'ಹಳ್ಳಿಕಾರ್ ಒಡೆಯ'ನ ಹುಟ್ಟುಹಬ್ಬ ಯಾವ ಸೂಪರ್‌ಸ್ಟಾರ್‌ಗೂ ಕಮ್ಮಿಯಿಲ್ಲ; ಕೇಕ್.. ಹಾರ ಸಂಭ್ರಮ ಬಲು ಜೋರು!
ಕನ್ನಡಿಗರು ಸಿನಿಮಾ ಕ್ಷೇತ್ರದ ಸೂಪರ್‌ಸ್ಟಾರ್‌ಗಳ ಹುಟ್ಟುಹಬ್ಬವನ್ನು ನೋಡಿದ್ದಾರೆ. ದೂರದ ಊರುಗಳಿಂದ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಕೇಕ್, ಹೂವಿನ ಹಾರ ತಂದು ಸಂಭ್ರಮಿಸುತ್ತಾರೆ. ಇನ್ನೂ ಒಂದು ಹಂತಕ್ಕೆ ಹೋಗಿ ಪಟಾಕಿ ಸಿಡಿಸಿ ಖುಷಿ ಪಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೆಂಚುರಿ ಸ್ಟಾರ್ ಶಿವಣ್ಣ, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ಅನ್ನೋದನ್ನು ನೋಡಿದ್ದೇವೆ.
ಆದರೆ, ಅದೇ ರೇಂಜ್‌ನಲ್ಲಿ 'ಹಳ್ಳಿಕಾರ್ ಒಡೆಯ' ವರ್ತೂರು ಸಂತೋಷ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆಚರಣೆ ಮಾಡಿದ್ದಾರೆ. ದೂರದ ಊರುಗಳಿಂದ ಬಂದು ರಾತ್ರೋ ರಾತ್ರಿ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಇಷ್ಟೇ ಅಲ್ಲ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಕಟ್ಟಿದ್ದಾರೆ.

ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಹೋಗಿಬಂದ್ಮೇಲೆ 'ಹಳ್ಳಿಕಾರ್ ಒಡೆಯ' ವರ್ತೂರು ಸಂತೋಷ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಪ್ರತಿ ದಿನ ಅವರ ಮನೆಯಲ್ಲಿ ಅಭಿಮಾನಿಗಳು ದಂಡೇ ಸೇರುತ್ತಿದೆ. ಈಗ ಹುಟ್ಟುಹಬ್ಬದ ಸಂಭ್ರಮದಲ್ಲಂತೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ವರ್ತೂರು ಸಂತೋಷ್ ಬರ್ತ್‌ಡೇಗೆ ಸುಮಾರು ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಉತ್ತರ ಕರ್ನಾಟಕದ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ವರ್ತೂರು ಸಂತೋಷ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಬೇರೆ ಬೇರೆ ಊರುಗಳಿಂದ ಬರುತ್ತಿರುವುದರಿಂದ ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬಾದುಷಾ, ಟೊಮೆಟೋ ಬಾತ್, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯರಾತ್ರಿಯೊಂದ ಸಂಭ್ರಮ ಜೋರಾಗಿದ್ದು, ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಗಳಿವೆ.
ವರ್ತೂರು ಸಂತೋಷ್ ಹುಟ್ಟುಹಬ್ಬಕ್ಕೆ ಬಿಗ್‌ಬಾಸ್ ಸ್ಪರ್ಧಿ ಅವಿನಾಶ್ ಬಂದು ವಿಶ್ ಮಾಡಿದ್ದಾರೆ. ಇದೇ ವೇಳೆ ಬಿಗ್‌ಬಾಸ್‌ನಲ್ಲಿ ತನಗೆ ನೆರವಾಗಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ನಾನು ಬಿಗ್‌ಬಾಸ್‌ನಲ್ಲಿ ಇದ್ದಾಗ ಪ್ರತಿ ದಿನಾನೂ ಒಂದು ಮಾತು ಹೇಳುತ್ತಿದ್ದರು. ಅವಿನಾಶ್ ನಾವಿಲ್ಲ ಸ್ಪರ್ಧಿಗಳಾಗಿ ಬಂದಿದ್ದೀವಿ. ನ್ಯಾಯಯುತವಾಗಿ ಆಡೋಣ. ನೀವು ಯಾವುದಕ್ಕೂ ಅಗ್ರೆಸಿವ್ ಆಗಿ ಆಡುವುದು ಬೇಡ. ಪ್ರೀತಿಯಿಂದ ಎಲ್ಲರನ್ನೂ ನೋಡಿಕೊಂಡು ಒಂದೇ ಮಾತು ಹೇಳಿದ್ದು, ಹೊರಗಡೆ ಇರುವ ಜನರಿಗೆ ಒಂದು ಮೆಸೇಜ್ ಕೊಡೋಣ ಅಂತಾನೇ ಹೇಳಿದ್ದರು." ಎಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ತನಗೆ ಅಂತ ಇಟ್ಟುಕೊಂಡಿದ್ದ ಹಣ್ಣುಗಳನ್ನು ಅವಿನಾಶ್‌ಗೆ ಕೊಡುತ್ತಿದ್ದರಂತೆ. ಪ್ರತಿ ಹಂತದಲ್ಲೂ ಅವರಿಗೆ ಗೈಡ್ ಮಾಡುತ್ತಿದ್ದರಂತೆ. ಈ ಮಾತನ್ನು ಅನಿನಾಶ್ ಹೇಳಿಕೊಂಡಿದ್ದಾರೆ. "ಬಿಗ್‌ಬಾಸ್ ಮನೆಯಲ್ಲಿ ಊಟ ಎಲ್ಲ ಎಷ್ಟು ಕಷ್ಟವಿತ್ತು ಗೊತ್ತಾ? ನಾನು 50 ದಿನಗಳ ನಂತ್ರ ಬಂದೋನು. ಆ ವೇಳೆ ನನಗೆ ಊಟವನ್ನೆಲ್ಲ ಹೇಗೆ ಇಟ್ಟುಕೊಳ್ಳಬೇಕು ಅನ್ನೋದು ಗೊತ್ತಿರಲಿಲ್ಲ. ಅವರಿಗೆ ಅಂತ ಇಟ್ಟುಕೊಂಡಿದ್ದ ಹಣ್ಣುಗಳನ್ನು ನನಗೆ ಕೊಡುತ್ತಿದ್ದರು. ಅದನ್ನು ಅವರ ಹುಟ್ಟುಹಬ್ಬದಂದು ಹೇಳಿಕೊಳ್ಳುವ ಅವಕಾಶ ಸಿಕ್ಕಿದೆ." ಎಂದಿದ್ದಾರೆ.


Click it and Unblock the Notifications











