Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!
ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅಕ್ಟೋಬರ್ 25 ರಿಂದ ಪ್ರತಿದಿನ ರಾತ್ರಿ 9 ರಿಂದ 10 ಘಂಟೆಯವರೆಗೆ ಪ್ರಸಾರವಾಗಲಿದೆ.
ಇದೀಗ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ಇರ್ತಾರೆ?, ಅನ್ನೋ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗಿದೆ.[ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]
ಅಂದಹಾಗೆ ಈ ಬಾರಿ ಸ್ಪರ್ಧಾರ್ಥಿಗಳನ್ನು ಆಯ್ಕೆಗೊಳಿಸುವಾಗ ಕಲರ್ಸ್ ಕನ್ನಡ ವಾಹಿನಿಗೆ ತುಂಬಾ ಸವಾಲುಗಳು ಎದುರಾಗಿತ್ತಂತೆ. ಎಂದಿನಂತೆ ಈ ಬಾರಿಯೂ ಗ್ಲಾಮರ್ ತಾರೆಯರು, ಜಗಳಗಂಟಿಯರು, ಜಗಳಗಂಟರು, ಮಾತುಗಾರರು, ಮುದ್ದುಮುಖದವರು ಹೀಗೆ ತುಂಬಾ ತರದ ಕ್ಯಾರೆಕ್ಟರ್ ಗಳನ್ನು ನೀವು ಬಿಗ್ ಬಾಸ್ ಮನೆಯಲ್ಲಿ ನೋಡಬಹುದು ಸ್ವಾಮಿ.
ಈ ಮೊದಲು ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ, ನಿನಾಸಂ ಸತೀಶ್, ಜೆ.ಕೆ, ನಿರೂಪಕಿ ಶೀತಲ್ ಶೆಟ್ಟಿ, ರಾಧ ಹಿರೇಗೌಡರ್ ಮುಂತಾದವರು ಹೆಸರು ಕೇಳಿ ಬಂದಿತ್ತಾದರೂ ಅವರು ನೋ ಅಂದಿದ್ದಾರೆ.[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]
ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವವರ ಕೆಲವು ಹೆಸರುಗಳು ಬಹುತೇಕ ಖಚಿತಗೊಂಡಿದ್ದು, ಅವರು ಯಾರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

ಹುಚ್ಚ ವೆಂಕಟ್
ಹೌದು ಅನೇಕರು ಊಹಿಸಿದ ಹಾಗೆ, ಕಲರ್ಸ್ ಕನ್ನಡ ವಾಹಿನಿ 'ಯೂಟ್ಯೂಬ್ ಸ್ಟಾರ್' ಹುಚ್ಚ ವೆಂಕಟ್ ರಿಗೆ 'ಬಿಗ್ ಬಾಸ್-3'ನಲ್ಲಿ ಭಾಗವಹಿಸುವಂತೆ ಆಫರ್ ನೀಡಿದೆ. ಅಂತೂ ಬಾರಿ ಬಿಗ್ ಬಾಸ್-3' ಮನೆಯಲ್ಲಿ ನೀವು ವೆಂಕಟನ ಹುಚ್ಚಾಟವನ್ನ ಪ್ರತಿದಿನ ನೋಡಬಹುದು.

ಮೈತ್ರಿಯಾ ಗೌಡ
ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ ಅಂತ್ಹೇಳಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ನಟಿ ಮೈತ್ರಿಯಾ ಗೌಡ ಕೂಡ ಈ ಬಾರಿ 'ಬಿಗ್ ಬಾಸ್' ಮನೆ ಸೇರುವುದು ಬಹುತೇಕ ಖಚಿತ.

ಚಂದನ್
'ಲಕ್ಷ್ಮೀ ಬಾರಮ್ಮ' ಸೀರಿಯಲ್ ಖ್ಯಾತಿಯ ಚಂದನ್ ಗೆ ಕಲರ್ಸ್ ಕನ್ನಡ ವಾಹಿನಿ ಮೂಲಕ 'ಬಿಗ್ ಬಾಸ್-3'ನಲ್ಲಿ ಸ್ಪರ್ಧಿಸುವಂತೆ ಅಧಿಕೃತ ಆಫರ್ ಸಿಕ್ಕಿದೆ. ಇದೀಗ ಚಂದನ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಸುನಾಮಿ ಕಿಟ್ಟಿ
ರಿಯಲ್ ಇಂಡಿಯನ್ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ.

