ ಹೋದಲ್ಲಿ.. ಬಂದಲ್ಲಿ.. ಜನ ಇವರನ್ನು ಗುರುತು ಹಿಡಿಯುತ್ತಾರೆ. ಸೆಲ್ಪಿ ಕ್ಲಿಕಿಸಿಕೊಳ್ಳುತ್ತಾರೆ. ಇನ್ನೂ ಚಿತ್ರರಂಗದಲ್ಲಿ ಕೂಡ ಇವರಿಗೆ ಈಗ ಬೇಡಿಕೆ ಬಂದಿದೆ. ಹಾಗಂಥ ಇದೆಲ್ಲವೂ ಏಕಾಏಕಿ ಆಗಿಲ್ಲ. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಪ್ರಿಯಾ ಅವರಿಗೆ ಈ ನೇಮು, ಫೇಮು ಸಿಕ್ಕಿಲ್ಲ. ಇಂತಹದ್ದೊಂದು ದಿನಕ್ಕೆ ವರ್ಷಾನುವರ್ಷಗಳಿಂದ ಪ್ರಿಯಾ ಕಾದು ಕುಂತಿದ್ದರು. ಕಳೆದ 15-16 ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು.
ಇಂಥಾ ಪ್ರಿಯಾ ಶಠಮರ್ಷಣ ಇಲ್ಲಿಯವರೆಗೆ ನಡೆದು ಬಂದ ಹಾದಿಯನ್ನು ಬಿಗ್ ಬಾಸ್ ನ ಅಕ್ಷತಾ ಪಾಂಡವಪುರ ಮೆಲುಕು ಹಾಕಿದ್ಧಾರೆ. ಪ್ರಿಯಾ ಪಾಲಿಗೆ ಭೀಮ ಅಳಿವು ಉಳಿವಿನ ಪ್ರಶ್ನೆಯಾಗಿತ್ತು ಎಂದಿದ್ಧಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾದ ಲೇಖನ ಬರೆದುಕೊಂಡಿರುವ ಅಕ್ಷತಾ, ಬಡವರ ಮಕ್ಕಳು ಬೆಳೆಯಬೇಕು ಅಲ್ಲ ಬೆಳೆಸಬೇಕು ಎಂಬುದನ್ನು ಸಾಬೀತು ಮಾಡಿದ ದುನಿಯಾ ವಿಜಿ ಸರ್‌ಗೆ ಅನಂತ ಅನಂತ ಧನ್ಯವಾದಗಳು ಎಂದಿದ್ದಾರೆ.
ಭೀಮ ಪಕ್ಕಾ ಮಾಸ್ ಸಿನಿಮಾ ಎಂದು ತಮ್ಮ ಲೇಖನ ಶುರು ಮಾಡಿರುವ ಅಕ್ಷತಾ ಪಾಂಡವಪುರ, ನೆನ್ನೆ ಪ್ರಿಯಾಗಾಗಿ ಪ್ರಿಯಾ ಜೊತೆಯಲ್ಲಿಯೇ ಕೂತು ಸಿನಿಮಾ ನೋಡಿ ಬಂದೆ. ಅಂದ ಹಾಗೇ ಪ್ರಿಯ ಈ ಚಿತ್ರದ ಅತಿ ಮುಖ್ಯ ಪಾತ್ರದಲ್ಲಿ ಅಂದ್ರೆ ಇನ್ಸ್ಪೆಕ್ಟರ್ ಗಿರಿಜಾ ಪಾತ್ರದಲ್ಲಿ ಬೆಂಕಿಯ ಕಿಡಿಯಂತೆ ಅಭಿನಯಿಸಿದ್ದಾರೆ. ಇನ್ನೂ ಮಾತಿಗೆ 'ಜೈ ಶ್ರೀರಾಮ್' ಎನ್ನುವ ಆಕೆಗೆ 'ಜೈ ಕಿಸಾನ್' ಎನ್ನುವ ನನ್ನ ಪ್ರತಿಕ್ರಿಯೆಯ ನಡುವೆಯೂ ಮಾನವತವಾದಿ ಅನ್ನೋದನ್ನು ಹೇಳದೆ ಇರಲು ಸಾಧ್ಯವಿಲ್ಲ ಎಂದಿರುವ ಅಕ್ಷತಾ, 2010ರಲ್ಲಿನ ಭೇಟಿಯನ್ನೂ ನೆನಪು ಮಾಡಿಕೊಂಡಿದ್ದಾರೆ.

