ನ್ಯೂಯಾರ್ಕ್‌ನಲ್ಲಿ ಉಕ್ಕಿ ಹರಿದ ನಿವೇದಿತಾ ಗೌಡ ಕನ್ನಡ ಪ್ರೇಮ, ವಿಡಿಯೋ ವೈರಲ್

ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ... ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ. ಯಾರೇ ಕೂಗಾಡಲಿ, ಬಾತ್‌ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಅವರ ಕನ್ನಡ ಪ್ರೇಮದ ಬಗ್ಗೆ ಹಲವರಲ್ಲಿ ಅನುಮಾನ ಇದೆ.

ಯಾಕೆಂದರೆ.. ನಿವೇದಿತಾ ಇಂಗ್ಲಿಷ್ ಹಾಡುಗಳಿಗೆ ಹೆಚ್ಚೆಚ್ಚು ಹೆಜ್ಜೆ ಹಾಕುತ್ತಾರೆ. ಇಂಗ್ಲಿಷ್ ಹೊರತು ಪಡಿಸಿದರೆ ಪರಭಾಷೆಯ ಮೇಲಿರುವ ತಮ್ಮ ಪ್ರೀತಿಯನ್ನು ಹೊರ ಹಾಕುತ್ತಾರೆ. ನಿವೇದಿತಾ ಅವರ ಈ ನಡೆಯಿಂದ ಹಲವು ಬಾರಿ ಅನೇಕರು ಕನ್ನಡದ ಹಾಡುಗಳಿಗೆ ಡ್ಯಾನ್ಸ್ ಮಾಡುವಂತೆ ನಿವೇದಿತಾ ಅವರಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

Bigg Boss Nivedita Gowda Grooves to Kichcha Sudeep s Song in Times Square Fans Go Wild

ಹೀಗೆ ಮಾಡಿಕೊಳ್ಳಲಾದ ಮನವಿಗೆ ಆಗಾಗ ಮನ್ನಣೆಯನ್ನು ನೀಡುವ ನಿವೇದಿತಾ ಗೌಡ ಸದ್ಯ ನ್ಯೂಯಾರ್ಕ್‌ನಲ್ಲಿ ತಮ್ಮ ಕನ್ನಡದ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಹೌದು, ವರ್ಷಕ್ಕೆ ಕಡಿಮೆ ಅಂದರೂ ಎರಡು ಬಾರಿ ಸಪ್ತಸಾಗರದಾಚೆ ತೆರಳುವ ಅಭ್ಯಾಸವನ್ನು ಮಾಡಿಕೊಂಡಿರುವ ನಿವೇದಿತಾ ಗೌಡ ಸದ್ಯ ನ್ಯೂಯಾರ್ಕ್‌ನಲ್ಲಿ ಬಿಡಾರ ಹೂಡಿದ್ದಾರೆ. ತಮ್ಮ ಸ್ನೇಹಿತೆ ಪ್ರತಿಭಾ ಗೌಡ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದ ತಮ್ಮ ಅಭಿಮಾನಿಗಳಿಗೆ ದಿನನಿತ್ಯದ ಅಪ್‌ಡೇಟ್‌ಗಳನ್ನು ಕೂಡ ಕೊಡುತ್ತಿದ್ಧಾರೆ.

ಇದೇ ಸಮಯದಲ್ಲಿ ನ್ಯೂಯಾರ್ಕ್​​ನ ಟೈಮ್ಸ್​​ ಸ್ಕ್ವೇರ್​ ನಲ್ಲಿ ನಿವೇದಿತಾ ಗೌಡ ಡ್ಯಾನ್ಸ್‌ ಮಾಡಿದ್ದಾರೆ. ಅದು ಕಿಚ್ಚ ಸುದೀಪ್ ಅಭಿನಯಿಸಿ ನಿರ್ದೇಶಿಸಿದ ಕಿಚ್ಚ ಸುದೀಪ್ ಅವರ ಕೆಂಪೇಗೌಡ ಚಿತ್ರದ ಹಾಡಿಗೆ ಎನ್ನುವುದು ವಿಶೇಷ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಿವೇದಿತಾ ಗೌಡ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್​ ನಲ್ಲಿ ನನ್ನ ಇಷ್ಟದ ಹಾಡಿಗೆ ಹೆಜ್ಜೆ ಹಾಕುತ್ತಿದ್ದೇನೆ ಎಂದು ಹೇಳಿದ್ಧಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಂದಿನಂತೆ ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. 18 ಗಂಟೆಯಲ್ಲಿ 37,000ಕ್ಕೂ ಅಧಿಕ ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕಾಮೆಂಟ್‌ಗಳನ್ನು ನಾವು ಹೇಳುವುದಕ್ಕಿಂತ ನೀವು ಓದಿದ್ರೆ ಚೆಂದ.

ಕೇವಲ ಇದೊಂದೇ ವಿಡಿಯೋ ಅಲ್ಲ ತಮ್ಮ ನ್ಯೂಯಾರ್ಕ್ ಪ್ರವಾಸದ ಇನ್ನೂ ಎರಡು ಮೂರು ವಿಡಿಯೋಗಳನ್ನು ಕೂಡ ನಿವೇದಿತಾ ಗೌಡ ಹಂಚಿಕೊಂಡಿದ್ಧಾರೆ. ಫೋಟೊಗಳನ್ನು ಕೂಡ ಶೇರ್ ಮಾಡಿದ್ಧಾರೆ. ಈ ಎಲ್ಲಾ ವಿಡಿಯೋಗಳು ಸದ್ಯ ಅನೇಕರ ಕಣ್ಮನ ಸೆಳೆಯುತ್ತಿವೆ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಿವೇದಿತಾ ಗೌಡ ಇದೇ ಪ್ರತಿಭಾ ಗೌಡ ಅವರ ಜೊತೆ ''ವಿಯೆಟ್ನಾಂ'' ನಲ್ಲಿದ್ದರು. ತಮ್ಮ ಮೋಜು ಮಸ್ತಿಯ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈ ಪ್ರವಾಸದಲ್ಲಿ ಬಿಗ್ ಬಾಸ್ ಸೀಸನ್ 6ರ ಧನರಾಜ್, ಬಿಗ್ ಬಾಸ್ ಸೀಸನ್ 11ರ ರಜತ್ ಮತ್ತು ಅವರ ಪತ್ನಿ ಅಕ್ಷಿತಾ ಅಣ್ಣ ತಂಗಿ ಧಾರಾವಾಹಿಯ ಅಖಿಲಾ ಪ್ರಕಾಶ್ ಜೊತೆಯಾಗಿದ್ದರು. ವರೈಟಿ ವರೈಟಿ ರೀಲ್ಸ್‌ಗಳನ್ನು ಮಾಡಿ ಎಲ್ಲರೂ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.

ಇನ್ನುಳಿದಂತೆ ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ''ಮುದ್ದು ರಾಕ್ಷಸಿ'' ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ''ಜಿಎಸ್‌ಟಿ'' ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.

More from Filmibeat

English summary
What happened when Bigg Boss's Nivedita Gowda took over Times Square? Find out as she grooves to a Kichcha Sudeep song in this must-see viral video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X