ರ‌್ಯಾಂಬೋ ಬೆಡಗಿ ಮಾಧುರಿ
ಕಾಮಿಡಿ ಕಿಂಗ್ ಶರಣ್ ಜೊತೆ ರ‌್ಯಾಂಬೋ ಚಿತ್ರದಲ್ಲಿ 'ಮನೆ ತನ್ಕ ಬಾರೆ ಮನೆ ತನ್ಕ' ಅಂತ ಡ್ಯುಯೆಟ್ ಹಾಡಿದ್ದ ನಟಿ ಮಾಧುರಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಸಾಧ್ಯತೆ ಇದ್ದು, ಬಹುತೇಕ ಖಚಿತಗೊಂಡಿದೆ.

'ರಾಧಕಲ್ಯಾಣ' ಖ್ಯಾತಿಯ ಕೃತಿಕಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಕಲ್ಯಾಣ' ಧಾರಾವಾಹಿ ಖ್ಯಾತಿಯ ಕೃತಿಕಾ ಈ ಬಾರಿ ಬಿಗ್ ಬಾಸ್ ಮನೆಯ ಕದ ತಟ್ಟಿದ್ದಾರೆ.

'ಟಿವಿ9' ಕನ್ನಡ ರೆಹಮಾನ್ ಹಸೀಬ್
ಕನ್ನಡದ ಖ್ಯಾತ ನ್ಯೂಸ್ ಚಾನಲ್ 'ಟಿವಿ 9 ಕನ್ನಡ'ದ ಫೇಮಸ್ ಸ್ಟಾರ್ ಆಂಕರ್ ರೆಹಮಾನ್ ಹಸೀಬ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಅಂತ ಮಾಹಿತಿ ಇದೆ.['ಬಿಗ್ ಬಾಸ್' ಮನೆ ಕದ ತಟ್ಟುತ್ತಾರಾ ಟಿವಿ 9 ರೆಹಮಾನ್?]

'ನಾಗಮಂಡಲ' ನಟಿ ವಿಜಯಲಕ್ಷ್ಮಿ
ಕನ್ನಡದ ಹಿಟ್ ಚಿತ್ರ 'ನಾಗಮಂಡಲ'ದ ನಾಯಕಿ ನಟಿ ವಿಜಯಲಕ್ಷ್ಮಿ ಅವರನ್ನು ಬಿಗ್ ಬಾಸ್ ತಂಡ ಸಂಪರ್ಕಿಸಿದ್ದು, ಅವರು ಇನ್ನು ಹಸಿರು ನಿಶಾನೆ ಕೊಟ್ಟಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಬರ್ತಾರೋ ಇಲ್ವೋ ಅಂತ ಕಾರ್ಯಕ್ರಮ ಶುರುವಾದ ಮೇಲೆ ನೋಡೋಣ.

ಸದ್ಯಕ್ಕೆ ಚಾಲ್ತಿಯಲ್ಲಿರುವ ಹೆಸರುಗಳು
ಇನ್ನು ಸದ್ಯಕ್ಕೆ ಕನ್ನಡದ ನಟಿ ಶುಭಾಪೂಂಜ, ರೂಪನಟರಾಜ್, ಮಮತಾ ರಾವುತ್, ರಾಕೇಶ್ ಅಡಿಗ, ಮುಂತಾದವರ ಹೆಸರು ಪಟ್ಟಿಯಲ್ಲಿದ್ದು, ಖಚಿತವಾಗಿ ಯಾರೆಲ್ಲಾ ಕಾಣಿಸಿಕೊಳ್ಳುತ್ತಾರೆ ಅಂತ ಇದೇ 25ನೇ ತಾರೀಖಿನಂದು ಕಾರ್ಯಕ್ರಮ ಶುರುವಾದಾಗ ರಿವೀಲ್ ಆಗಲಿದೆ.