2010ದಲ್ಲಿ ಮೈಸೂರಿನ ನಟನದಲ್ಲಿ ಭೇಟಿ ಆದ ಪ್ರಿಯ ನಂತರ 2015 ರಲ್ಲಿ RR ನಗರದಲ್ಲಿ ಬದುಕು ಕಟ್ಟಿಕ್ಕೊಳ್ಳಲು ಬಂದ ನಾವು ಅಕ್ಕಪಕ್ಕದವರಾಗಿಯೇ ಬಿಟ್ಟೆವು..! ಅಷ್ಟೇನಾ?ಎಷ್ಟೋ ರಂಗಕಾರ್ಮಿಗಳು ಅಕ್ಕಪಕ್ಕದಲ್ಲಿಯೇ ಇದ್ದರೂ ಪ್ರಿಯಳಂತಹ individual expressive ಹುಡುಗಿ, hardworker, helping Nature ಇರುವ ಈಕೆ ಹತ್ತಿರ ಆಗಿದ್ದು .. ಈ ಮದ್ಯೆ ಕಲಾರಂಗದಲ್ಲಿನ ಅವಕಾಶಗಳ ಹುಡುಕಾಟದಲ್ಲಿಯೇ ಜೀವನಕ್ಕಾಗಿ ಹೋಟೆಲ್ ಶುರು ಮಾಡಿದ್ವಿ ಜೊತೆ ಜೊತೆ ಅಲ್ಲಾ... ನನ್ನದು ಸ್ಟುಡಿಯೋ ಕಿಚನ್ ಆಕೆಯದು ಕ್ಯಾಂಟೀನ್..! ಪಾತ್ರೆ, ರೇಷನ್, ಊಟ ದ ಡಬ್ಬಿ, ಜೊತೆಗೆ ರೆಸಿಪಿ ಎಲ್ಲವನ್ನೂ ಶೇರ್ ಮಾಡ್ಕೊಂಡು ಬದುಕುವ ಕಲೆಯನ್ನು ವಿಜೃಂಭಿಸುತ್ತಾ ಇದ್ವಿ.. ಉಪ್ಪು ಹುಳಿ ಖಾರದ ಹಾಗೆ ಅಳು ನಗು ಮನಸ್ತಾಪ ಎಲ್ಲವೂ ಇತ್ತು.. ನಂತರ? ಅದೇ ಕೋವಿಡ್ ಮಧ್ಯಂತರ... ಆ ಮೇಲೆ ಸೀರಿಯಲ್ ಸಣ್ಣಪುಟ್ಟ ಪಾತ್ರ ಅಂತಾ struggle ಗೂ ಇಳಿದಳು ಪ್ರಿಯಾ ಎಂದಿದ್ದಾರೆ ಅಕ್ಷತಾ ಪಾಂಡವಪುರ.

ಇನ್ನೂ ಭೀಮಕ್ಕೆ ಆಯ್ಕೆಯಾದ ದಿನದಿಂದಲೂ ಏನು ಎತ್ತ ಹೇಗೆ? ಎಂಬುದನ್ನು ಮಾತಾಡಿಕ್ಕೊಳ್ತಾ ಇದ್ವಿ... ಈ ಭೀಮ ಚಿತ್ರ ಪ್ರಿಯಳಿಗೆ ಎಷ್ಟು ಅತ್ಯವಶ್ಯ ಎಂಬುದು ನನಗೆ ಗೊತ್ತಿತ್ತು ಹಾಗಾಗಿ ಭೀಮ ಬರುವ ದಾರಿಯನ್ನೇ ನಾನೂ ಕಾಯುತ್ತಿದ್ದೆ..ಒಬ್ಬ ಕಲಾವಿದನಿಗೆ break ಸಿಗುತ್ತೆ ಅಂತರಲ್ಲ ಹಾಗೆ ಸಿಕ್ಕಿದ್ದೇ ಈ ಭೀಮ ಚಿತ್ರ! ತೆರೆಯಮೇಲೆ ನನ್ನ ಗೆಳತಿಯನ್ನು ನೋಡಿ ಬಂದ ಸಂತೋಷದ ಕಣ್ಣೀರಿನ ಜೊತೆಗೆ ಆಕೆಯ ಪಟ್ಟ ಶ್ರಮಕ್ಕೆ ಇದು ಪ್ರತಿಫಲ ಎಂಬಂತೆ ಇನ್ನಷ್ಟು ಕಣ್ಣೀರು ಜಾರಿತು ಎಂದು ತಮ್ಮ ಮನದ ಮಾತು ಹಂಚಿಕೊಂಡಿರುವ ಅಕ್ಷತಾ ಬಡವರ ಮಕ್ಕಳು ಬೆಳೆಯಬೇಕು ಅಲ್ಲ ಬೆಳೆಸಬೇಕು ಎಂಬುದನ್ನು ಸಾಬೀತು ಮಾಡಿದ ದುನಿಯಾ ವಿಜಿ ಸರ್ ಗೆ ಅನಂತ ಆನಂದ ಧನ್ಯವಾದಗಳು ಎಂದಿದ್ಧಾರೆ.ಜೈ ಹೋ Priya Shatamarshan.. ಹೀಗೆ blockbuster ಕೊಡ್ತಾ ಇರು ಎನ್ನುವುದರ ಮೂಲಕ ತಮ್ಮ ಲೇಖನ ಕೊನೆಗೊಳಿಸಿದ್ಧಾರೆ.


Click it and Unblock the Notifications











